ಐಸ್ ಕ್ರೀಮ್ ಎಲ್ಲರ ಫೇವರೇಟ್ ಡೆಸರ್ಟ್‌ಗಳಲ್ಲಿ ಒಂದು.
ತರಾವರಿ ಫ್ಲೇವರ್‌ಗಳಲ್ಲಿ ಐಸ್ ಕ್ರೀಮ್‌ಗಳು ದೊರೆಯುತ್ತವೆ.
ವೆನೀಲಾ, ಚಾಕೋಲೇಟ್, ಪಿಸ್ತಾ, ಮ್ಯಾಂಗೊ ಇವೆಲ್ಲಾ ಕಾಮನ್ ಹಾಗೂ ಬಹಳ ಹಳೆಯ ಐಸ್‌ಕ್ರೀಮ್ ಫ್ಲೇವರ್‌ಗಳು.
ಆದರೆ ಇಲ್ಲಿವೆ ನೋಡಿ ವಿಚಿತ್ರ ಫ್ಲೇವರ್ ಐಸ್‌ಕ್ರೀಮ್‌ಗಳು, ಒಂದು ಸಾರಿಯಾದರೂ ರುಚಿ ನೋಡಲೇಬೇಕು.
ಕುಂಬಳಕಾಯಿ ಐಸ್ ಕ್ರೀಮ್: ಕುಂಬಳಕಾಯಿ ಹಲ್ವಾ ಕಾಮನ್, ಅದರೆ ಇದರ ಐಸ್ ಕ್ರೀಮ್ ಬಗ್ಗೆ ಯಾವಾಗದರೂ ಕೇಳಿದ್ರಾ?
ಪಾನ್ ಐಸ್ ಕ್ರೀಮ್: ಬೀಡಾ ರುಚಿಯನ್ನು ಹೊಂದಿರುತ್ತದೆ ಪಾನ್ ಐಸ್ ಕ್ರೀಮ್. ಮಿಂಟ್ ಮೌತ್ ಫ್ರೆಶ್ನರ್ ಫ್ಲೇವರ್‌ನಲ್ಲಿರುತ್ತದೆ ಈ ಐಸ್‌ಕ್ರೀಮ್.
ಬ್ರೆಸ್ಟ್ ಮಿಲ್ಕ್ ಐಸ್ ಕ್ರೀಮ್: ಎದೆ ಹಾಲಿನ ಫ್ಲೇವರ್ ಐಸ್ ಕ್ರೀಮ್‌ಗಳು ಸಹ ಇದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ವಾ? ಕುತೂಹಲಕ್ಕೆ ಒಮ್ಮೆ ಪ್ರಯತ್ನಿಸಲು ಬಯಸಬಹುದು ಈ ಫ್ಲೇವರ್.
ನೈಟ್ರೋಜನ್ ಐಸ್ ಕ್ರೀಮ್: ನೈಟ್ರೋಜನ್ ಐಸ್ ಕ್ರೀಮ್ ಸಕತ್ ಫೆಮಸ್ ಆಗಿದೆ. ಬೆಂಗಳೂರಿನಲ್ಲಿ, ಹೊಗೆ ಎಂಬ ರೆಸ್ಟೋರೆಂಟ್‌ನಲ್ಲಿ ಪರ್ಫೇಕ್ಟ್ ನೈಟ್ರೋಜನ್ ಐಸ್ ಕ್ರೀಮ್ ದೊರೆಯುತ್ತದೆ.
ಬೆಳ್ಳುಳ್ಳಿ ಐಸ್ ಕ್ರೀಮ್: ಸಾಮಾನ್ಯವಾಗಿ ನಮ್ಮ ಭಾರತೀಯ ಮಸಾಲೆ ಅಡುಗೆಗಳಲ್ಲಿ ಬೆಳ್ಳುಳ್ಳಿ ಅವಶ್ಯಕ. ಆದರೆ ಸಿಹಿಯ ಜೊತೆ ಇದರ ಫ್ಲೇವರ್ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಐಸ್‌ಕ್ರೀಮ್ ಟೇಸ್ಟ್ ನೋಡಿದರೆ ಆಶ್ಚರ್ಯವಾಗಬಹುದು.
ದುರಿಯನ್ ಐಸ್ ಕ್ರೀಮ್: ಈ ಹಣ್ಣಿನ ಪರಿಚಯವಿದ್ದರಿಗೆ ಇದರ ವಾಸನೆಯು ತಿಳಿದಿರುತ್ತದೆ. ಆದರೆ ಇದರ ರುಚಿ ಹಲಸಿನ ಹಣ್ಣಿನಂತೆಯೇ ಇರುತ್ತದೆ. ಆದ್ದರಿಂದ ಇದನ್ನು ಹಲಸಿನಹಣ್ಣಿನ ಬದಲಿಗೆ ಬಳಸಬಹುದು.