ಮಕ್ಕಳಿಗೆ ಇಷ್ಟವಾಗುವಂತೆ ಟೇಸ್ಟಿಯಾಗಿ ಉಪ್ಪಿಟ್ಟು ಮಾಡುವ 5 ಸರಳ ವಿಧಾನ

First Published | Dec 26, 2024, 3:03 PM IST

ಉಪ್ಪಿಟ್ಟು ಭಾರತದ ಜನಪ್ರಿಯ ತಿಂಡಿ. ಉಪ್ಪಿಟ್ಟಿನ ರುಚಿ ಹೆಚ್ಚಿಸಲು ರವೆ ಈ 5 ವಿಧಾನಗಳನ್ನು ಅನುಸರಿಸಬೇಕು.

ಉಪ್ಪಿಟ್ಟು ಭಾರತದ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ.  ಭಾರತದ ಎಲ್ಲಾ ಭಾಗದಲ್ಲಿಯೂ ಉಪ್ಪಿಟ್ಟು ಸಿದ್ಧಪಡಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಭಾರತದ ದಕ್ಷಿಣ ಭಾಗದಲ್ಲಿ ಬೆಳಗಿನ ತಿಂಡಿಯಾಗಿ ಉಪ್ಪಿಟ್ಟು ಮಾಡಲಾಗುತ್ತದೆ.

ಉಪ್ಪಿಟ್ಟು ಅಂದ್ರೆ ಕೆಲವರಿಗೆ ಇಷ್ಟ, ಮತ್ತೊಂದಿಷ್ಟು ಮಂದಿಗೆ ವಾಕರಿಕೆ. ಮನೆಯಲ್ಲಿ ತಿನ್ನದವರು ಹೋಟೆಲ್‌ಗಳಲ್ಲಿ ಚಪ್ಪರಿಸಿಕೊಂಡು ಉಪ್ಪಿಟ್ಟು ತಿನ್ನುತ್ತಾರೆ. ಮನೆಯಲ್ಲಿ ಮಕ್ಕಳು ಇಷ್ಟಪಡುವ ರೀತಿಯಲ್ಲಿ ತಯಾರಿಸಬಹುದು.

Tap to resize

ಉಪ್ಪಿಟ್ಟನ್ನು ಉಪ್ಮಾ ಎಂದು ಸಹ ಕರೆಯಲಾಗುತ್ತದೆ.  ಈ ರೀತಿಯಾಗಿ ಉಪ್ಪಿಟ್ಟು ಮಾಡೋದರಿಂದ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ ಇಷ್ಟವಾಗುತ್ತದೆ.  ಆ ವಿಧಾನಗಳು ಏನು ಅಂತ ನೋಡೋಣ ಬನ್ನಿ. 

ಸಲಹೆ 1

ಚಿರೋಟಿ ಮತ್ತು ಬನ್ಸಿ ಎಂಬ ಎರಡು ವಿಧದ ರವೆಯಲ್ಲಿ ಉಪ್ಪಿಟ್ಟು ತಯಾರಿಸಲಾಗುತ್ತದೆ.  ನೀವು ನಿಮ್ಮಿಷ್ಟದ ರವೆ ಆಯ್ಕೆ ಮಾಡಿಕೊಳ್ಳಿ. ಆದರೆ ಕೆಲವರು ರವೆಯನ್ನು ನೇರವಾಗಿ ಬಳಸುತ್ತಾರೆ. ಇದರಿಂದಾಗಿ ಉಪ್ಪಿಟ್ಟು ರುಚಿಯಾಗಿರಲ್ಲ.  ರವೆಯನ್ನು ಬಾಣಲೆಗೆ ಹಾಕಿ ಮೂರರಿಂದ ನಾಲ್ಕು ನಿಮಿಷ ಬಾಣಲೆಗೆ ಹಾಕಿ ಹುರಿದುಕೊಳ್ಳಬೇಕು.  ಈ ವೇಳೆ ತುಪ್ಪ ಅಥವಾ ಎಣ್ಣೆ ಸೇರಿಸಿ ಹುರಿದುಕೊಳ್ಳಬೇಕು.

ಸಲಹೆ 2

ಕೆಲವರು ಉಪ್ಪಿಟ್ಟಿಗೆ ಮನೆಯಲ್ಲಿರೋ ಎಲ್ಲಾ ತರಕಾರಿಯನ್ನು ಸೇರಿಸುತ್ತಾರೆ. ಇದರಿಂದ ಉಪ್ಪಿಟ್ಟಿನ ಮೂಲ ರುಚಿಯೇ ಹೋಗುತ್ತದೆ. ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೋ, ಕೋತಂಬರಿ ಸೇರಿದಂತೆ ಕೆಲವೇ ಕೆಲವು ತರಕಾರಿ ಬಳಸಬೇಕು.

ಸಲಹೆ 3

ಕೆಲವರು ಕಟ್ಟಾ-ಮಿಟ್ಟಾ ಇಷ್ಟಪಡುತ್ತಿರುತ್ತಾರೆ. ನಿಮ್ಮ ಮನೆಯಲ್ಲಿ ಈ ರೀತಿಯ ಆಹಾರ ಇಷ್ಟಪಡುತ್ತಿದ್ದರೆ, ಹುಣಸೆ ಹಣ್ಣಿನ ರಸದೊಂದಿಗೆ ಒಂದು ಟೀ ಸ್ಪೂನ್ ಬೆಲ್ಲದ ಪುಡಿ ಸೇರಿಸಬಹುದು. ಈ ಎರಡು ಪದಾರ್ಥ ಉಪ್ಪಿಟ್ಟಿನ ರುಚಿಯನ್ನು  ಹೆಚ್ಚಿಸುತ್ತದೆ. 

ಸಲಹೆ 4

ಉತ್ತರ ಕರ್ನಾಟಕ ಭಾಗದ ಹೋಟೆಲ್‌ಗಳಲ್ಲಿ ಸಣ್ಣ ರವೆಯ ಉಪ್ಪಿಟ್ಟಿಗೆ ಸಕ್ಕರೆ ಸೇರಿಸುತ್ತಾರೆ. ನಿಮಗೆ ಒಂದೇ ರೀತಿಯ ಉಪ್ಪಿಟ್ಟು ತಿಂದು ಬೇಸರವಾಗಿದ್ರೆ ಈ ರೀತಿಯಾಗಿ ತಯಾರಿಸಿಕೊಳ್ಳಬಹುದು

ಸಲಹೆ 5

ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ ಬೀಜ (ಶೇಂಗಾ) ಸಹ ಉಪ್ಪಿಟ್ಟಿನ ರುಚಿಯನ್ನು ಹೆಚ್ಚಿಸುತ್ತವೆ. ಈ ಮೂರು ಸಾಮಾಗ್ರಿಗಳು ಸಮ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಆದ್ರೆ ಯಾವುದೇ ಕಾರಣಕ್ಕೂ ಉಪ್ಪಿಟ್ಟಿನಲ್ಲಿ ಹುರಿಗಡಲೆ (ಪುಟಾನಿ) ಸೇರಿಸಬಾರದು. 

ಈ 5 ಸಲಹೆಗಳನ್ನು ಪಾಲಿಸಿ ಉಪ್ಪಿಟ್ಟು ತಯಾರಿಸಿದ್ರೆ ಬೆಳಗಿನ ತಿಂಡಿ ಸೂಪರ್ ಆಗಿರುತ್ತದೆ. ಸಿದ್ಧವಾದ ಉಪ್ಪಿಟ್ಟಿನ್ನು ಕಡಲೆಬೀಜ ಚಟ್ನಿ ಪುಡಿ ಅಥವಾ ಮೊಸರು ಅಥವಾ ನಿಂಬೆ ಹಣ್ಣಿನ ರಸ ಸೇರಿಸಿ ಸವಿಯಬಹುದು.

Latest Videos

click me!