ನಮ್ಮ ಭಾರತೀಯರಿಗೆ ಚಹಾ ಅಂದ್ರೆ ಪ್ರಾಣ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಚಹಾ ಇದ್ದೇ ಇರಬೇಕು. ಆದರೆ ಎಲ್ಲರೂ ಚಹಾ ಮಾಡೋ ರೀತಿ ಒಂಥೇ ಆಗಿರುವುದಿಲ್ಲ. ಕೆಲವರು ನೀರು, ಚಹಾ ಪುಡಿ ಹಾಕಿ ಕುದಿಸ್ತಾರೆ, ಮತ್ತೆ ಹಾಲು ಹಾಕಿ ಕುದಿಸ್ತಾರೆ. ಚಹಾ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ, ತೂಕ ಇಳಿಯುತ್ತೆ, ಸಕ್ಕರೆ ಕಂಟ್ರೋಲ್ ಆಗುತ್ತೆ ಅಂತೆಲ್ಲಾ ಹೇಳುತ್ತಾರೆ. ಆದರೆ ಈ ಕೆಫೀನ್ ಇರೋ ಚಹಾವನ್ನ ಮತ್ತೆ ಮತ್ತೆ ಕುದಿಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಕೂಡ ಅಷ್ಟೇ ಸತ್ಯವಾಗಿದೆ.. ಇದರಿಂದ ಅಡ್ಡ ಪರಿಣಾಮಗಳೂ ಬೀರುತ್ತವೆ..