೨. ತ್ರಿವರ್ಣ ಇಡ್ಲಿ
ಇಡ್ಲಿ ಹಿಟ್ಟನ್ನು ಮೂರು ಭಾಗ ಮಾಡಿ, ಬಿಳಿ, ಹಸಿರು ಮತ್ತು ಕೇಸರಿ. ಬೇಕಾಗುವ ಸಾಮಗ್ರಿಗಳು-
ಇಡ್ಲಿ ಹಿಟ್ಟು
ಪಾಲಕ್ ಪ್ಯೂರಿ (ಹಸಿರು)
ಕ್ಯಾರೆಟ್ ಪ್ಯೂರಿ (ಕೇಸರಿ)
ವಿಧಾನ
ಇಡ್ಲಿ ಹಿಟ್ಟನ್ನು ಮೂರು ಭಾಗ ಮಾಡಿ. ಮೊದಲ ಭಾಗಕ್ಕೆ ಪಾಲಕ್ ಪ್ಯೂರಿ, ಎರಡನೇ ಭಾಗಕ್ಕೆ ಕ್ಯಾರೆಟ್ ಪ್ಯೂರಿ, ಮೂರನೇ ಭಾಗ ಬಿಳಿ ಬಣ್ಣದ್ದೇ ಇರಲಿ. ಇವನ್ನು ಸ್ಟೀಮರ್‌ನಲ್ಲಿ ತ್ರಿವರ್ಣದ ಪದರಗಳಲ್ಲಿ ಹಾಕಿ ಬೇಯಿಸಿ. ಸಾಂಬಾರ್ ಅಥವಾ ಚಟ್ನಿಯೊಂದಿಗೆ ಸವಿಯಿರಿ.