1). ಐಸ್‍ನಲ್ಲಿಟ್ಟ ಮೀನುಗಳನ್ನು ಎರಡು ದಿನಕ್ಕಿಂತ ಹೆಚ್ಚು ದಿನ ಇಟ್ಟರೆ ಒಳ್ಳೆಯದಲ್ಲ. ಮೀನಿನ ಕಿವಿರುಗಳನ್ನು ನೋಡಬೇಕು. ಮೀನು ಹಾಳಾಗಿಲ್ಲದಿದ್ದರೆ ಅವು ಕೆಂಪಾಗಿರುತ್ತವೆ. ಹಾಳಾದ ಮೀನಿನಲ್ಲಿ ಬಣ್ಣ ಕಳೆದುಕೊಂಡಿರುತ್ತದೆ.
2). ಕಿವಿರುಗಳ ಬಣ್ಣ ಹೋಗದಂತೆ ಕೆಲವರು ರಾಸಾಯನಿಕ ಹಚ್ಚಬಹುದು. ಐಸ್‍ನಲ್ಲಿಡುವುದರಿಂದಲೂ ಕಿವಿರುಗಳ ಬಣ್ಣ ಬದಲಾಗಬಹುದು. ಮೀನಿನ ದೇಹ ಗಟ್ಟಿಯಾಗಿದೆಯೇ ಎಂದು ಪರೀಕ್ಷಿಸಬೇಕು. ಮೀನಿನ ದೇಹ ಗಟ್ಟಿಯಾಗಿದ್ದರೆ ಖರೀದಿಸಬಹುದು.
3). ಕಿವಿರುಗಳನ್ನು ಬೇರ್ಪಡಿಸಿ ಬೆರಳುಗಳಿಂದ ಮುಟ್ಟಿದರೆ ಅಂಟಂಟಾಗಿ ಇದ್ದರೆ ಅದು ತಾಜಾ ಮೀನು. ಸಂಶಯ ಬೇಡ.
4). ಮೀನಿನ ಕಣ್ಣುಗಳು ಚೈತನ್ಯದಿಂದ ಇರಬೇಕು. ಸ್ಪಷ್ಟವಾಗಿ ನಮ್ಮನ್ನು ನೋಡುವಂತಿದ್ದರೆ ಒಳ್ಳೆಯ ಮೀನು. ರಕ್ತದ ಬಣ್ಣ, ಮಸುಕು ಬಣ್ಣ, ಉಬ್ಬಿದ ಕಣ್ಣುಗಳಿದ್ದರೆ ಅದು ಹಳೆಯ ಮೀನು.
5). ರಾಸಾಯನಿಕ ಬಳಿದ ಮೀನುಗಳಿಂದ ಔಷಧದ ವಾಸನೆ ಬರುತ್ತದೆ. ಈ ಬಗ್ಗೆ ಗಮನ ನೀಡಿ
6). ಮೀನಿನ ತಲೆಯನ್ನು ಹಿಡಿದು ಎತ್ತಿದಾಗ ಬಾಲ ಗಟ್ಟಿಯಾಗಿ ನಿಲ್ಲಬೇಕು. ಹಾಗಲ್ಲದೆ ಬಾಲ ಜೋತುಬಿದ್ದಿದ್ದರೆ ಹಾಳಾದ ಮೀನು. ಒಳ್ಳೆಯ ಮೀನಿನ ತಲೆ ಎತ್ತಿದಾಗ ಗಟ್ಟಿಯಾಗಿರುತ್ತದೆ.
7). ಕೆಲವು ಮೀನುಗಳ ಕಿವಿರುಗಳು ಬಣ್ಣ ಕಳೆದುಕೊಂಡಿದ್ದರೂ ಅವು ಒಳ್ಳೆಯ ಮೀನಾಗಿರಬಹುದು. ದೇಹ, ಬಾಲ, ಕಣ್ಣುಗಳನ್ನು ಗಮನಿಸಿ.