ಪಾನಿಪುರಿ ಎಲ್ಲರಿಗೂ ಇಷ್ಟವಾಗುವ ತಿಂಡಿಯಾಗಿದ್ದು, ಅದರ ರುಚಿಗೆ ಮುಖ್ಯ ಕಾರಣ ಆಲೂಗಡ್ಡೆ ಮಿಕ್ಸ್. ಈ ಲೇಖನದಲ್ಲಿ, ಪಾನಿಪುರಿಯ ಆತ್ಮದಂತಿರುವ ರುಚಿಕರವಾದ ಆಲೂಗಡ್ಡೆ ಮಸಾಲೆ ಮಿಕ್ಸ್ ಅನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನವನ್ನು ಹಂತ-ಹಂತವಾಗಿ ವಿವರಿಸಲಾಗಿದೆ.
ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಅಂತೇಳಿ. ಯಾರೇ ಆದ್ರೂ ಪಾನಿಪುರಿ ಅಂದ್ರೆ ಓಕೆ ಅಂತಾ ಹೇಳ್ತಾರೆ. ಅತ್ಯಂತ ಕಡಿಮೆ ಬೆಲೆಗೆ ಸಿಗುವ ಆಹಾರಗಳಲ್ಲಿ ಪಾನಿಪುರಿ ಸಹ ಒಂದಾಗಿದೆ. ಸಂಜೆ ಆಗ್ತಿದ್ದಂತೆ ಏನಾದ್ರೂ ತಿನ್ನೋಣ ಅಂದ್ರೆ ಕಣ್ಮುಂದೆ ಪಾನಿಪುರಿ ಬರುತ್ತದೆ. ಪುರಿಯಲ್ಲಿ ಅಲೂಗಡ್ಡೆಯ ಮಿಕ್ಸ್ ಹಾಕಿ, ಅದರೊಳಗೆ ಹುಳಿಯಾಗಿರೋ ನೀರು ಸೇರಿಸಿ ತಿನ್ನೋದೇ ಪಾನಿಪುರಿ. ಈ ಲೇಖನದಲ್ಲಿ ಪಾನಿಪುರಿಯ ಆತ್ಮದಂತಿರೋ ಆಲೂಗಡ್ಡೆ ಮಿಕ್ಸ್ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.
25
ಮಸಾಲೆ ಆಲೂಗಡ್ಡೆ ಮಿಕ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ: 2, ಹಸಿಮೆಣಸಿನಕಾಯಿ: 2, ಹಸಿಬಟಾಣಿ: 2 ಟೀ ಸ್ಪೂನ್, ಪೆಪ್ಪರ್ ಪೌಡರ್; 1/2 ಟೀ ಸ್ಪೂನ್, ಚಿಕ್ಕ ಈರುಳ್ಳಿ: 1, ಕೋತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು (ಹಸಿಮೆಣಸಿನಕಾಯಿ ಬದಲು ಬೇಕಿದ್ರೆ ಅಚ್ಚ ಖಾರದ ಪುಡಿ ಅಥವಾ ರೆಡ್ ಚಿಲ್ಲಿ ಸೀಡ್ಸ್ ಬಳಸಬಹುದು
35
ಮಸಾಲೆ ಆಲೂಗಡ್ಡೆ ಮಿಕ್ಸ್ ತಯಾರಿಸುವ ವಿಧಾನ
ಮೊದಲಿಗೆ ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ಮೂರರಿಂದ ನಾಲ್ಕು ವಿಷಲ್ ಕೂಗಿಸಿಕೊಳ್ಳಿ. ನಂತರ ತಣ್ಣಗಾದ ಮೇಲೆ ಅಲೂಗಡ್ಡೆ ಸಿಪ್ಪೆ ಬಿಡಿಸಿಕೊಂಡು ಅಗಲವಾದ ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಆಲೂಗಡ್ಡೆ ಸಾಫ್ಟ್ ಆಗಿರಬೇಕು.
ತದನಂತರ ಹಸಿಮೆಣಸಿನಕಾಯಿಯನ್ನು ತರಿತರಿಯಾಗಿ ಜಜ್ಜಿಕೊಳ್ಳಿ. ಹಾಗೆಯೇ ಹಸಿಬಟಾಣಿಯನ್ನು ಒಂದರಲ್ಲಿ ಎರಡು ಪೀಸ್ ಆಗುವಂತೆ ಜಜ್ಜಿಕೊಳ್ಳಿ. ಇದಾದ ಬಳಿಕ ಈರುಳ್ಳಿ ಮತ್ತು ಕೋತಂಬರಿ ಸೊಪ್ಪನ್ನು ಅತ್ಯಂತ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಈಗ ಜಜ್ಜಿಕೊಂಡಿರುವ ಹಸಿಮೆಣಸಿನಕಾಯಿ, ಹಸಿಬಟಾಣಿ ಮತ್ತು ಕತ್ತರಿಸಿಕೊಂಡು ಈರುಳ್ಳಿ, ಕೋತಂಬರಿಯನ್ನು ಆಲೂಗಡ್ಡೆಯ ಬೌಲ್‌ಗೆ ಸೇರಿಸಿಕೊಳ್ಳಿ.
ನಂತರ ಇದೇ ಬೌಲ್‌ಗೆ ಪೆಪ್ಪರ್ ಪೌಡರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡ್ರೆ ರುಚಿಯಾದ ಆಲೂಗಡ್ಡೆ ಮಿಕ್ಸ್ ರೆಡಿಯಾಗುತ್ತದೆ. ಪುರಿಯೊಳಗೆ ಆಲೂಗಡ್ಡೆ ಮಿಕ್ಸ್ ಹಾಕಿ, ಅದರ ಮೇಲೊಂದಿಷ್ಟು ಸೇವ್ ಹಾಕಿಕೊಂಡು ಪಾನಿಯೊಳಗೆ ಅದ್ದಿ ತಿಂದ್ರೆ ಸ್ವರ್ಗಕ್ಕೆ ಮೂರೇ ಗೇಣು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.