ಮರಗೆಣಸು ಒಂದು ಪೌಷ್ಠಿಕಾಂಶದಿಂದ ಸಮೃದ್ಧವಾದ ಆಹಾರ ಕೇರಳ ಹಾಗೂ ಕರಾವಳಿ ಭಾಗದಲ್ಲಿ ಇದು ಸಾಮಾನ್ಯವಾಗಿ ಬೆಳೆಯುವ ಬೆಳೆ ಆಗಿದ್ದು, ಒಣ ಪ್ರದೇಶ ಮತ್ತೆ ಬೆಟ್ಟ ಪ್ರದೇಶಗಳಲ್ಲಿ ಇದು ಜಾಸ್ತಿ ಬೆಳೆಯುತ್ತೆ.
25
ಮರಗೆಣಸಿನಲ್ಲಿರುವ ಪೋಷಕಾಂಶಗಳು: ಕ್ಯಾಲೋರಿಗಳು, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ತಾಮ್ರ, ಥಯಾಮಿನ್, ಫೋಲೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ, ವಿಟಮಿನ್ ಬಿ6 ಮುಂತಾದ ಪೋಷಕಾಂಶಗಳು ಈ ಮರಗೆಣಸಿನಲ್ಲಿದೆ.
35
ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತೆ: ಮರಗೆಣಸಿನಲ್ಲಿ ಪೊಟ್ಯಾಸಿಯಮ್ ಜಾಸ್ತಿ ಇರೋದ್ರಿಂದ ಇದು ರಕ್ತದ ಒತ್ತಡವನ್ನ ಕಡಿಮೆ ಮಾಡೋಕೆ ಸಹಾಯ ಮಾಡುತ್ತೆ. ರಕ್ತ ಹೆಚ್ಚಾದಾಗ ಸೋಡಿಯಂನ ಸಮತೋಲನ ಕಾಪಾಡುತ್ತೆ.
45
ಮರಗೆಣಸು ಕೊಬ್ಬಿನ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತೆ. ರಕ್ತದ ಪ್ರಮಾಣ, ಕೊಬ್ಬು, ಸೊಂಟದ ಸುತ್ತ ಇರುವ ಕೊಬ್ಬನ್ನು ಕಡಿಮೆ ಮಾಡುತ್ತೆ.
55
ಆದರೆ ಮರಗೆಣಸಿನ ಅತೀಯಾದ ಸೇವನೆ ಊತ, ವಾಂತಿ, ಉಸಿರಾಡಲು ಕಷ್ಟ ಆಗೋ ತರ ಆಗತ್ತೆ. ಆದ್ರೆ ಈ ಮರಗೆಣಸು ಜೀರ್ಣಕ್ರಿಯೆಗೆ ಅತೀ ಉತ್ತಮವಾದ ಆಹಾರವಾಗಿದೆ.