Kitchen Hacks: ಈ ಟ್ರಿಕ್ಸ್ ಟ್ರೈ ಮಾಡಿ ಹಸಿರು ಟೋಮ್ಯಾಟೋವನ್ನು ಹಣ್ಣಾಗಿಸಿ

First Published | Oct 12, 2022, 3:51 PM IST

ಕಡಿಮೆ ಬೆಲೆಗಳಿಂದಾಗಿ ನಾವು ಮಾರುಕಟ್ಟೆಯಿಂದ ಹಸಿರು ಟೊಮ್ಯಾಟೊಗಳನ್ನು ಖರೀದಿಸುತ್ತೇವೆ, ಆದರೆ ನಂತರ ಅವು ರುಚಿಯಲ್ಲಿ ಚೆನ್ನಾಗಿ ಇರೋದಿಲ್ಲ ಅಥವಾ ಅವು ತರಕಾರಿಗೆ ಉತ್ತಮ ಲುಕ್ ನೀಡುವುದಿಲ್ಲ. ಹೀಗಿರುವಾಗ, ಹಸಿರು ಟೊಮ್ಯಾಟೋಗಳನ್ನು ಕೆಂಪು ಮಾಡುವುದು ಹೇಗೆ ಅನ್ನೋದನ್ನು ತಿಳಿಸುತ್ತೇವೆ. ಇವು ಸುಲಭವಾಗಿ ಟೋಮ್ಯಾಟೋವನ್ನು ಕೆಂಪಾಗಿಸುತ್ತೆ. 

ಟೊಮೇಟೊಗಳು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಅದು ಚಟ್ನಿ, ತರಕಾರಿ, ಸೂಪ್ ಅಥವಾ ಸಲಾಡ್ ಆಗಿರಲಿ, ಟೊಮೆಟೊ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಆದರೆ ಅನೇಕ ಬಾರಿ ಟೊಮೆಟೊಗಳ ಬೆಲೆಗಳು ಎಷ್ಟು ಹೆಚ್ಚಾಗುತ್ತವೆಯೆಂದರೆ, ಅಗ್ಗದ ಟೊಮೆಟೊಗಳನ್ನು ಖರೀದಿಸಲು ನಾವು ಮಾರುಕಟ್ಟೆಯಿಂದ ಹಸಿರು ಟೊಮೆಟೊಗಳನ್ನು (raw tomato) ತರುತ್ತೇವೆ. ಹೀಗಿರೋವಾಗ, ಮಹಿಳೆಯರ ದೊಡ್ಡ ಪ್ರಶ್ನೆಯೆಂದರೆ ಮನೆಯಲ್ಲಿ ಟೊಮೆಟೊವನ್ನು ಕೆಂಪು ಮಾಡುವುದು ಹೇಗೆ? 

ನೀವು ಕೂಡ ಮನೆಯಲ್ಲಿರುವ ಹಸಿರು ಟೋಮ್ಯಾಟೋಗಳನ್ನು ಹಣ್ಣು ಮಾಡಲು ಬಯಸುವಿರೇ? ಹಾಗಿದ್ರೆ ಇಂದು ನಿಮ್ಮ ಸಮಸ್ಯೆಗೆ ಪರಿಹಾರ ಹೇಳೋಣ ಮತ್ತು ಕೆಲವು ಸಲಹೆಗಳನ್ನು ನಿಮಗೆ ನೀಡುತ್ತೇವೆ., ಇದರಿಂದ ನೀವು ಮನೆಯಲ್ಲಿ ಟೊಮೆಟೊವನ್ನು ಸುಲಭವಾಗಿ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿಸಬಹುದು.

Tap to resize

ಅಕ್ಕಿಯೊಂದಿಗೆ ಟೊಮೆಟೊ (tomato with rice)
ಹೌದು, ನೀವು ಹಸಿರು ಟೊಮೆಟೊಗಳನ್ನು ಹೊಂದಿದ್ದರೆ ಮತ್ತು ನೀವು ಅವುಗಳನ್ನು ಹಣ್ಣು ಮಾಡಲು ಬಯಸಿದರೆ, ಅಕ್ಕಿಯನ್ನು ಬಳಸಬಹುದು. ಇದಕ್ಕಾಗಿ, ಮಾಡಬೇಕಾಗಿರುವುದು ಕಚ್ಚಾ ಟೊಮೆಟೊಗಳನ್ನು ಕಾಗದದಲ್ಲಿ ಸುತ್ತುವುದು. ನಂತರ ಅದನ್ನು ಅಕ್ಕಿಯ ಚೀಲ ಅಥವಾ ಅಕ್ಕಿಯ ಪೆಟ್ಟಿಗೆಯಲ್ಲಿ ಹಾಕಿ. ಇದನ್ನು ಒಂದು ರಾತ್ರಿ ಹೀಗೆ ಬಿಡಿ ಮತ್ತು ಮರುದಿನ ಟೊಮೆಟೊಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ.

ಟೊಮೆಟೊವನ್ನು ಬಾಳೆಹಣ್ಣಿನ ಜೊತೆಗೆ ಇರಿಸಿ (tomato with banana)
ಬಾಳೆಹಣ್ಣುಗಳು ತಮ್ಮನ್ನು ತಾವು ಬೇಗನೆ ಹಣ್ಣು ಮಾಡುವ ಅಂಶಗಳನ್ನು ಹೊಂದಿರುತ್ತವೆ, ಜೊತೆಗೆ ಅದರೊಂದಿಗೆ ಇರಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ಬೇಗನೆ ಹಣ್ಣು ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಎರಡು-ಮೂರು ಬಾಳೆಹಣ್ಣುಗಳೊಂದಿಗೆ ಹಸಿರು ಟೊಮ್ಯಾಟೋ ಹಾಕಿದ್ರೆ ಇದು ಟೊಮೆಟೊಗಳನ್ನು ಬಹಳ ಬೇಗನೆ ಹಣ್ಣಾಗಿಸುತ್ತದೆ.

ಕಾರ್ಬೈಡ್ ಬಳಸಿ 
ಹೌದು, ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ನೀವು ಟೊಮೆಟೊವನ್ನು ಬೇಗನೆ ಹಣ್ಣು ಮಾಡಬಹುದು. ಇದಕ್ಕಾಗಿ, ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಒಂದು ಕಾಗದದಲ್ಲಿ ಸುತ್ತಿ, ಅದನ್ನು ಟೊಮೆಟೊ ಬಂಡಲ್ ಅಥವಾ ಪೆಟ್ಟಿಗೆಯಲ್ಲಿ ಹಾಕಿ. ಅದರ ಮೇಲೆ ಸೆಣಬಿನ ಚೀಲ ಇರಿಸಿ ಮತ್ತು 1 ದಿನ ಹಾಗೆ ಬಿಡಿ. 

ಕಾರ್ಬೈಡ್ ಟೊಮೆಟೊವನ್ನು ಬಹಳ ಬೇಗನೆ ಕೆಂಪಾಗಿಸುತ್ತದೆ. ಆದರೆ ಟೊಮೇಟೊವನ್ನು ಬೇಗನೆ ಹಣ್ಣು ಮಾಡಲು ಟೋಮ್ಯಾಟೋ ಮೇಲೆ ನೇರವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಹಚ್ಚಬೇಡಿ ಎಂಬುದನ್ನು ನೆನಪಿಡಿ. ಅದನ್ನು ಚೆನ್ನಾಗಿ ಪೇಪರ್ ನಲ್ಲಿ ಸುತ್ತುವ ಮೂಲಕ ಮಾತ್ರ ಬಳಸಿ. ಇಲ್ಲವಾದರೆ ಅಪಾಯಕಾರಿಯಾಗಬಹುದು. 

ಸೇಬುಗಳೊಂದಿಗೆ ಇರಿಸಿ
ಸೇಬುಗಳಲ್ಲಿ ಈಥೀನ್ ಕಂಡುಬರುತ್ತದೆ, ಇದು ಟೊಮೆಟೊಗಳನ್ನು ವೇಗವಾಗಿ ಹಣ್ಣು ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಟೊಮೆಟೊಗಳನ್ನು ಪೇಪರ್ ಬ್ಯಾಗ್, ಕಾರ್ಡ್ ಬೋರ್ಡ್ ಬಾಕ್ಸ್ ಅಥವಾ ಖಾಲಿ ಕಿಚನ್ ಡ್ರಾಯರ್ ನಲ್ಲಿ ಹಾಕಿ ಮತ್ತು ಈಥೀನ್ ಅನಿಲಕ್ಕಾಗಿ ಸೇಬನ್ನು ಅದರ ಜೊತೆ ಇಡಿ. ಇದರೊಂದಿಗೆ ಇಟ್ಟರೆ, ಟೊಮೆಟೊಗಳು 1-2 ದಿನಗಳಲ್ಲಿ ಹಸಿರು ಬಣ್ಣದಿಂದ ಪೂರ್ಣ ಕೆಂಪು ಬಣ್ಣಕ್ಕೆ ತಿರುಗುತ್ತವೆ.

Latest Videos

click me!