ಕೊರೋನಾದಿಂದಾಗಿ ಜನರು ಇಮ್ಯುನಿಟಿಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಒಂದಷ್ಟು ಜನರ ಇಮ್ಯನಿಟಿ ಪವರ್ ಚೆನ್ನಾಗಿದ್ರೆ ಇನ್ನು ಕೆಲವರು ಆಹಾರ ಕ್ರಮಗಳನ್ನು ಬದಲಾಯಿಸಲಾರಂಭಿಸಿದ್ದಾರೆ.
ಜಿಂಜರ್ ಟೀ, ತುಳಸಿ ಟೀಯಂತಹ ಹರ್ಬಲ್ ಟೀಗಳ ಮಹತ್ವವನ್ನು ಜನರು ಅರಿತುಕೊಂಡಿದ್ದಾರೆ.
ಈಗ ರೋಸ್ ಮುಲೇತಿ ಟೀ ಕೂಡಾ ಫೇಮಸ್ ಆಗುತ್ತಿದೆ. ಇದರಲ್ಲಿಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿವೆ.
ರೋಸ್ ಮುಲೇತಿ ಟೀಯಲ್ಲಿ ರೋಗ ನಿರೋಧಕ ಅಂಶಗಳಿದ್ದು, ಇದು ಕೆಮ್ಮು ಮತ್ತು ಶೀತವನ್ನೂ ಶಮನ ಮಾಡುತ್ತದೆ.
ಗಟ್ಟಿ ಆರೋಗ್ಯಕ್ಕೆ ರೋಸ್ ಮುಲೇತಿ ಟೀ ಸಹಕಾರಿ. ಇದು ಜೀರ್ಣ ಕ್ರಿಯೆಗೂ ಸಹಕಾರಿ.
ಮುಲೇತಿ ಹಾಗೂ ಗುಲಾಬಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ. ಇದು ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಜೊತೆಗೆ ಉರಿಯೂತವನ್ನೂ ಕಡಿಮೆ ಮಾಡುತ್ತದೆ.
ಇದು ಮೆಟಬಾಲಿಸಂ ಹೆಚ್ಚಿಸಿ ತೂಕ ಕಡಿಮೆ ಮಾಡುವುದಕ್ಕೂ ಸಹಕಾರಿ
ರೋಸ್ ಮುಲೇತಿ ಟೀ ಮಾಡೋದು ಬಹಳ ಸುಲಭ. ಮನೆಯಲ್ಲೇ ಮಾಡಿ ಸವಿಯಬಹುದು.
ಫ್ರೆಶ್ ಗುಲಾಬಿ ದಳಗಳನ್ನು ಚೆನ್ನಾಗಿ ತೊಳೆಯಿರಿ. ಒಣಗಿದ ಗುಲಾಬಿ ದಳ ಬಳಸುತ್ತಿದ್ದರೆ ತೋಲೆಯುವ ಅವಶ್ಯಕತೆ ಇಲ್ಲ.
ನೀರು, ಗುಲಾಬಿ ದಳ, ಮುಲೇತಿ ಸೇರಿಸಿ ಕುದಿಸಿ. ನೀರಿನ ಬಣ್ಣ ಬದಲಾದಾಗ ಬಸಿಯಿರಿ, ನಿಮಗಿಷ್ಟವಾಗುವ ಸಿಹಿ ಸೇರಿಸಿ ಸವಿಯಿರಿ.