ಏಲಕ್ಕಿಯನ್ನು ಅಡುಗೆಗೆ ಸೇರಿಸಿದರೆ ಏನಾಗುತ್ತೆ? ಅತಿಯಾದ್ರೆ ಏನಾಗುತ್ತದೆ? ತಿಳಿಯಲೇಬೇಕು

First Published | Sep 4, 2024, 1:28 PM IST

ಮೊಡವೆಗಳನ್ನು ಹೋಗಲಾಡಿಸುವುದಲ್ಲದೆ, ಏಲಕ್ಕಿಯ ಈ ಅದ್ಭುತ ಗುಣಗಳು ಹಲವರಿಗೆ ತಿಳಿದಿಲ್ಲ. ಅಡುಗೆಗೆ ಸೇರಿಸಿದರೆ ಏನಾಗುತ್ತದೆ ? ಅತಿಯಾದ್ರೆ ಏನಾಗುತ್ತದೆ?  ಎಂದು ತಿಳಿದಿದೆಯೇ?

ಯಾವುದೇ ಅಡುಗೆಗೆ ಸುವಾಸನೆ ತರುವಲ್ಲಿ ಇದಕ್ಕೆ ಸಾಟಿ ಬೇರೆ ಇಲ್ಲ. ಆದರೆ ಅಡುಗೆಯ ರುಚಿ ಹೆಚ್ಚಿಸುವುದಲ್ಲದೆ, ಈ ಏಲಕ್ಕಿ ಹಲವು ಅದ್ಭುತ ಗುಣಗಳನ್ನು ಹೊಂದಿದೆ. ಇದನ್ನು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಏಲಕ್ಕಿ (Cardamom) ಯನ್ನು ಭಾರತದಲ್ಲಿ ಅನೇಕ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಆಹಾರ (Food) ದ ಸುಹಾಸನೆಯನ್ನು ಹೆಚ್ಚಿಸುತ್ತದೆ. ಸಿಹಿ (Sweet) ಯಾಗಿರುವ ಮಸಾಲೆಯುಕ್ತ ಆಹಾರದ ರುಚಿಯನ್ನು ಹೆಚ್ಚಿಸಲು ನಾವು ಹೆಚ್ಚಾಗಿ ಏಲಕ್ಕಿಯನ್ನು ಬಳಸುತ್ತೇವೆ. ನೀವು ಹೆಚ್ಚಿನ ಏಲಕ್ಕಿ ಸೇವನೆ ಮಾಡೋದು ಒಳ್ಳೆಯದಲ್ಲ. ಕೇವಲ 2 ಏಲಕ್ಕಿಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. 

ಚಹಾ ತಯಾರಿಸುವಾಗ ಏಲಕ್ಕಿ ಸೇರಿಸುತ್ತಾರೆ. ಏಲಕ್ಕಿ ಸೇರ್ಪಡೆ ಮಾಡೋದರಿಂದ ಚಹಾ ಪರಿಮಳದ ಜೊತೆಯಲ್ಲಿ ಅದರ ರುಚಿ ಸಹ ಹೆಚ್ಚಾಗುತ್ತದೆ. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ತುಂಬಾ ಪ್ರಯೋಜನಕಾರಿ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಚರ್ಮದ ತುರಿಕೆ ಅಥವಾ ಗಾಯಗಳಿಗೂ ಈ ಏಲಕ್ಕಿ ತುಂಬಾ ಪರಿಣಾಮಕಾರಿ. ಈ ಸಣ್ಣ ಏಲಕ್ಕಿಯನ್ನು ಸೇವಿಸುವುದರಿಂದ ಚರ್ಮದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದಲ್ಲದೆ, ಏಲಕ್ಕಿ ಮೂತ್ರ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಆದ್ದರಿಂದ ಮೂತ್ರ ಸಮಸ್ಯೆ ಇರುವವರು ಏಲಕ್ಕಿ ಸೇವಿಸಬಹುದು.

Tap to resize

ಏಲಕ್ಕಿಯಲ್ಲಿ ಪೊಟ್ಯಾಸಿಯಮ್ (Potasium) ಮತ್ತು ಮೆಗ್ನೀಸಿಯಮ್ (Magnesium) ಇದೆ. ಏಲಕ್ಕಿ ಮಲಬದ್ಧತೆ (Constipation), ಗ್ಯಾಸ್, ಅಸಿಡಿಟಿ (Acidity), ಅಸ್ತಮಾದಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ. ನೆಗಡಿ – ಶೀತದಿಂದ ಬಳಲುವ ಜನರು ಏಲಕ್ಕಿಯನ್ನು ನಿತ್ಯ ಬಳಸಬೇಕು. ಇದು ನೆಗಡಿ ಜೊತೆ ಕಾಡುವ ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯನ್ನು ಹಾಲಿನಲ್ಲಿ ಕುದಿಸಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿಯುವುದರಿಂದ ನಿಮ್ಮ ದೇಹವು ಒಳಗಿನಿಂದ ಬಲಗೊಳ್ಳುತ್ತದೆ.

ಇದು ಕ್ಯಾನ್ಸರ್ ವಿರೋಧಿ ಸಂಯುಕ್ತಗಳನ್ನು ಹೊಂದಿದೆ. ಏಲಕ್ಕಿಯಲ್ಲಿರುವ ಅಂಶಗಳು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಏಲಕ್ಕಿ ಸೇವಿಸುವುದು ಅಥವಾ ಅಡುಗೆಯಲ್ಲಿ ಏಲಕ್ಕಿ ಬಳಸುವುದು ಪ್ರಯೋಜನಕಾರಿ.  ಏಲಕ್ಕಿ ಸೇವನೆ ಮಾಡುವುದ್ರಿಂದ ಅದ್ರಲ್ಲಿರುವ ಉರಿಯೂತದ ಅಂಶಗಳು ಬಾಯಿ ಮತ್ತು ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಅಜೀರ್ಣ ಅಥವಾ ಎದೆಯುರಿ ಇದ್ದರೆ ಏಲಕ್ಕಿ ಸೇವಿಸಬಹುದು. ದೇಹದ ರಕ್ತ ಪರಿಚಲನೆ ಸಾಮಾನ್ಯಗೊಳಿಸುವ ಕೆಲಸವನ್ನು ಏಲಕ್ಕಿ ಮಾಡುತ್ತದೆ. ನೀವು ಏಲಕ್ಕಿಯನ್ನು ತಿನ್ನುವುದ್ರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.   ಗ್ಯಾಸ್ ಮತ್ತು ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ರಾಮಬಾಣ. ಹೊಟ್ಟೆ ಸಮಸ್ಯೆ ಇರುವವರು ಪ್ರತಿ ದಿನ ಊಟದ ನಂತರ ಒಂದು ಏಲಕ್ಕಿಯನ್ನು ಸೇವಿಸಬಹುದು. ಏಲಕ್ಕಿ ಅಸ್ತಮಾಕ್ಕೆ ಉತ್ತಮ ಪರಿಹಾರ ಎಂದು ತಜ್ಞರು ಹೇಳ್ತಾರೆ.

ಉಸಿರಾಟದ ತೊಂದರೆ ಇರುವವರಿಗೂ ಏಲಕ್ಕಿ ಪ್ರಯೋಜನಕಾರಿ. ಇದಲ್ಲದೆ, ಹಲ್ಲು ನೋವು ನಿವಾರಿಸಲು ಸಹಾಯ ಮಾಡುತ್ತದೆ. ಊಟದ ನಂತ್ರ ಏಲಕ್ಕಿ ತಿನ್ನುವುದ್ರಿಂದ ಮುಖ್ಯವಾಗಿ ಆಹಾರ ಜೀರ್ಣವಾಗುತ್ತದೆ. ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದ್ರಿಂದಾಗಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ರಾತ್ರಿ ಊಟದ ನಂತ್ರ ಏಲಕ್ಕಿ ತಿನ್ನುವುದ್ರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆದು ನಿದ್ರೆ ಬರುತ್ತದೆ ಎನ್ನುತ್ತಾರೆ ತಜ್ಞರು.  ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ವಿವಿಧ ರೀತಿಯ ಸೋಂಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಏಲಕ್ಕಿ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ ನಿಜ. ಆದ್ರೆ ಮಿತಿ ಮೀರಿ ಯಾವುದೇ ಆಹಾರ ಸೇವನೆ ಮಾಡಬಾರದು. ಅದರಲ್ಲಿ ಏಲಕ್ಕಿ ಕೂಡ ಸೇರಿದೆ. ಏಲಕ್ಕಿಯನ್ನು ನೀವು ಮಿತಿಮೀರಿ ತಿಂದಾಗ ಅದು ಸಮಸ್ಯೆಯುಂಟು ಮಾಡುತ್ತದೆ. ಏಲಕ್ಕಿ ಹೊಟ್ಟೆಯಲ್ಲಿ ಶಾಖವನ್ನು ಉಂಟುಮಾಡುತ್ತದೆ. ಇದರಿಂದ ನಿಮಗೆ ಹೊಟ್ಟೆನೋವು ಕಾಡುವ ಅಪಾಯವಿದೆ. 

Latest Videos

click me!