ಅರಿಶಿಣ ಒಂದು ಶಕ್ತಿಶಾಲಿ ಮಸಾಲೆ. ಭಾರತೀಯ ಅಡುಗೆಯಲ್ಲಿ ಒಂದು ಚಿಟಿಕೆ (ಅಥವಾ ಎರಡು) ಅರಿಶಿಣ ಸೇರಿಸುವುದು ಸಾಮಾನ್ಯವಾಗಿದ್ದರೂ, ಅದು ಆಹಾರಕ್ಕೆ ಹೊಳಪನ್ನು ನೀಡುವುದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.
ಅರಿಶಿಣದಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹಲವು ಕಾಯಿಲೆಗಳು ಅಥವಾ ಸೋಂಕುಗಳ ವಿರುದ್ಧ ನಿಮ್ಮನ್ನು ರಕ್ಷಿಸುತ್ತವೆ.
ಅರಿಶೀಣ ಕರ್ಕ್ಯುಮಿನ್ ಎಂಬ ಸಂಯುಕ್ತದಿಂದ ಕೂಡಿದೆ. ಇದು ಕೆಲವು ಕ್ಯಾನ್ಸರ್‌ಗಳಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಸೇರಿದಂತೆ ಅಸಂಖ್ಯಾತ ರೋಗ ಗುಣಪಡಿಸುವ ಶಕ್ತಿ ಹೊಂದಿದೆ. ಇದು ಚರ್ಮದ ಸಮಸ್ಯೆಗಳು, ಮೇಲ್ಭಾಗದ ಉಸಿರಾಟದ ಪ್ರದೇಶದ ಸಮಸ್ಯೆಗಳು, ಕೀಲು ನೋವು ಮತ್ತು ಅಜೀರ್ಣ ಸಮಸ್ಯೆಗಳಿಗೂ ಚಿಕಿತ್ಸೆ ನೀಡಬಲ್ಲದು.