ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಟ್ರೈ ಮಾಡಿ ನೋಡಿ 'ಕಡಿ ಪತ್ತಾ ಲಸ್ಸಿ'!

First Published | Mar 15, 2021, 6:29 PM IST

ಬೇಸಿಗೆ ಬಂತು ಎಂದರೆ ಬಾಯಾರಿಕೆ. ಮಾರುಕಟ್ಟೆಯಲ್ಲಿ ಸಿಗುವ ಕೋಲ್ಡ್‌ ಡ್ರಿಂಕ್ಸ್‌ ಕುಡಿದರೆ ದಾಹ ಕಡಿಮೆ ಅಗುವುದಿಲ್ಲ. ಜೊತೆಗೆ ಆರೋಗ್ಯಕ್ಕೂ ಹಾನಿ. ಅಂತಹ ಸಮಯದಲ್ಲಿ ಲಸ್ಸಿ ಇದಕ್ಕೆ ಬೆಸ್ಟ್ ಉಪಾಯ. ಈ ಬೇಸಿಗೆಗೆ ನಿಮಗಾಗಿ 'ಕಡಿ ಪತ್ತಾ ಲಸ್ಸಿ'. ಹಲವು  ಹೆಲ್ತ್‌ ಬೆನಿಫಿಟ್‌ ಒಳಗೊಂಡಿರುವ ಈ ಡ್ರಿಂಕ್‌ ಮಾಡುವ ವಿಧಾನ ಇಲ್ಲಿದೆ .

ಬೇಸಿಗೆ ಸಮೀಪಿಸುತ್ತಿದ್ದಂತೆ, ನಾವೆಲ್ಲರೂ ವಿವಿಧ ತಂಪು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯ. ಅವುಗಳಲ್ಲಿ ಮಜ್ಜಿಗೆ ಮತ್ತು ಲಸ್ಸಿ ಸಖತ್‌ ಫೇಮಸ್‌.
ಈ ಪಾನೀಯ ಹೆಚ್ಚಿನ ಭಾರತೀಯರ ಫೇವರೇಟ್‌ ಎನ್ನಬಹುದು. ದೊಡ್ಡದೊಡ್ಡ ರೆಸ್ಟೋರೆಂಟ್‌ಗಳಲ್ಲೂಜನರುಲಸ್ಸಿಯನ್ನು ಆರ್ಡರ್‌ ಮಾಡುವುದನ್ನು ನೋಡಬಹುದು. ಹಾಗೆಯೇ ಮನೆಯಲ್ಲೂ ಲಸ್ಸಿ ಅಥವಾ ಮಜ್ಜಿಗೆತಯಾರಿಸುವುದು ಅಷ್ಟೇ ಸುಲಭ.
Tap to resize

ಮಾವಿನ ಹಣ್ಣಿನಿಂದ ಹಿಡಿದು ಡ್ರೈಫ್ರೂಟ್ಸ್ವರೆಗೆ ತರಾವರಿ ಫ್ಲೇವರ್‌ನ ಲಸ್ಸಿಗಳು ಸಿಗುತ್ತವೆ. ಈಪಟ್ಟಿಯಲ್ಲಿ 'ಕಡಿ ಪತ್ತಾಲಸ್ಸಿ' ಕೂಡ ಒಂದು.
ಕರಿಬೇವಿನ ಎಲೆಗಳನ್ನು ಹಿಂದಿ ಭಾಷೆಯಲ್ಲಿ ಕಡಿ ಪತ್ತಾ ಎನ್ನುತ್ತಾರೆ. ಈ ಕರಿಬೇವು ಜೀವಸತ್ವಗಳು, ಖನಿಜಗಳು ಮತ್ತು ಹಲವಾರು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಇದು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಜೊತೆಗೆ, ತೂಕ ಇಳಿಸಲು ಸಹಾಯ ಮಾಡುತ್ತದೆ, ರಕ್ತದಲ್ಲಿನಸಕ್ಕರೆ ಅಂಶವನ್ನು ನಿಯಂತ್ರಿಸಿ ಡಯಾಬಿಟಿಸ್‌ ನಿರ್ವಹಿಸುತ್ತದೆ.
ಕಡಿ ಪತ್ತಾ ಲಸ್ಸಿ' ರೆಸಿಪಿ ಇಲ್ಲಿದೆ. ಮೊಸರು: ಎರಡು ಕಪ್, ಹಂಗ್‌ ಕರ್ಡ್‌- ಎರಡು ಚಮಚ, ಕರಿಬೇವು- ಒಂದು ಕಪ್, ಚಾಟ್ ಮಸಾಲ, ಕಾಳು ಮೆಣಸು, ಬ್ಲ್ಯಾಕ್‌ ಸಾಲ್ಟ್‌ ಮತ್ತು ಸಕ್ಕರೆ ರುಚಿಗೆ ಅನುಗುಣವಾಗಿ, ನೀರು - ಒಂದು ಕಪ್, ಎಣ್ಣೆ - ಒಂದು ಟೀಸ್ಪೂನ್, ಸಾಸಿವೆ -ಅರ್ಧ ಸ್ಪೂನ್‌, ಇಂಗು - ಒಂದು ಚಿಟಿಕೆ.
ಕರಿಬೇವಿನ ಎಲೆ ಮತ್ತು ಕಾಳಮೆಣಸನ್ನು ಮಿಕ್ಸರ್‌ನಲ್ಲಿ ಪೇಸ್ಟ್ ಮಾಡಿ. ನಂತರ ಪೇಸ್ಟ್‌ಗೆ, ಮೊಸರು ಮತ್ತು ನೀರನ್ನು ಚೆನ್ನಾಗಿ ಮಿಕ್ಸ್‌ ಮಾಡಿ. ಮಿಶ್ರಣ ದಪ್ಪ ಅನಿಸಿದರೆ ಇನ್ನೂ ಸ್ವಲ್ಪ ನೀರು ಸೇರಿಸಿ. ನಿಮ್ಮ ರುಚಿಗೆ ಅನುಗುಣವಾಗಿ ಚಾಟ್ ಮಸಾಲ, ಬ್ಲ್ಯಾಕ್‌ ಸಾಲ್ಟ್‌ ಮತ್ತು ಸಕ್ಕರೆ ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಬೆರೆಸಿದಲಸ್ಸಿಯನ್ನುಲೋಟಗಳಿಗೆ ಹಾಕಿ.
ಈಗ ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಇಂಗು, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಎಲೆಗಳ ಬಣ್ಣ ತಾಜಾ ಇರುವಂತೆ ಗಮನವಿಡಿ. ನಂತರ ಲೋಟದಲ್ಲಿರುವ ಲಸ್ಸಿಯನ್ನು ಒಂದು ಚಮಚ ಹಂಗ್ ಕರ್ಡ್‌ ಮತ್ತು ಹುರಿದ ಕರಿಬೇವಿನ ಎಲೆಯ ಮಿಶ್ರಣದಿಂದ ಅಲಂಕರಿಸಿ. ಮೇಲ್ಭಾಗದಲ್ಲಿ ಚಿಟಿಕೆ ಚಾಟ್ ಮಸಾಲಾ ಉದುರಿಸಿ.ಕೋಲ್ಡ್‌ ಬಯಸಿದರೆ, ಲಸ್ಸಿಯನ್ನು ಮಾಡುವಾಗ ಐಸ್ ಕ್ಯೂಬ್ಸ್‌ ಕೂಡ ಸೇರಿಸಬಹುದು.

Latest Videos

click me!