ಅನೇಕ ರೋಗಕ್ಕೆ ರಾಮಬಾಣ ಸೋಂಪು, ಪ್ರಯೋಜನ ತಿಳಿದ್ರೆ ಆಶ್ಚರ್ಯವಾಗ್ತೀರಿ!

First Published | Nov 7, 2020, 4:51 PM IST

ಸೋಂಪನ್ನು ಸಾಮಾನ್ಯವಾಗಿ ದೇಶಾದ್ಯಂತ ಬಳಸಲಾಗುತ್ತದೆ. ಎಲ್ಲೋ ಒಂದು ಮಸಾಲೆ ಆಗಿ, ಕೆಲವೊಮ್ಮೆ ಮೌತ್ ಫ್ರೆಶ್ನರ್ ಆಗಿ, ಕೆಲವೊಮ್ಮೆ ಹೋಮ್ ಮೆಡಿಸಿನ್ ಆಗಿ ಬಳಕೆ ಮಾಡಲಾಗುತ್ತದೆ.  ಏಕೆಂದರೆ ಫೆನ್ನೆಲ್/ ಸೋಂಪು  ಅಂತಹ ಅನೇಕ ಗುಣಗಳನ್ನು ಹೊಂದಿದೆ, ಇದು ದೇಹಕ್ಕೆ ಬಹಳ ಪ್ರಯೋಜನಕಾರಿ. ಇದರಿಂದ ಏನೆಲ್ಲಾ ಉಪಯೋಗ ಇದೆ ಅನ್ನೋದನ್ನು ನೀವು ತಿಳಿದುಕೊಂಡು ಪ್ರತಿದಿನ ಒಂದು ಚಮಚ ಸೋಂಪು ಕಾಳನ್ನು ತಪ್ಪದೆ ಸೇವಿಸಿ... 

ಸೋಂಪು ಒಂದು, ಪ್ರಯೋಜನ ಹಲವು .
ಸೋಂಪನ್ನು ಸಾಮಾನ್ಯ ಜೀವನದಲ್ಲಿ ಅನೇಕ ವಿಧಗಳಲ್ಲಿ ಬಳಸಲಾಗುತ್ತದೆ. ದೇಶಾದ್ಯಂತ ಇದನ್ನು ಮೌತ್ ಫ್ರೆಶ್ನೆರ್ ಆಗಿ ಬಳಸಲಾಗುತ್ತದೆ. ಇದು ಬರಿಯ ಮೌತ್ ಫ್ರೆಶ್ನೆರ್ ಆಗಿ ಕಾರ್ಯನಿರ್ವಹಿಸುವುದಲ್ಲದೆ, ನಿಮ್ಮ ಹೊಟ್ಟೆಯನ್ನು ಸಡಿಲಗೊಳಿಸುತ್ತದೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
Tap to resize

ಸೋಂಪಿನಿಂದ ಚರ್ಮದ ಹೊಳಪುಸೋಂಪು ಬಳಕೆಯು ಚರ್ಮವನ್ನು ಬೆಳಗಿಸಿ ಹೊಳೆಯುವಂತೆ ಮಾಡುತ್ತದೆ . ಸಾಫಿಯಂತಹ ಎಲ್ಲಾ ರಕ್ತ ಶುದ್ಧೀಕರಣ ಟಾನಿಕ್ ಗಳ ಬಗ್ಗೆ ನೀವು ಕೇಳಿರಬಹುದು . ಸಾಫಿ ಯ ಮೂಲ ಸಂಯುಕ್ತ ಸೋಂಪು ಆಗಿದೆ.
ಸೋಂಪಿನ ದೃಷ್ಟಿ ಹೆಚ್ಚಿಸುತ್ತದೆಸೋಂಪು ತಿನ್ನುವುದರಿಂದ ದೃಷ್ಟಿ ಕೂಡ ಸುಧಾರಿಸುತ್ತದೆ. ನೀವು ಬಯಸಿದರೆ, ನೀವು ಅದನ್ನು ಸಕ್ಕರೆ ಕ್ಯಾಂಡಿಯೊಂದಿಗೆ ಸಹ ತೆಗೆದುಕೊಳ್ಳಬಹುದು. ಸೋಂಪಿನ ಉಗಿಸ್ಟೀಮ್ ದೃಷ್ಟಿ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ಬಾಯಿ ದುರ್ವಾಸನೆಯನ್ನು ತೆಗೆದುಹಾಕುತ್ತದೆನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ನಿಯಮಿತವಾಗಿ ಅರ್ಧ ಟೀಸ್ಪೂನ್ ಸೋಂಪು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಅಗಿಯಿರಿ. ಇದನ್ನು ಮಾಡುವುದರಿಂದ ಬಾಯಿಯಿಂದ ಬರುವ ಕೆಟ್ಟ ವಾಸನೆ ನಿಲ್ಲುತ್ತದೆ.
ಅನಿಯಮಿತ ಮುಟ್ಟಿನ ಸಮಯದಲ್ಲಿ ಸೋಂಪಿನಿಂದಾಗುವ ಲಾಭಮುಟ್ಟು ಅನಿಯಮಿತವಾಗಿದ್ದರೆ, ನೀವು ಸೋಂಪು ಸೇವಿಸಬಹುದು. ಬೆಲ್ಲದೊಂದಿಗೆ ಇದನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ. ಸೋಂಪು ಸೇವನೆಯಿಂದ ರಕ್ತದ ಹರಿವಿನಲ್ಲಿ ಬರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ .
ಅಜೀರ್ಣಕ್ಕೆ ಮದ್ದುಸೋಂಪು ಟೀ ಕುಡಿಯುವುದರಿಂದ ಅಜೀರ್ಣಕ್ಕೆ ಪರಿಹಾರ ಸಿಗುತ್ತದೆ, ಅಷ್ಟೇ ಅಲ್ಲದೆ ಫೆನ್ನೆಲ್ ಟೀ ಕುಡಿಯುವುದರಿಂದ ಕೆಮ್ಮು ಕೂಡ ಗುಣವಾಗುತ್ತದೆ.
ಹೃದಯಾಘಾತ ಅಪಾಯಹೌದು ಸೋಂಪು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಸೇವನೆ ಮಾಡುವುದರಿಂದ ಎದೆ ಉರಿ, ಅಜೀರ್ಣ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತತದೆ ಅಲ್ಲದೆ ಹೃದಯದ ಅರೋಗ್ಯ ಚೆನ್ನಾಗಿರುತ್ತದೆ.
ನಿದ್ರೆಗೆ ಪರಿಹಾರನಿದ್ರೆಯ ಸಮಸ್ಯೆ ಕಾಡುತ್ತಿದ್ದರೆ ಪ್ರತಿದಿನ ಸೋಂಪು ಬಳಕೆ ಮಾಡಿ, ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಚೆನ್ನಾಗಿ ನಿದ್ರೆ ಬರುತ್ತದೆ. ಅನೇಕ ಆಯುರ್ವೇದ, ಯುನಾನಿ ವ್ಯವಸ್ಥೆಯಲ್ಲಿ ಸೋಂಪನ್ನು ಬಳಸಲಾಗುತ್ತದೆ.
ಕಣ್ಣು ಊದಿಕೊಳ್ಳುವುದುಸೋಂಪು ಕಾಳಿನ ತಂಪುಕಾರಕ ಗುಣ ಕಣ್ಣುಗಳ ಕೆಳಗಿನ ಭಾಗದಲ್ಲಿ ಊದಿಕೊಳ್ಳಲು ಕಾರಣವಾಗಿರುವ ಅಂಶವನ್ನು ಶಮನಗೊಳಿಸಿ ಕಣ್ಣಿನ ಸಮಸ್ಯೆ ನಿವಾರಿಸಿ ಸರಿಯಾಗುವಂತೆ ಮಾಡುತ್ತದೆ.
ಕೂದಲಿನ ಬೆಳವಣಿಗೆ : ನಾಲ್ಕೈದು ಚಿಕ್ಕ ಚಮಚದಷ್ಟು ಸೋಂಪು ಕಾಳುಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಈ ನೀರನ್ನು ಕೂದಲಿನ ಬುಡಕ್ಕೆ ಹಚ್ಚುತ್ತಿದ್ದರೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ.

Latest Videos

click me!