ಎಣ್ಣೆ ಬದಲು ತುಪ್ಪ: ಕೆಲವರು ರೊಟ್ಟಿ ಮೃದುವಾಗಿರಲು ಹಿಟ್ಟು ನಾದುವಾಗ ಎಣ್ಣೆ ಮತ್ತು ಉಪ್ಪು ಸೇರಿಸುತ್ತಾರೆ. ಇದರಿಂದ ರೊಟ್ಟಿಯ ರುಚಿ ಸ್ವಲ್ಪ ಬದಲಾಗುವುದು ಮಾತ್ರವಲ್ಲ, ಸ್ವಲ್ಪ ಸಮಯದ ನಂತರ ಗಟ್ಟಿಯಾಗುತ್ತದೆ. ಆದ್ದರಿಂದ, ರೊಟ್ಟಿ ಹಲವು ಗಂಟೆಗಳ ಕಾಲ ರುಚಿಯಾಗಿ ಮತ್ತು ಮೃದುವಾಗಿರಲು ಎಣ್ಣೆ ಬದಲು ತುಪ್ಪ ಬಳಸಿ. ನೀವು ತಯಾರಿಸುವ ರೊಟ್ಟಿಯನ್ನು ಹಲವು ಗಂಟೆಗಳ ಕಾಲ ಮೃದುವಾಗಿರಿಸುತ್ತದೆ. ಅಷ್ಟೇ ಅಲ್ಲ, ಎಣ್ಣೆ ಬದಲು ತುಪ್ಪ ಬಳಸುವುದು ಆರೋಗ್ಯಕ್ಕೂ ಒಳ್ಳೆಯದು.
ಸರಿಯಾದ ಪ್ರಮಾಣದ ನೀರು : ಆತುರದಲ್ಲಿ ಹಿಟ್ಟು ನಾದುವಾಗ ಹೆಚ್ಚಿನವರು ಹೆಚ್ಚು ನೀರು ಸೇರಿಸಿ ನಾದುತ್ತಾರೆ. ಇದರಿಂದ ರೊಟ್ಟಿ ಬೇಗನೆ ಗಟ್ಟಿಯಾಗುತ್ತದೆ. ಆದ್ದರಿಂದ ಹಿಟ್ಟು ನಾದುವಾಗ ಸರಿಯಾದ ಪ್ರಮಾಣದ ನೀರು ಸೇರಿಸಿ ನಾದಿದರೆ ರೊಟ್ಟಿ ಹಲವು ಗಂಟೆಗಳ ಕಾಲ ಮೃದುವಾಗಿರುತ್ತದೆ.