ಬರೀ ವ್ಯಾಯಾಮ ಮಾಡಿದರೆ ಸ್ಲಿಮ್ ಆಗೋಲ್ಲ, ಆಹಾರದೆಡೆಗೆ ಇರಲಿ ಗಮನ!

First Published | Nov 5, 2020, 3:14 PM IST

ನಮ್ಮ ದೇಹವನ್ನು ಸದೃಢವಾಗಿ ಮತ್ತು ಉತ್ತಮವಾಗಿರಿಸಿಕೊಳ್ಳುವುದು ಬಹಳ ಮುಖ್ಯ ಆದರೆ ಅದೇ ಸಮಯದಲ್ಲಿ ಆರೋಗ್ಯವಾಗಿರುವುದು ಸಹ ಮುಖ್ಯವಾಗಿದೆ. ಆಹಾರವು ತಪ್ಪಾದಾಗ ಔಷಧವು ಪ್ರಯೋಜನಕ್ಕೆ ಬರುವುದಿಲ್ಲ, ಆಹಾರವು ಸರಿಯಾಗಿದ್ದಾಗ ಔಷಧಿಯ ಅಗತ್ಯವಿಲ್ಲ. ನಮ್ಮ ದೇಹವನ್ನು ಸ್ಲಿಮ್ ಮಾಡಲು ಇಲ್ಲಿದೆ ನೋಡಿ ಸಲಹೆಗಳು-

ನಿಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಸೂಕ್ಷ್ಮ ಬದಲಾವಣೆಗಳಿಂದ ಯಶಸ್ವಿ ಸ್ಲಿಮ್ಮಿಂಗ್ ಸಾಧಿಸುವ ಸಾಧ್ಯತೆಯಿದೆ. ಅದು ಹೇಗೆ, ಯಾವ ರೀತಿಯ ಆಹಾರ ಸೇವನೆಯಿಂದ ಸ್ಲಿಮ್ ಆಗಿ ಕಾಣಿಸಬಹುದು ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ... ನೀವು ಇದನ್ನ ಚಾಚೂ ತಪ್ಪದೆ ಫಾಲೋ ಮಾಡಿದರೆ ಸಾಕು...
ಕಡಿಮೆ ಮತ್ತು ನಿಧಾನವಾಗಿ ತಿನ್ನಿರಿ: ನಿಮ್ಮ ಹೊಟ್ಟೆ ತುಂಬಿದೆ ಎಂದು ತಿಳಿದುಕೊಳ್ಳಲು ನಿಮ್ಮ ಮೆದುಳು 20 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು. ಈ ಕಾರಣದಿಂದಾಗಿ, ನೀವು ಹೆಚ್ಚು ತಿನ್ನುವ ಮೊದಲು ತಿನ್ನುವುದನ್ನು ನಿಲ್ಲಿಸುವಂತೆ ನೋಡಿಕೊಳ್ಳಬೇಕು. 5 ನಿಮಿಷಗಳಲ್ಲಿ ಪೂರ್ಣ ಊಟವನ್ನು ಖಾಲಿ ಮಾಡುವ ಬದಲು ನೀವು ನಿಧಾನವಾಗಿ ತಿನ್ನುತ್ತಿದ್ದರೆ ಅದು ಸಹಾಯ ಮಾಡುತ್ತದೆ.
Tap to resize

ಯಾವುದೇ ಆಹಾರವನ್ನು ನಿಷೇಧಿಸಬೇಡಿ: ನಿಮ್ಮ ಸ್ಲಿಮ್ಮಿಂಗ್ ಯೋಜನೆಯಿಂದ ವಿಶೇಷವಾಗಿ ನೀವು ಇಷ್ಟಪಡುವ ಆಹಾರವನ್ನು ದೂರವಿಡಬೇಡಿ. ಕಾಲಕಾಲಕ್ಕೆ ಒಂದು ಸಣ್ಣ ಭಾಗವನ್ನು ಆನಂದಿಸಿ. ಆಹಾರವನ್ನು ನಿಷೇಧಿಸುವುದರಿಂದ ನಿಮಗೆ ಆ ಆಹಾರದ ಬಗ್ಗೆ ಹಂಬಲ ಹೆಚ್ಚುವ ಸಾಧ್ಯತೆ ಇದೆ.
ದಿನಕ್ಕೆ ಐದು ಬಾರಿ ತಿನ್ನಿರಿ: ಅನೇಕ ಜನರು ಕ್ಯಾಲೋರಿ ಕಳೆದು ಕೊಳ್ಳಲು ಬೆಳಗಿನ ಉಪಾಹಾರವನ್ನು ತ್ಯಜಿಸಲು ಪ್ರಯತ್ನಿಸುತ್ತಾರೆ. ಇದು ಕೆಲಸ ಮಾಡುವ ಸಾಧ್ಯತೆ ಕಡಿಮೆ, ಯಾಕೆಂದರೆ ಬೆಳಗ್ಗೆ ತಿಂದಿಲ್ಲ ಎಂದು ಅವರು ದಿನದ ಇತರೆಸಮಯಗಳಲ್ಲಿ ಅತಿಯಾಗಿ ತಿನ್ನುವುದನ್ನು ಕಾಣಬಹುದು. ಇದರಿಂದ ದೇಹ ತೂಕ ಹೆಚ್ಚುತ್ತದೆ.
ನೀವು ನಿದ್ದೆ ಮಾಡುವಾಗ ನಿಮ್ಮ ದೇಹವು ಹಲವಾರು ಗಂಟೆಗಳ ಕಾಲ ಆಹಾರವಿಲ್ಲದೆ ಹೋಗುತ್ತದೆ. ಬೆಳಗ್ಗೆ ದಿನವನ್ನು ಪ್ರಾರಂಭಿಸಲು ಶಕ್ತಿಯ ಅಗತ್ಯವಿದೆ. ಪ್ರತಿದಿನ ಐದು ಸಣ್ಣ ಮೀಲ್ಸ್ ಗಳನ್ನು ತಿನ್ನುವ ಮೂಲಕ, ಬೆಳಗಿನ ಉಪಾಹಾರದಿಂದ ಪ್ರಾರಂಭಿಸಿ, ನಿಮ್ಮ ಮೆಟಬೋಲಿಸಂ ಕ್ರಿಯೆಯ ಕಿಚ್ಚನ್ನು ತಣಿಸಿ , ಇದರಿಂದಾಗಿ ತೂಕ ಇಳಿಸಿಕೊಳ್ಳುವುದು ಸುಲಭವಾಗುತ್ತದೆ.
ಹೆಚ್ಚು ನೀರು ಕುಡಿಯಿರಿ: ಅನೇಕ ಜನರು ತಮ್ಮ ದೇಹವು ನಿಜವಾಗಿಯೂ ಬಾಯಾರಿದಾಗ ಆಹಾರಕ್ಕಾಗಿ ಹುಡುಕುತ್ತಾರೆ. ನೀರು ನಿಮ್ಮ ದೇಹದಲ್ಲಿನ ಟಾಕ್ಸಿಕ್ ಅಥವಾ ಬೇಡದ ಅಂಶ ಹೊರಹಾಕುತ್ತದೆ, ಇದರಿಂದ ಸ್ಲಿಮ್ ಆಗಲು ಸಹಾಕಾರಿ. ದಿನಕ್ಕೆ ಕನಿಷ್ಠ 8 ಬಾಟಲಿ ನೀರು ಕುಡಿಯಿರಿ ಮತ್ತು ನೀವು ವಿಶೇಷವಾಗಿ ಸಕ್ರಿಯರಾಗಿದ್ದರೆ ಅಥವಾ ಅದು ಬೇಸಿಗೆಯಾಗಿದ್ದರೆ ಹೆಚ್ಚು ನೀರು ಕುಡಿಯಲು ಪ್ರಯತ್ನಿಸಿ.
ಆಹಾರ ಡೈರಿಯನ್ನು ಇರಿಸಿ: ನೀವು ಹೆಚ್ಚು ತಿನ್ನುವ ಸಾಧ್ಯತೆಯಿರುವಾಗ ನೀವು ಯಾವ ಆಹಾರ ಪಾನೀಯಗಳನ್ನು ಸ್ವಲ್ಪ ಕಡಿಮೆ ಸಮಯ ಸಂದರ್ಭಗಳಲ್ಲಿ ಸೇವಿಸಬೇಕು. ಮತ್ತು ಸಾಕಷ್ಟು ಹಣ್ಣು ಮತ್ತು ಸಸ್ಯಾಹಾರಗಳೊಂದಿಗೆ ವೈವಿಧ್ಯಮಯ ಆಹಾರವನ್ನು ಸೇವಿಸುತ್ತಿದ್ದೀರಾ ಎಂಬುದನ್ನು ನೀವೇ ತಿಳಿದುಕೊಳ್ಳಿ. ನಿಮ್ಮ ಆಹಾರದ ಮೇಲೆ ಗಮನ ಹರಿಸಿದರೆ ಮಾತ್ರ ನೀವು ಬಳುಕುವ ಬಳ್ಳಿಯಂತಾಗಲು ಸಾಧ್ಯ.
ನಿಮಗಾಗಿ ಚೆನ್ನಾಗಿರಿ: ನೀವು ಕೆಟ್ಟ ದಿನವನ್ನು ಹೊಂದಿದ್ದರೆ, ನಿಮ್ಮನ್ನು ದೂಷಿಸಬೇಡಿ. ನೀವು ಎಷ್ಟು ಒಳ್ಳೆಯ ದಿನಗಳನ್ನು ಹೊಂದಿದ್ದೀರಿ ಎಂದು ನಿಮ್ಮನ್ನು ಅಭಿನಂದಿಸಿ ಮತ್ತು ಒಂದು ಕೆಟ್ಟ ದಿನವು ಎಲ್ಲವನ್ನೂ ಹಾಳುಮಾಡುವುದಿಲ್ಲ ಎಂದು ಅರಿತುಕೊಳ್ಳಿ. ಇದರಿಂದ ನಿಮ್ಮ ಆಹಾರ ಕ್ರಮದ ಮೇಲೆಯೂ ಪರಿಣಾಮ ಬೀರುತ್ತದೆ ನೆನಪಿರಲಿ.
ವಾಕಿಂಗ್: ತಪ್ಪದೆ ಪ್ರತಿದಿನ ಒಂದು ಇಪ್ಪತ್ತು ನಿಮಿಷಗಳ ಕಾಲ ವಾಕಿಂಗ್ ಮಾಡಿ, ಮುಂಜಾನೆ ಅಥವಾ ಸಂಜೆ ಇದರಿಂದ ನಿಮ್ಮ ದೇಹ ಫಿಟ್ ಆಗಿರಲು ಸಹಾಯವಾಗುತ್ತದೆ.
ಸ್ವಲ್ಪ ವ್ಯಾಯಾಮ: ಕೊನೆಯದಾಗಿ, ನಿಮ್ಮ ದೇಹವನ್ನು ಕಾಪಾಡಿಕೊಳ್ಳಲು ವ್ಯಾಯಾಮವು ಉತ್ತಮ ಆಯ್ಕೆಯಾಗಿದೆ. ಅದು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಪ್ರತಿದಿನ ತಪ್ಪದೆ ಒಂದು ಅರ್ಧ ಗಂಟೆ ವ್ಯಾಯಾಮ ಮಾಡಿ.

Latest Videos

click me!