ಏನಾದರೂತಿನ್ನಬೇಕೆಂದಿನಿಸಿದಾಗಮೊದಲು ನೆನಪಾಗುವುದು ಬಿಸಿ ಮ್ಯಾಗಿ ನೂಡಲ್ಸ್.
ಬಹುತೇಕ ಎಲ್ಲರಿಗೂ ಫೆವರೇಟ್ ಮ್ಯಾಗಿ . ಈಸಿಯಾಗಿ ದಿಢೀರ್ ಅಂತ ತಯಾರಿಸಬಹುದಾದ ಇದರ ರುಚಿಗೆ ಟೇಸ್ಟ್ ಮೇಕರ್ ಪುಡಿಯೇ ಕಾರಣ.
ಯಾವುದೇ ಪ್ರಿಸರ್ವೇಟಿವ್ ಇಲ್ಲದೆ ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಆದರೆ ಆ ಮಸಾಲೆ ಆರೋಗ್ಯಕರ ಅಲ್ಲ ಎಂದು ನಿಮಗೆ ಗೊತ್ತಾ? ಸೋಡಿಯಂ ಅಧಿಕವಾಗಿದೆ ಮತ್ತು ಇದು ಎಂಎಸ್‌ಜಿ ಯನ್ನು ಹೊಂದಿರುತ್ತದೆ. ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಮನೆಯಲ್ಲೇ ಆ ಮಸಾಲಾವನ್ನು ತಯಾರಿಸಬಹುದು ಹಾಗೂ ಆರೋಗ್ಯಕ್ಕಾಗುವ ಹಾನಿಯನ್ನು ಕಡಿಮೆ ಮಾಡಬಹುದು. ಈ ರುಚಿಯಾದ ಪುಡಿಯನ್ನು ತಯಾರಿಸಲು ಮೂರು ವಿಭಿನ್ನ ವಿಧಾನಗಳು ಇಲ್ಲಿವೆ. ಟ್ರೈ ಮಾಡಿ.
15 ಇನ್‌ಗ್ರಿಡಿಯಂಟ್ ರೆಸಿಪಿ: ಪ್ಯಾಕೇಟ್ ಮ್ಯಾಗಿ ಪರಿಮಳ ಪಡೆಯಲು ಈ 15 ಇನ್‌ಗ್ರಿಡಿಯಂಟ್ ರೆಸಿಪಿ ಬೆಸ್ಟ್. ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಪುಡಿ, ಸಕ್ಕರೆ, ಚಿಲ್ಲಿ ಫ್ಲೇಕ್ಸ್ ಮತ್ತು ಇತರ ಪದಾರ್ಥಗಳನ್ನು ಸೇರಿಸಿ ಮತ್ತು ಬ್ಲೆಂಡರ್‌ನಲ್ಲಿ ಪುಡಿ ಮಾಡಿ.
ನ್ಯಾಚುರಲ್ ವಿಧಾನ: ಮ್ಯಾಗಿ ಮಸಾಲಾ ತಯಾರಿಸುವ ಈ ವಿಧಾನ ಸ್ವಲ್ಪ ಅಸಾಂಪ್ರದಾಯಿಕ. ಆದರೆ ತುಂಬಾ ಆರೋಗ್ಯಕರ. ಪುಡಿ ಬದಲಿಗೆ ಸಂಪೂರ್ಣ ಮಸಾಲೆಗಳನ್ನು ಬಳಸುವುದು. 2 ಟೀಸ್ಪೂನ್ ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕಸೂರಿ ಮೆಥಿ ಪುಡಿ ಮಾಡಬೇಕಾಗುತ್ತದೆ. ಇದಕ್ಕೆ 6 ಲವಂಗ, 1 ½ ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 3 ಟೀಸ್ಪೂನ್ ಬೆಳ್ಳುಳ್ಳಿ ಪುಡಿ ಮತ್ತು ½ ಟೀಸ್ಪೂನ್ ಜಾಯಿಕಾಯಿ ಪುಡಿ ಸೇರಿಸುವುದು.
ಟೇಸ್ಟ್ ಮೇಕರ್‌ಗೆ ಬುಲಿಯನ್ ಎಂದು ಕರೆಯಲಾಗುತ್ತದೆ. ಟೇಸ್ಟ್ ಮೇಕರ್ ಅಂದರೆ ಎಲ್ಲಾ ರುಚಿಗಳನ್ನು ಹೊಂದಿರುವ ಗಟ್ಟಿಯಾದ ಕ್ಯುಬ್. ಇದನ್ನು ಮಾಡಲು, ಒಂದು ಪಾತ್ರೆಯಲ್ಲಿ ತೆಂಗಿನಕಾಯಿ ಫ್ಯಾಟ್ ಅಥವಾ ಎಣ್ಣೆ ಸೇರಿಸಿ, ಕತ್ತರಿಸಿದ ಈರುಳ್ಳಿ ಅಥವಾ ಅಣಬೆ, ನಂತರ ಆಲೂಗಡ್ಡೆ ಹಾಕಿ ಸ್ವಲ್ಪ ನೀರು ಸೇರಿಸಿ ಮತ್ತು ಉಪ್ಪು, ಮೆಣಸು ಮತ್ತು ಕೆಲವು ಗಿಡಮೂಲಿಕೆಗಳೊಂದಿಗೆ ಕುದಿಸಿ. ಮಾಂಸಾಹಾರಿಯಾಗಿದ್ದರೆ, ನಂತರ ಚಿಕನ್ ಫ್ಯಾಟ್ ಸೇರಿಸಿ. ಮಿಶ್ರಣವನ್ನು ಕುದಿಸಿದ ನಂತರ, ಅದನ್ನು ಫ್ರೀಜ್ ಮಾಡಿ ಮತ್ತು ಅದನ್ನು ಗಟ್ಟಿಯಾದಾಗ ಬಳಸಿ.