ಈ ಫಾಸ್ಟ್ ಆಂಡ್ ಫ್ಯೂರಿಯಸ್ ಜಗತ್ತಿನಲ್ಲಿ, ಜನರು ಪ್ರತಿಯೊಂದಕ್ಕೂ ಆತುರದಲ್ಲಿರುತ್ತಾರೆ. ಅದು ಕೆಲಸವಾಗಿರಲಿ ಅಥವಾ ಆಹಾರವಾಗಿರಲಿ, ಎಲ್ಲವೂ ಈಗ ವೇಗವಾಗಿದೆ. ಈ ಬ್ಯುಸಿ ಜೀವನದಲ್ಲಿ, ಈಗ ಜನರ ಆಹಾರ ಪದ್ಧತಿಯೂ ಸಾಕಷ್ಟು ಬದಲಾಗಿದೆ. ಪ್ರಸ್ತುತ, ಪ್ರತಿಯೊಬ್ಬರೂ ತಮ್ಮ ಹೆಚ್ಚಿನ ಸಮಯವನ್ನು ಮನೆಯ ಹೊರಗೆ ಕಳೆಯುತ್ತಿದ್ದಾರೆ. ಹಾಗಾಗಿ, ಫಾಸ್ಟ್ ಫುಡ್ (fast food) ಮತ್ತು ಹೊರಗಿನ ಆಹಾರವು ಜನರ ದೈನಂದಿನ ದಿನಚರಿಯ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಪಿಜ್ಜಾ, ಬರ್ಗರ್ ಗಳು, ನೂಡಲ್ಸ್ ಗಳು ಜನರ ಇಷ್ಟ ಮತ್ತು ಅಗತ್ಯಗಳೆರಡೂ ಆಗುತ್ತಿವೆ. ಈ ಫಾಸ್ಟ್ ಫುಡ್ ಗಳಲ್ಲಿ ಒಂದಾದ ಮೊಮೊಸ್ (momos), ಈಗಂತೂ ಎಲ್ಲರ ಆಯ್ಕೆಯಾಗಿದೆ. ಬಹುತೇಕ ಎಲ್ಲರೂ ಆಫೀಸ್ ಅಥವಾ ಕಾಲೇಜೀಂದ ಹೊರ ಬಂದ ನಂತರ ಅಥವಾ ಸ್ನೇಹಿತರೊಂದಿಗೆ ವಿಹಾರದ ಸಮಯದಲ್ಲಿ ಮೋಮೋಸ್ ತಿನ್ನೋದನ್ನು ನೀವು ಕಂಡಿರಬಹುದು ಅಲ್ವಾ?