ಗುಲಾಬ್ ಜಾಮೂನ್ ಅತ್ಯಂತ ಜನಪ್ರಿಯ ಭಾರತೀಯರ ಫೇವರೇಟ್‌ಸ್ವೀಟ್‌ಗಳಲ್ಲಿ ಒಂದಾಗಿದೆ.
ಕೇವಲ 10 ರೂಪಾಯಿ ಮೇರಿ ಗೋಲ್ಡ್ ಬಿಸ್ಕತ್‌ನೊಂದಿಗೆ ಜಾಮೂನ್ ತಯಾರಿಸುವ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:1 ಪ್ಯಾಕೆಟ್ ಮಾರಿಗೋಲ್ಡ್ ಬಿಸ್ಕತ್ತು, 14 ಕಪ್ ಕಾಯಿ ತುರಿ, 2 ಚಿಟಿಕೆ ಬೇಕಿಂಗ್ ಸೋಡಾ, 1-1 2 ಕಪ್ ಸಕ್ಕರೆ, 1 ಕಪ್ ನೀರು, 12 ಟೀಸ್ಪೂನ್ಏಲಕ್ಕಿ ಪುಡಿ, ಗುಲಾಬ್ ಜಾಮೂನ್ ಕರಿಯಲು ತುಪ್ಪಎಣ್ಣೆ.
ಮೊದಲನೆಯದಾಗಿ, ಬಾಣಲೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಸೇರಿಸಿ ಸಿರಪ್ ತಯಾರಿಸಲು ಕುದಿಯಲು ಬಿಡಿ. ಸಕ್ಕರೆಯು ತೆಳುವಾದ ಪಾಕವಾಗುವ ವರೆಗೆ ಕುದಿಸಿ.ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ಪಕ್ಕಕ್ಕೆ ಇರಿಸಿ.
ಮಾರಿ ಗೋಲ್ಡ್ ಬಿಸ್ಕತ್ತುಗಳನ್ನು ಮಿಕ್ಸರ್ನಲ್ಲಿ ಹಾಕಿ ಪುಡಿ ಮಾಡಿದ ನಂತರ ಜರಡಿ ಮಾಡಿ.
ಈ ಪುಡಿಯನ್ನು ದೊಡ್ಡ ಪಾತ್ರೆಯಲ್ಲಿ ಸುರಿಯಿರಿ ಮತ್ತು ತೆಂಗಿನ ತುರಿ, ಅಡಿಗೆ ಸೋಡಾ ಮತ್ತು ಸ್ವಲ್ಪ ಹಾಲು ಸೇರಿಸಿ, ಅದನ್ನು ನಿಧಾನವಾಗಿ ಮಿಕ್ಸ್ ಮಾಡಿ ಮೃದುವಾದ ಹಿಟ್ಟನ್ನು ತಯಾರಿಸಿ.
ಇದರ ನಂತರ, ನಿಮ್ಮ ಕೈಗೆ ಸ್ವಲ್ಪ ತುಪ್ಪ ಸವರಿ ಕೊಂಡು, ಸಣ್ಣ ಉಂಡೆಗಳನ್ನು ಮಾಡಿ
ತುಪ್ಪಎಣ್ಣೆ ಕಾದ ನಂತರ ಈ ಉಂಡೆಗಳನ್ನು ಚಿನ್ನದಬಣ್ಣಕ್ಕೆ ತಿರುಗಿಸುವವರೆಗೆ ಮಧ್ಯಮ ಉರಿಯಲ್ಲಿ ಕರಿದು ಸಿರಪ್‌ನಲ್ಲಿ ಹಾಕಿ.
1 ಗಂಟೆಯಲ್ಲಿ ಗುಲಾಬ್ ಜಾಮೂನ್ ಸಕ್ಕರೆ ಪಾಕವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ.
ನಂತರ ಅದನ್ನು ಬಿಸಿ ಮಾಡಿ ಸವಿಯಿರಿ.