ಭಾರತದ ಈ ಸ್ಥಳವನ್ನೇ 'ಕುಲ್ಫಿ ಕ್ಯಾಪಿಟಲ್' ಎಂದು ಕರೆಯಲು ಕಾರಣವೇನು ಗೊತ್ತೇ?

Published : May 02, 2026, 06:00 PM IST

Kulfi Capital of India: ಈ ಸ್ಥಳವನ್ನು "ಭಾರತದ ಕುಲ್ಫಿ ರಾಜಧಾನಿ" ಎಂದೇ ಕರೆಯಲಾಗುತ್ತದೆ. ಮೊಘಲರ ಕಾಲದಿಂದಲೂ ಚಾಲ್ತಿಯಲ್ಲಿರುವ ಈ ಸಾಂಪ್ರದಾಯಿಕ ಸಿಹಿ ತಿನಿಸು ತನ್ನ ಸಮೃದ್ಧವಾದ ಕೆನೆಭರಿತ ರುಚಿಗೆ ಹೆಸರುವಾಸಿಯಾಗಿದೆ. ಅಂದಹಾಗೆ ವಿವಿಧ ವಿಧದ ಕುಲ್ಫಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

PREV
15
ಐಸ್‌ಕ್ರೀಮ್‌ಗಿಂತ ಭಿನ್ನ

ಕುಲ್ಫಿ ಭಾರತದ ಅತ್ಯಂತ ಜನಪ್ರಿಯ ಘನೀಕೃತ ಸಿಹಿ ತಿನಿಸು(Frozen Dessert). ಇದನ್ನು ಮುಖ್ಯವಾಗಿ ಬೇಸಿಗೆಯ ಸಮಯದಲ್ಲಿ ಜನರು ಹೆಚ್ಚು ಇಷ್ಟಪಡುತ್ತಾರೆ. ಸಾಮಾನ್ಯ ಐಸ್‌ಕ್ರೀಮ್‌ಗಿಂತ ಭಿನ್ನವಾಗಿ, ಕುಲ್ಫಿಯನ್ನು ಹಾಲನ್ನು ನಿಧಾನವಾಗಿ ಕುದಿಸಿ ತಯಾರಿಸುವುದರಿಂದ ಇದು ಹೆಚ್ಚು ಮಂದವಾಗಿ ಮತ್ತು ಕೆನೆಯುಕ್ತವಾಗಿರುತ್ತದೆ.

25
ತಯಾರಿಸುವ ವಿಧಾನ

*ಕುಲ್ಫಿಯನ್ನು ತಯಾರಿಸಲು ಹಾಲನ್ನು ದಪ್ಪವಾಗುವವರೆಗೆ ನಿಧಾನವಾಗಿ ಕುದಿಸಲಾಗುತ್ತದೆ.
*ನಂತರ ಇದಕ್ಕೆ ಸಿಹಿಗಾಗಿ ಸಕ್ಕರೆ, ಏಲಕ್ಕಿ ಅಥವಾ ಕೇಸರಿಯಂತಹ ಸ್ವಾದಗಳನ್ನು ಬೆರೆಸಲಾಗುತ್ತದೆ.
*ಇದರ ಜೊತೆಗೆ ಬಾದಾಮಿ ಮತ್ತು ಪಿಸ್ತಾದಂತಹ ಒಣ ಹಣ್ಣುಗಳನ್ನು ಸೇರಿಸಿ, ಮಿಶ್ರಣವನ್ನು ಅಚ್ಚುಗಳಿಗೆ ಹಾಕಿ ಫ್ರೀಜ್ ಮಾಡಲಾಗುತ್ತದೆ.

35
ಜನಪ್ರಿಯ ವಿಧಗಳು

ಮಲೈ ಕುಲ್ಫಿ: ಇದು ಸರಳ ಮತ್ತು ಹೆಚ್ಚು ಕೆನೆಯುಕ್ತವಾಗಿರುತ್ತದೆ.
ಕೇಸರ್ ಪಿಸ್ತಾ ಕುಲ್ಫಿ: ಕೇಸರಿ ಮತ್ತು ಪಿಸ್ತಾ ಮಿಶ್ರಿತ ರುಚಿಕರ ಕುಲ್ಫಿ.
ಮ್ಯಾಂಗೋ ಕುಲ್ಫಿ: ಬೇಸಿಗೆಯ ಕಾಲದಲ್ಲಿ ಜನರು ಇದನ್ನು ಹೆಚ್ಚು ಇಷ್ಟಪಡುತ್ತಾರೆ.
ಪಾನ್ ಕುಲ್ಫಿ: ಇದು ವಿಶಿಷ್ಟವಾದ ಮತ್ತು ತಾಜಾತನ ನೀಡುವ ರುಚಿಯನ್ನು ಹೊಂದಿರುತ್ತದೆ.

45
ಇದೇ ನೋಡಿ ಕುಲ್ಫಿ ರಾಜಧಾನಿ

ಭಾರತದ ರಾಜಧಾನಿ ದೆಹಲಿಯನ್ನು 'ಕುಲ್ಫಿ ರಾಜಧಾನಿ' ಎಂದೂ ಕರೆಯಲಾಗುತ್ತದೆ. ಈ ನಗರದ ಸಣ್ಣ ಬೀದಿ ಬದಿಯ ಅಂಗಡಿಗಳಿಂದ ಹಿಡಿದು ದೊಡ್ಡ ಸಿಹಿ ತಿನಿಸುಗಳ ಮಳಿಗೆಗಳವರೆಗೆ ಎಲ್ಲೆಡೆ ಕುಲ್ಫಿ ಲಭ್ಯವಿದೆ. ಅದರಲ್ಲೂ ಹಳೆಯ ದೆಹಲಿಯ ಚಾಂದಿನಿ ಚೌಕ್ ತಾಜಾ ಮತ್ತು ರುಚಿಕರವಾದ ಕುಲ್ಫಿ ಮಾರಾಟಕ್ಕೆ ಬಹಳ ಪ್ರಸಿದ್ಧವಾಗಿದೆ.

55
ಆಸಕ್ತಿದಾಯಕ ಸಂಗತಿಗಳು

ಕುಲ್ಫಿಯು ಭಾರತದ ಅತ್ಯಂತ ಹಳೆಯ ಘನೀಕೃತ ಸಿಹಿ ತಿನಿಸುಗಳಲ್ಲಿ ಒಂದಾಗಿದ್ದು, ಇದು ಮೊಘಲರ ಕಾಲದಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಇದು ಐಸ್‌ಕ್ರೀಮ್‌ಗಿಂತ ದಪ್ಪವಾಗಿರುತ್ತದೆ ಏಕೆಂದರೆ ಇದನ್ನು ತಯಾರಿಸುವಾಗ ವಿಸ್ಕ್ (whipped) ಮಾಡಲಾಗುವುದಿಲ್ಲ. ಹಾಲನ್ನು ನಿಧಾನವಾಗಿ ಕುದಿಸುವ ಪ್ರಕ್ರಿಯೆಯು ಇದಕ್ಕೆ ಸಮೃದ್ಧವಾದ ರುಚಿಯನ್ನು ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories