ಶುಂಠಿ, ಏಲಕ್ಕಿ ಸೇರಿಸಿದ್ರೂ ಟೀ ರುಚಿ, ಘಮ ಬರ್ತಿಲ್ಲ ಅಂದ್ರೆ ಸೇರಿಸುವ ಸರಿಯಾದ ಸಮಯ ತಿಳ್ಕೊಳ್ಳಿ

Published : Jan 25, 2026, 12:43 PM IST

Right time to add ginger and cardamom to tea: ನಾವೆಲ್ಲರೂ ಟೀ ರುಚಿಯಾಗಿ ಬರಲೆಂದು ಶುಂಠಿ ಮತ್ತು ಏಲಕ್ಕಿಯನ್ನು ಸೇರಿಸುತ್ತೇವೆ. ಆದರೆ ಅದು ರೆಸ್ಟೋರೆಂಟ್‌ನಲ್ಲಿರುವ ಟೀಯಂತೆ ಪರಿಮಳವನ್ನು ಹೊಂದಿರುವುದಿಲ್ಲ. ಇದರ ಹಿಂದಿನ ಕಾರಣವೆಂದರೆ ನಾವು ಅವುಗಳನ್ನು ತಪ್ಪು ಸಮಯದಲ್ಲಿ ಸೇರಿಸುತ್ತೇವೆ.

PREV
16
ಸ್ವಲ್ಪ ಭಿನ್ನವಾಗಿಯೇ ಮಾಡುತ್ತಾರೆ

ಭಾರತೀಯರಿಗೆ ಅಚ್ಚುಮೆಚ್ಚಿನ ಪಾನೀಯಂದರೆ ಅದು ಟೀ ಮಾತ್ರ. ಮುಂಜಾನೆಯಾಗಿರಲಿ ಅಥವಾ ಸಂಜೆಯಾಗಿರಲಿ ಒಂದು ಕಪ್ ಟೀ ಇಲ್ಲದೆ ಕೆಲಸ ಮಾಡುವುದು ಅಸಾಧ್ಯ. ಯಾರೇ ಟೀ ಮಾಡುವಾಗಲೂ ಸ್ವಲ್ಪ ಭಿನ್ನವಾಗಿಯೇ ಮಾಡುತ್ತಾರೆ. ಕೆಲವರು ಹೆಚ್ಚು ಹಾಲಿನೊಂದಿಗೆ ಮಾಡುತ್ತಾರೆ. ಮತ್ತೆ ಕೆಲವರು ಸಾಕಷ್ಟು ಟೀಪುಡಿ ಸೇರಿಸಿ ಕುಡಿಯುತ್ತಾರೆ. ಇದೆಲ್ಲಾ ಓಕೆ. ಆದರೆ ಎಲ್ಲಾ ಟೀ ಪ್ರಿಯರೂ ಸಾಮಾನ್ಯವಾಗಿ ಸುವಾಸನೆ ವಿಚಾರದಲ್ಲಿ ಕಾಂಪ್ರಮೈಸ್ ಆಗಲ್ಲ.

26
ಅದ್ಯಾಕೆ ಹಾಗೆ ಅಂತೀರಾ?.

ನಾವು ಡಾಬಾ ಅಥವಾ ರಸ್ತೆಬದಿಯ ಅಂಗಡಿಗಳಲ್ಲಿ ಮಾರುವ ಟೀ ಕುಡಿಯುವಾಗ ಏಲಕ್ಕಿ ಮತ್ತು ಶುಂಠಿಯ ಸುವಾಸನೆ ಘಮ ಎದ್ದು ಕಾಣುತ್ತದೆ. ಆಗ ನಾವು ಇದಪ್ಪಾ ಟೀ ಅಂದ್ರೆ ಅಂದುಕೊಳ್ತೇವೆ. ಆದರೆ ಇದೇ ಟೆಕ್ನಿಕ್ ಮನೆಯಲ್ಲಿ ಉಪಯೋಗಿಸಿದ್ರೆ ಬರಲ್ಲ. ಅದ್ಯಾಕೆ ಹಾಗೆ ಅಂತೀರಾ?.

36
ಶುಂಠಿ ಮತ್ತು ಏಲಕ್ಕಿಯನ್ನು ಯಾವಾಗ ಸೇರಿಸಬೇಕು?

ನಾವೆಲ್ಲರೂ ಟೀ ರುಚಿಯಾಗಿ ಬರಲೆಂದು ಶುಂಠಿ ಮತ್ತು ಏಲಕ್ಕಿಯನ್ನು ಸೇರಿಸುತ್ತೇವೆ. ಆದರೆ ಅದು ರೆಸ್ಟೋರೆಂಟ್‌ನಲ್ಲಿರುವ ಟೀಯಂತೆ ಪರಿಮಳವನ್ನು ಹೊಂದಿರುವುದಿಲ್ಲ. ಇದರ ಹಿಂದಿನ ಕಾರಣವೆಂದರೆ ನಾವು ಅವುಗಳನ್ನು ತಪ್ಪು ಸಮಯದಲ್ಲಿ ಸೇರಿಸುತ್ತೇವೆ. ಹೌದು. ಏಲಕ್ಕಿ ಮತ್ತು ಶುಂಠಿ ವಿಭಿನ್ನ ಗುಣಗಳನ್ನು ಹೊಂದಿವೆ ಮತ್ತು ಅವುಗಳನ್ನು ಸೇರಿಸುವ ಸಮಯವೂ ಬದಲಾಗುತ್ತದೆ. ಹೆಚ್ಚಿನ ಜನರು ತಪ್ಪು ಮಾಡುವುದು ಇಲ್ಲೇ. ಆದ್ದರಿಂದ ಟೀಗೆ ಶುಂಠಿ ಮತ್ತು ಏಲಕ್ಕಿಯನ್ನು ಯಾವಾಗ ಸೇರಿಸಬೇಕೆಂದು ನೋಡೋಣ..

46
ಸರಿಯಾದ ವಿಧಾನವೆಂದರೆ

"ಕುಕ್ ಈಸಿ ವಿಥ್ ರೋಹನ್" ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ರೋಹನ್ ವಿವರಿಸುವುದೇನೆಂದರೆ ಹೆಚ್ಚಿನ ಜನರು ನೀರನ್ನು ಕುದಿಸುವಾಗ ಏಲಕ್ಕಿಯನ್ನು ಸೇರಿಸುತ್ತಾರೆ. ಹಾಗೆ ಮಾಡುವುದರಿಂದ ಏಲಕ್ಕಿಯ ಸುವಾಸನೆ ಮತ್ತು ರುಚಿ ಎರಡೂ ಉಗಿಯೊಂದಿಗೆ ಆವಿಯಾಗುತ್ತದೆ. ಸರಿಯಾದ ವಿಧಾನವೆಂದರೆ ಸ್ಟೌವ್ ಆಫ್ ಮಾಡುವ 2-3 ನಿಮಿಷಗಳ ಮೊದಲು ಮಾತ್ರ ಟೀಗೆ ಏಲಕ್ಕಿಯನ್ನು ಸೇರಿಸಬೇಕು. ಇದು ಏಲಕ್ಕಿಯ ಸುವಾಸನೆ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ.

56
ಮೊದಲಿಗಿಂತ ಟೀ ಹೆಚ್ಚು ಆರೊಮ್ಯಾಟಿಕ್

ಇನ್ನು ಶುಂಠಿಯ ಬಗ್ಗೆ ಹೇಳುವುದಾದರೆ, ಸ್ವಲ್ಪ ಹೊತ್ತು ಕುದಿಸಿದಾಗ ಮಾತ್ರ ಅದರ ಸುವಾಸನೆ ಹೊರಬರುತದೆ. ಆದ್ದರಿಂದ ನೀರು ಕುದಿಯುವ ಸಮಯದಲ್ಲೇ ಶುಂಠಿ ಸೇರಿಸಬೇಕು. ಈ ಸಿಂಪಲ್ ಟಿಪ್ಸ್‌ ಟೀ ಪರ್‌ಫೆಕ್ಟ್ ಆಗಿ ಹೊರಬರಲು ಸಹಾಯ ಮಾಡುತ್ತದೆ. ಮೊದಲಿಗಿಂತ ಟೀ ಹೆಚ್ಚು ಆರೊಮ್ಯಾಟಿಕ್ ಮತ್ತು ರುಚಿಕರವಾಗಿರುವುದನ್ನು ನೀವು ಗಮನಿಸಬಹುದು.

66
ಇದರ ಹಿಂದಿದೆ ಸರಳ ವಿಜ್ಞಾನ

ಈಗ ನೀವು ಏಲಕ್ಕಿ ಮತ್ತು ಶುಂಠಿಯನ್ನು ಸೇರಿಸುವ ಸಮಯವನ್ನು ಬದಲಾಯಿಸಿದರೆ ಏನಾಗುತ್ತದೆ ಎಂದು ಆಶ್ಚರ್ಯ ಪಡುತ್ತಿರಬಹುದು. ಆದರೆ ಇದರ ಹಿಂದೆ ಒಂದು ಸರಳ ವಿಜ್ಞಾನವಿದೆ. ಏಲಕ್ಕಿಯಲ್ಲಿರುವ ಸಾರಭೂತ ತೈಲಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಹಾಗೆಯೇ ಹಾಲಿನಲ್ಲಿರುವ ಕೊಬ್ಬು ಅವುಗಳನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಹೆಚ್ಚು ಪರಿಮಳಯುಕ್ತವಾಗಿರುತ್ತದೆ. ಹಾಗೆಯೇ ಸ್ವಲ್ಪ ಸಮಯದವರೆಗೆ ಶುಂಠಿಯನ್ನು ನೀರಿನಲ್ಲಿ ಕುದಿಸುವುದರಿಂದ ಅದರ ಸುವಾಸನೆ ಮತ್ತು ರುಚಿ ಹೊರಬರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories