ಉತ್ತಮ ಆರೋಗ್ಯಕ್ಕಾಗಿ ಇಂದೇ ಅಡುಗೆಮನೆಯಿಂದ ಈ ಆಹಾರಗಳನ್ನು ದೂರ ಇಡಿ

First Published | Dec 3, 2022, 4:22 PM IST

ನಿಮ್ಮ ಅಡುಗೆಮನೆಯಲ್ಲಿರುವ ಎಲ್ಲಾ ವಸ್ತುಗಳು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಲವೊಂದು ಆಹಾರಗಳು ನಮಗೆ ಅಗತ್ಯ ಇದ್ದರೂ ಸಹ ಅವು ಅನಾರೋಗ್ಯವನ್ನುಂಟು ಮಾಡುತ್ತವೆ. ಅಂತಹ ಆಹಾರಗಳು ಯಾವುವು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 

ನಿಮ್ಮ ಅಡುಗೆಮನೆಯ ಕಪಾಟುಗಳು ಮತ್ತು ರೆಫ್ರಿಜರೇಟರ್ ನೀವು ಇಷ್ಟಪಡುವ ವಸ್ತುಗಳಿಂದ ತುಂಬಿರುತ್ತವೆ. ಅಲ್ಲದೇ ಇವು ನಿಮ್ಮ ಅಡುಗೆಗೆ ಮುಖ್ಯವಾಗಿ ಬೇಕಾಗುವ ಆಹಾರಗಳಾಗಿವೆ. ಇವುಗಳಲ್ಲಿ ಕೆಲವು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಮತ್ತು ಅವುಗಳಲ್ಲಿ ಕೆಲವು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಮಾಡಬಹುದು. ಆರೋಗ್ಯಕರ ಜೀವನಕ್ಕಾಗಿ, ನಿಮ್ಮ ಅಡುಗೆಮನೆಯಿಂದ ಅನಾರೋಗ್ಯಕರ ಅಡುಗೆ ಪದಾರ್ಥಗಳನ್ನು (Healthy Food Ingredients) ತೆಗೆದುಹಾಕುವುದು ಮುಖ್ಯ!

"ನಿಮ್ಮ ಅಡುಗೆ ಮನೆಯನ್ನು ಆರೋಗ್ಯಕರ ಮತ್ತು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿಸಲು ಕೆಲವು ಅನಾರೋಗ್ಯಕರ ಅಡುಗೆ ಪದಾರ್ಥಗಳನ್ನು ತೆಗೆದುಹಾಕಲು ನೀವು ಇನ್ನೂ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಗಿದೆ, ಏಕೆಂದರೆ ಅವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತವೆ. ಅಂತಹ ಆಹಾರಗಳು ಯಾವುವು ನೋಡೋಣ.

Latest Videos


ಉಪ್ಪು: ನೀವು ಹೆಚ್ಚು ಉಪ್ಪನ್ನು ಬಳಸಬಾರದು. ಅತಿಯಾದ ಉಪ್ಪು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ಬಿಳಿ ಉಪ್ಪಿನ ಬದಲು ಕಲ್ಲು ಅಥವಾ ಕಪ್ಪು ಉಪ್ಪನ್ನು ಬಳಸಬಹುದು. ಅದಲ್ಲದೇ ಯಾವುದೇ ಆಹಾರ ತಯಾರಿಸುವಾಗ ಅಥವಾ ಸೇವಿಸುವಾಗ ಉಪ್ಪನ್ನು ಮೇಲಿಂದ ಹಾಕೋದು ತಪ್ಪು. ಇವು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತೆ.
 

ಸಕ್ಕರೆ: ಸಿಹಿ ಭಕ್ಷ್ಯಗಳಿಗೆ, ಚಹಾದಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ ಆದರೆ ಸಕ್ಕರೆಯನ್ನು ತಿನ್ನುವುದರಿಂದ ತೂಕವ ತುಂಬಾ ವೇಗವಾಗಿ ಹೆಚ್ಚಾಗುತ್ತದೆ. ವಿಶೇಷವಾಗಿ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ, ಆದ್ದರಿಂದ ನೀವು ಸಕ್ಕರೆಯ ಬದಲು ಬೆಲ್ಲ, ಜೇನುತುಪ್ಪ, ಬಳಸಿದ್ರೆ ಉತ್ತಮ.
 

ಸಂಸ್ಕರಿಸಿದ ಎಣ್ಣೆ: ರಿಫೈನ್ಡ್ ಎಣ್ಣೆಯಲ್ಲಿ ಸಾಕಷ್ಟು ಟ್ರಾನ್ಸ್ ಕೊಬ್ಬು ಇರುತ್ತದೆ, ಆದ್ದರಿಂದ ನೀವು ಇದನ್ನು ಅವಾಯ್ಡ್ ಮಾಡೋದು ಉತ್ತಮ. ಸಂಸ್ಕರಿಸಿದ ಎಣ್ಣೆಯ ಬದಲು ಸಾಸಿವೆ ಎಣ್ಣೆ, ಆಲಿವ್ ಎಣ್ಣೆಯನ್ನು ಬಳಸಬೇಕು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. 

ಹಸಿರು ಆಲೂಗಡ್ಡೆ: ಕೆಲವೊಮ್ಮೆ ಆಲೂಗಡ್ಡೆ ತಂದಾಗ ಅದರಲ್ಲಿ ಕೆಲವೊಂದು ಹಸಿರು ಆಲೂಗಡ್ಡೆ ಇರುತ್ತೆ. ಹೆಚ್ಚಿನವರು ಅದನ್ನು ಸಹ ಅಡುಗೆ ಮಾಡಲು ಬಳಸುತ್ತಾರೆ. ಆದರೆ ಹಸಿರು ಆಲೂಗಡ್ಡೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತವೆ.

ಕೆಂಪು ಮೆಣಸಿನಕಾಯಿ: ಕೆಂಪು ಮೆಣಸಿನಕಾಯಿಯ ಅತಿಯಾದ ಸೇವನೆಯು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ, ಆದ್ದರಿಂದ ಕೆಂಪು ಮೆಣಸಿನಕಾಯಿಯ ಬದಲು ಹಸಿರು ಮೆಣಸಿನಕಾಯಿಗಳನ್ನು ತಿನ್ನಬೇಕು. ಅನೇಕ ಜನರು ಅಡುಗೆ ಮಾಡುವಾಗ ಬ್ರೈಟ್ ಕೆಂಪು ಬಣ್ಣಕ್ಕಾಗಿ ಕೆಂಪು ಮೆಣಸಿನಕಾಯಿ ಸಹ ಬಳಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
 

ಮೈದಾ: ರಿಫೈನ್ಡ್ ಫ್ಲೋರ್, ಇದನ್ನು ಮೈದಾ ಎಂದೂ ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಪ್ರತಿದಿನ ಜನರು ಮೈದಾದಿಂದ ಮಾಡಿದ ಕುಕೀಗಳು, ಬಿಸ್ಕತ್ತುಗಳು, ಬ್ರೆಡ್, ಪಾಸ್ತಾ, ಮ್ಯಾಗಿ, ಕೇಕ್ ಇತ್ಯಾದಿಗಳನ್ನು ಸೇವಿಸುತ್ತಾರೆ. ನೀವು ನಿಮ್ಮ ಆಹಾರದಲ್ಲಿ ಹೆಚ್ಚಿನ ಮೈದಾ ಸೇರಿಸಿದರೆ, ಅದು ಮಲಬದ್ಧತೆಗೆ ಕಾರಣವಾಗುವುದಲ್ಲದೆ, ತೂಕ ಹೆಚ್ಚಳ, ಚಯಾಪಚಯ ಸಮಸ್ಯೆಗಳು, ಹೃದ್ರೋಗ ಮತ್ತು ಕ್ಯಾನ್ಸರ್ ಗೆ ಕಾರಣವಾಗಬಹುದು.  

ಒಂದೇ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದು: ಪುರಿ, ಡಂಪ್ಲಿಂಗ್ಸ್ ಇತ್ಯಾದಿಗಳನ್ನು ಕರಿಯಲು ಕೆಲವರು ಹೆಚ್ಚು ಎಣ್ಣೆ ಬಳಸುತ್ತಾರೆ. ಹೀಗೆ ಮಾಡಿದಾಗ ಬಾಣಲೆಯಲ್ಲಿ ಎಣ್ಣೆ ಉಳಿಯುತ್ತದೆ ಮತ್ತು ಈ ಎಣ್ಣೆಯನ್ನು ಅನೇಕ ಬಾರಿ ಬಳಸಲಾಗುತ್ತದೆ. ಹೀಗೆ ಮಾಡೋದ್ರಿಂದ ನಿಮ್ಮ ಕುಟುಂಬ ಅನಾರೋಗ್ಯಕ್ಕೊಳಗಾಗಬಹುದು. ಇದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಪಾರ್ಶ್ವವಾಯು, ಹೃದಯಾಘಾತ (heart attack), ಮಧುಮೇಹ, ತೂಕ ಹೆಚ್ಚಳ, ಕೀಲು ನೋವು, ಅನೇಕ ರೀತಿಯ ಕ್ಯಾನ್ಸರ್, ಇತ್ಯಾದಿಗಳು ಸಂಭವಿಸಬಹುದು.

ಈ ವಸ್ತುಗಳನ್ನು ಸೇವಿಸುವ ಸರಿಯಾದ ವಿಧಾನ: ನೀವು ಸಕ್ಕರೆ, ಉಪ್ಪು, ಎಣ್ಣೆ ಇತ್ಯಾದಿಗಳನ್ನು ಸೇವಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಏಕೆಂದರೆ ಅವುಗಳಿಲ್ಲದೆ ಯಾವುದೇ ಆಹಾರ ತಯಾರಿಸಲು ಸಾಧ್ಯವಿಲ್ಲ. ಈ ಪದಾರ್ಥಗಳು ಉಪ್ಪು, ಸಿಹಿ ವಸ್ತುಗಳನ್ನು ತಯಾರಿಸಲು ಬಳಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ತರಕಾರಿಗಳು, ಬೇಳೆಗಳಲ್ಲಿ ಉಪ್ಪನ್ನು ಹಾಕಿ, ಆದರೆ ಅದನ್ನು ಆಹಾರಕ್ಕೆ ಮೇಲಿಂದ ಬೆರೆಸಬೇಡಿ. ನೀವು ಬಯಸಿದರೆ, ಬೆಲ್ಲ, ಜೇನುತುಪ್ಪದಂತಹ ಸಕ್ಕರೆಯ ಆರೋಗ್ಯಕರ ಪರ್ಯಾಯ ಬಳಸಬಹುದು. ಸಂಸ್ಕರಿಸಿದ ಹಿಟ್ಟಿನ ಬದಲು, ನೀವು ರಾಗಿ, ಗೋಧಿಯಿಂದ ಮಾಡಿದ ಆಹಾರ ಸೇವಿಸಬಹುದು.
 

click me!