ಸಿಹಿ ರೊಟ್ಟಿಯಿಂದ ಲಡ್ಡುವಿನವರೆಗೆ... ಚಳಿಗಾಲದಲ್ಲಿ ತಯಾರಿಸಿ ಬೆಲ್ಲದ ಈ ಸಿಹಿ ತಿನಿಸು

First Published | Dec 10, 2022, 5:16 PM IST

ಬೆಲ್ಲದ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು (Immunity System) ಹೆಚ್ಚಿಸುವುದಲ್ಲದೆ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತೆ. ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ.   

ಹಾಲಿನೊಂದಿಗೆ ಬೆಲ್ಲ ತಿನ್ನುವುದು ಅಥವಾ ಸಾದಾ ಬೆಲ್ಲವನ್ನು ತಿನ್ನುವುದು ಪ್ರಯೋಜನಕಾರಿ. ಆದರೆ ಅನೇಕ ಜನರು ಅದರ ರುಚಿ ಇಷ್ಟಪಡುವುದಿಲ್ಲ. ನೀವೂ ಅವರಲ್ಲಿ ಒಬ್ಬರಾಗಿದ್ದರೆ, ಅದನ್ನು ನಿರ್ಲಕ್ಷಿಸುವ ಬದಲು, ನೀವು ಬೆಲ್ಲದಿಂದ ತಯಾರಿಸಿದ ಅನೇಕ ರುಚಿಕರವಾದ ವಸ್ತುಗಳನ್ನು ಪ್ರಯತ್ನಿಸಬಹುದು. ಇಂದು ನಾವು ಬೆಲ್ಲದಿಂದ ತಯಾರಿಸಿದ ಅನೇಕ ವಸ್ತುಗಳ ಸುಲಭ ಮತ್ತು ಪರಿಪೂರ್ಣ ಪಾಕ ವಿಧಾನಗಳ ಬಗ್ಗೆ ಒಂದಿಷ್ಟು ಮಾಹಿತಿ ಇದೆ. ಈ ಚಳಿಗಾಲದಲ್ಲಿ ಎಲ್ಲವನ್ನೂ ಟ್ರೈ ಮಾಡಿ ನೋಡಿ.

ಜನರು ಊಟ ಮಾಡಿದ ನಂತರ ಬೆಲ್ಲ ತಿನ್ನೋದನ್ನು ನೀವು ಹೆಚ್ಚಾಗಿ ನೋಡಿರಬಹುದು. ಇದನ್ನು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕಬ್ಬಿನಿಂದ ತಯಾರಿಸಿದ ಬೆಲ್ಲ ಸ್ವಾಭಾವಿಕವಾಗಿ ಸಿಹಿಯಾಗಿದೆ ಮತ್ತು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆಯುರ್ವೇದದ ಹೊರತಾಗಿ, ವೈದ್ಯಕೀಯ ವಿಜ್ಞಾನವು (medical science) ಬೆಲ್ಲವನ್ನು ತಿನ್ನುವುದು ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿ ಎಂದು ವಿವರಿಸಿದೆ. 

Latest Videos


ಆರೋಗ್ಯ ತಜ್ಞರು ಹೇಳುವಂತೆ, ಸಕ್ಕರೆ ಬದಲಿಗೆ ಬೆಲ್ಲ ಸೇವಿಸುವುದು ನಿಮಗೆ ಹೆಚ್ಚು ಪ್ರಯೋಜನಕಾರಿ. ಬೆಲ್ಲ ದೇಹಕ್ಕೆ ಪ್ರತಿದಿನ ಅಗತ್ಯವಿರುವ ವಿವಿಧ ಪೋಷಕಾಂಶಗಳನ್ನು ನೀಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಿದ್ರೆ ಬೆಲ್ಲವನ್ನು ಉಪಯೋಗಿಸಿ ಯಾವೆಲ್ಲಾ ತಿಂಡಿಗಳನ್ನು ಸೇವಿಸಿ, ಚಳಿಗಾಲದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ನೋಡೋಣ. 
 

ಚಳಿಗಾಲದಲ್ಲಿ, ಜನರು ವಿವಿಧ ರೀತಿಯ ಲಡ್ಡುಗಳನ್ನು ತಯಾರಿಸಿ ಅವುಗಳನ್ನು ಸಂಗ್ರಹಿಸುತ್ತಾರೆ. ಎಳ್ಳು ಬೀಜಗಳ ಗುಣದಲ್ಲಿ ಬಿಸಿಯಾಗಿರುತ್ತೆ. ಇದನ್ನು ಬೆಲ್ಲದ ಜೊತೆ ಸೇರಿಸಿ ಲಡ್ಡು ಮಾಡಿ. ಈ ಚಳಿಗಾಲದಲ್ಲಿ ಆರೋಗ್ಯವಾಗಿರಲು, ನೀವು ಅವುಗಳನ್ನು ಸಹ ಸೇವಿಸಬೇಕು.   

ಚಹಾ ಪ್ರಿಯರು ದಿನಕ್ಕೆ ಅನೇಕ ಬಾರಿ ಚಹಾ ಸೇವಿಸುತ್ತಾರೆ, ಆದರೆ ಹೆಚ್ಚಿನ ಸಕ್ಕರೆ ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ, ಆದ್ದರಿಂದ ನೀವು ಬೆಲ್ಲದ ಚಹಾವನ್ನು (jaggery tea) ಪ್ರಯತ್ನಿಸಬಹುದು. ಇದರ ರುಚಿಯೂ ಉತ್ತಮವಾಗಿದೆ ಮತ್ತು ಇದು ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿ.

ಮಖಾನ ಮತ್ತು ಬೆಲ್ಲ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ. ರುಚಿಕರವಾದ ಸಿಹಿ ಮಖಾನಾಗಳನ್ನು ತಯಾರಿಸುವುದು ತುಂಬಾ ಸುಲಭ.  ಅವನ್ನು ಕೇವಲ 10 ನಿಮಿಷಗಳಲ್ಲಿ ತಯಾರಿಸುವ ಮೂಲಕ, ನೀವು ನಿಮ್ಮ ಸಿಹಿ ಆಹಾರದ ಬಯಕೆಗಳನ್ನು ಶಾಂತಗೊಳಿಸಬಹುದು. ಅದಕ್ಕಾಗಿ ಬೆಲ್ಲದ ಸಿರಪ್ (jaggery syrup) ತಯಾರಿಸಿ, ಅದಕ್ಕೆ ರೋಸ್ಟ್ ಮಾಡಿದ ಮಖಾನ ಹಾಕಿ. 

ಚಳಿಗಾಲದಲ್ಲಿ ಋತುಮಾನದ ರೋಗಗಳ ವಿರುದ್ಧ ಹೋರಾಡಲು ಮತ್ತು ದೇಹವನ್ನು ಬೆಚ್ಚಗಿಡಲು ಬೆಲ್ಲದ ಸೇವನೆ ಪ್ರಯೋಜನಕಾರಿ. ಅಂತಹ ಪರಿಸ್ಥಿತಿಯಲ್ಲಿ, ನೀವು ಬೆಲ್ಲ ಹಾಕಿ ಮಾಡಿದ ರುಚಿಯಾದ ರೊಟ್ಟಿಯನ್ನು ಸೇವಿಸಬಹುದು. ಇವು ಆರೋಗ್ಯಕ್ಕೆ ಉತ್ತಮವಾಗಿದೆ ಮತ್ತು ರುಚಿ ಸಹ ಚೆನ್ನಾಗಿರುತ್ತೆ.

click me!