ಮನೆಯಲ್ಲಿಯೇ ತುಂಬಾ ಟೇಸ್ಟಿಯಾಗಿ ನೊರೆ ಭರಿತ ಕಾಫಿ ಮಾಡುವ ಸಿಂಪಲ್ ವಿಧಾನ

Published : Jan 03, 2026, 04:29 PM IST

How to make coffee at home : ಮಷಿನ್ ಇಲ್ಲದೆಯೂ ಮನೆಯಲ್ಲಿ ರುಚಿಕರವಾದ ನೊರೆ ಬರುವ ಕಾಫಿಯನ್ನು ತಯಾರಿಸಬಹುದು. ಅದಕ್ಕೆ ದುಬಾರಿ ಪದಾರ್ಥಗಳು ಬೇಕಂತೇನಿಲ್ಲ. ಮಾಮೂಲಿ ಕಾಫಿಗೆ ಹಾಕುವ ಪದಾರ್ಥಗಳೇ ಸಾಕು.     

PREV
18
ಕೆನೆ ಭರಿತ ಕಾಫಿ

ಟೀಗಿಂತ ಕಾಫಿ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಇತ್ತೀಚೆಗೆ ಹೆಚ್ಚಿನ ಜನರು ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಇನ್ನು ಕಾಫಿ ಪ್ರಿಯರಿಗೆ ಒಂದು ಕಪ್ ನೊರೆ ಬರುವ, ಕೆನೆ ಭರಿತ ಕಾಫಿ ಇದ್ರೆ ಆ ದಿನವೇ ಉತ್ತಮವಾಗಿ ಆರಂಭವಾಗುತ್ತದೆ.

28
ತಯಾರಿಸುವ ವಿಧಾನ ಸ್ವಲ್ಪ ವಿಭಿನ್ನ

ಸ್ವಲ್ಪ ಅನುಕೂಲ ಇರುವವರಾದರೆ ಮನೆಯಲ್ಲಿ ಕಾಫಿ ಮಷಿನ್ ಇಟ್ಟುಕೊಳ್ತಾರೆ. ಕಾಫಿ ಅದ್ಭುತವಾಗಿ ಬರಲು ಇದು ಅತ್ಯಗತ್ಯ. ಆದರೆ ಮಷಿನ್ ಇಲ್ಲದೆಯೂ ಮನೆಯಲ್ಲಿ ರುಚಿಕರವಾದ ನೊರೆ ಬರುವ ಕಾಫಿಯನ್ನು ತಯಾರಿಸಬಹುದು. ಅದಕ್ಕೆ ದುಬಾರಿ ಪದಾರ್ಥಗಳು ಬೇಕಂತೇನಿಲ್ಲ. ಮಾಮೂಲಿ ಕಾಫಿಗೆ ಹಾಕುವ ಪದಾರ್ಥಗಳೇ ಸಾಕು. ತಯಾರಿಸುವ ವಿಧಾನವು ಸರಳವಾದರೂ ಸ್ವಲ್ಪ ವಿಭಿನ್ನವಷ್ಟೇ.

38
ಕಾಫಿ ಮಾಡುವುದು ಹೇಗೆ?

ವಿಶೇಷವೆಂದರೆ ಕಾಫಿ ತಯಾರಿಸುವಾಗ ನಿಮ್ಮ ಅಭಿರುಚಿಗೆ ಅನುಗುಣವಾಗಿಯೂ ಮಾಡಬಹುದು. ಇದು ನಿಮಗೆ ಫ್ರೆಶ್‌ನೆಸ್‌ ನೀಡುವುದಲ್ಲದೆ, ಅದರ ಸುವಾಸನೆಯು ನಿಮ್ಮ ಮನಸ್ಸನ್ನು ಸಹ ಉಲ್ಲಾಸಗೊಳಿಸುತ್ತದೆ. ಹಾಗಾದರೆ ಯಾವುದೇ ದುಬಾರಿ ಯಂತ್ರವಿಲ್ಲದೆ, ನೀವು ಮನೆಯಲ್ಲಿಯೇ ತಯಾರಿಸಬಹುದಾದ ಈ ವಿಶೇಷ ಕಾಫಿ ಮಾಡುವುದು ಹೇಗೆಂದು ತಿಳಿಯೋಣ..

48
ಕಾಫಿ ತಯಾರಿಸಲು ಬೇಕಾಗುವ ಪದಾರ್ಥಗಳು

ಇನ್ಸ್ಟೆಂಟ್ ಕಾಫಿ ಪೌಡರ್ (Instant coffee Powder)
ಸಕ್ಕರೆ
ಹಾಲು
ಕಾಫಿ ಮಗ್

58
ನೊರೆ ಬರುವ ಕಾಫಿ ಮಾಡುವುದು ಹೇಗೆ?

ನೀವು ಮಷಿನ್ ಇಲ್ಲದೆ ಮನೆಯಲ್ಲಿ ನೊರೆ ಬರುವ ಕಾಫಿ ಮಾಡಲು ಬಯಸಿದರೆ ಮೊದಲು ಒಂದು ಕಪ್‌ನಲ್ಲಿ ಒಂದು ಚಮಚ ನೀರನ್ನು ತೆಗೆದುಕೊಂಡು 1 ರಿಂದ 2 ಚಮಚ ಇನ್ಸ್ಟೆಂಟ್ ಕಾಫಿ ಪುಡಿಯನ್ನು ಸೇರಿಸಿ. ನಿಮ್ಮ ರುಚಿಗೆ ಅನುಗುಣವಾಗಿ ಅದಕ್ಕೆ ಸಕ್ಕರೆ ಸೇರಿಸಿ.

68
ನೊರೆ ಬಂದ್ರೆ ಬೀಟ್ ಮಾಡೋದನ್ನ ನಿಲ್ಲಿಸಿ

ನೀವು ಬಯಸಿದರೆ ಜೇನುತುಪ್ಪ ಅಥವಾ ಯಾವುದೇ ಇತರ ಸಿಹಿಕಾರಕವನ್ನು ಬಳಸಬಹುದು. ಚೆನ್ನಾಗಿ ಬೀಟ್ ಮಾಡಿ. ನಿರಂತರವಾಗಿ ಬೀಟ್ ಮಾಡಿ. ಕ್ರಮೇಣ ಅದು ನೊರೆ ಬರಲು ಪ್ರಾರಂಭಿಸುತ್ತದೆ. ನೊರೆ ರೂಪುಗೊಂಡಾಗ ಬೀಟ್ ಮಾಡೋದನ್ನ ನಿಲ್ಲಿಸಿ. ಇದು ನಿಮಗೆ ಅಬ್ಬಾಬ್ಬಾ ಅಂದ್ರೆ ಕನಿಷ್ಠ 10 ನಿಮಿಷಗಳನ್ನು ತೆಗೆದುಕೊಳ್ಳಬಹುದು ಅಷ್ಟೇ.

78
ಮತ್ತೆ ಬೀಟ್ ಮಾಡಿ

ಇದಾದ ನಂತರ ಒಂದು ಕಾಫಿ ಕಪ್ ನಲ್ಲಿ ಬೀಟ್ ಮಾಡಿಕೊಂಡ ಕಾಫಿ ಪೌಡರ್ ಮಿಶ್ರಣ ಮತ್ತು ಬಿಸಿ ಹಾಲು ಸೇರಿಸಿ. ಒಂದು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪುನಃ ನಿಧಾನವಾಗಿ ಬೀಟ್ ಮಾಡಿದರೆ ನೊರೆ ಬರಲು ಪ್ರಾರಂಭಿಸುತ್ತದೆ.

88
ಕಾಫಿ ರುಚಿ ಹೆಚ್ಚಿಸಲು

ಈಗ ನೀವು ಈ ನೊರೆಯಿಂದ ಕೂಡಿದ ಕಾಫಿಯನ್ನು ಸವಿಯಬಹುದು. ನೀವು ಅದರ ಮೇಲೆ ಸ್ವಲ್ಪ ಚಾಕೊಲೇಟ್ ಪುಡಿ ಅಥವಾ ದಾಲ್ಚಿನ್ನಿ ಪುಡಿಯನ್ನು ಸಹ ಸಿಂಪಡಿಸಬಹುದು. ಇದು ಕಾಫಿಯ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories