ಇದು ಮಸಾಲೆ-ಸ್ಪೈಸಿ ಅಲ್ಲ; 3 ನಿಮಿಷದಲ್ಲೇ ತಯಾರಿಸಿ ಸ್ವೀಟ್ ದೋಸೆ; ಸಿಹಿ ಪ್ರಿಯರಿಗಾಗಿ ಈ ತಿಂಡಿ

Published : Oct 18, 2026, 03:33 PM IST

ಇದು ಕೇವಲ 3-4 ನಿಮಿಷಗಳಲ್ಲಿ ತಯಾರಿಸಬಹುದಾದ ವಿಭಿನ್ನವಾದ ಸಿಹಿ ದೋಸೆಯಾಗಿದೆ. ಉಪ್ಪಿಲ್ಲದ ದೋಸೆ ಹಿಟ್ಟಿಗೆ ಗುಲಾಬ್ ಜಾಮೂನು ಮತ್ತು ಸಕ್ಕರೆ ಪಾಕವನ್ನು ಸೇರಿಸಿ ಇದನ್ನು ಮಾಡಲಾಗುತ್ತದೆ. ಬೇಕಿದ್ದರೆ ಡ್ರೈ ಫ್ರೂಟ್ಸ್ ಮತ್ತು ಬೆಣ್ಣೆಯನ್ನು ಸೇರಿಸಿ ಇದರ ರುಚಿಯನ್ನು ಇನ್ನಷ್ಟು ಹೆಚ್ಚಿಸಬಹುದು.

PREV
15
ಇದು ಸ್ಪೈಸಿ ಅಲ್ಲ, ಟೇಸ್ಟಿಯಾದ ಸ್ವೀಟ್ ದೋಸೆ

ದೋಸೆ ಅಂದ್ರೆ ಕಣ್ಮುಂದೆ ಸೆಟ್, ಮಸಾಲೆ ಕಣ್ಮುಂದೆ ಬರುತ್ತವೆ. ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ನಿಮಗೆ ನಾಲ್ಕರಿಂದ ಐದು ಬಗೆಯ ದೋಸೆಗಳು ಸಿಗುತ್ತವೆ. ಇತ್ತೀಚಿಗೆ ಬೆಂಗಳೂರಿನಲ್ಲಿ 99 Variety ದೋಸೆ ಎಂಬ ಬೋರ್ಡ್‌ವುಳ್ಳ ಸ್ಟಾಲ್‌ಗಳು ಸಿಗುತ್ತವೆ. ಆದ್ರೆ ನಾವು ನಿಮಗೆ ಸಿಹಿಯಾದ ದೋಸೆ ಮಾಡೋದು ಹೇಗೆ ಎಂದು ತಿಳಿಸುತ್ತಿದ್ದೇವೆ.

25
3-4 ನಿಮಿಷದಲ್ಲಿಯೇ ರೆಡಿ ಆಗುತ್ತೆ!

ನಿಮ್ಮ ಮನೆಯ ಸದಸ್ಯರು ಸಿಹಿ ಪ್ರಿಯರಾಗಿದ್ರೆ ಈ ಸ್ವೀಟ್ ದೋಸೆಯನ್ನೊಮ್ಮೆ ಟ್ರೈ ಮಾಡಿ. ಒಂದೇ ರೀತಿಯ ಬ್ರೇಕ್‌ಫಾಸ್ಟ್ ತಿಂದು ಬೇಸರವಾಗಿದ್ರೂ ಸಿಹಿಯಾದ ತಿಂಡಿಯನ್ನು ಮಾಡಬಹುದು. ಈ ಸಿಹಿಯಾದ ದೋಸೆ ಮಾಡೋದು ತುಂಬಾ ಸರಳವಾಗಿದೆ. ಮೂರರಿಂದ ನಾಲ್ಕು ನಿಮಿಷದಲ್ಲಿ ಈ ದೋಸೆ ತಯಾರಿಸಬಹುದು.

35
ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

ದೋಸೆ ಹಿಟ್ಟು: ಸಾಮಾನ್ಯವಾಗಿ ರುಬ್ಬಿಕೊಳ್ಳುವಂತೆಯೇ ದೋಸೆ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ಇದು ಸಿಹಿ ತಿಂಡಿಯಾಗಿರೋ ಕಾರಣ ಉಪ್ಪು ಸೇರಿಸಿಕೊಳ್ಳಬೇಡಿ.

ಗುಲಾಬ್ ಜಾಮೂನು ಮತ್ತು ಸಕ್ಕರೆ ಪಾಕ

ತುಪ್ಪ (ಬೇಕಿದ್ರೆ ಡ್ರೈ ಫ್ರೂಟ್ಸ್)

45
ಸ್ವೀಟ್ ದೋಸೆ ತಯಾರಿಸುವ ವಿಧಾನ

ಮೊದಲಿಗೆ ಕಾವಲಿ ಮೇಲೆ ಹಿಟ್ಟನ್ನು ಹಾಕಿಕೊಳ್ಳಿ. ಹಿಟ್ಟಿನ ತೇವಾಂಶ ಕಡಿಮೆಯಾಗುತ್ತಿದ್ದಂತೆ ಒಂದು ಗುಲಾಬ್ ಜಾಮೂನು ಇಟ್ಟು ಸ್ಮ್ಯಾಶ್ ಮಾಡಿಕೊಂಡು ದೋಸೆ ಸುತ್ತಲೂ ಹರಡಿಕೊಳ್ಳಿ. ಈ ಸಮಯದಲ್ಲಿ ಒಂದೆರಡು ಸ್ಪೂನ್‌ನಷ್ಟು ಗುಲಾಬ್ ಜಾಮೂನಿನ ಸಕ್ಕರೆ ಪಾಕವನ್ನು ಹಚ್ಚಿ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿಕೊಂಡದ್ರೆ ಸ್ವೀಟ್ ದೋಸೆ ಸವಿಯಲು ಸಿದ್ಧವಾಗುತ್ತದೆ.

55
ಡ್ರೈ ಫ್ರೂಟ್ಸ್

ಈ ಸಮಯದಲ್ಲಿ ಸಣ್ಣದಾಗಿ ಕತ್ತರಿಸಿಕೊಂಡಿರುವ ಡ್ರೈ ಫ್ರೂಟ್ಸ್ ಸೇರಿಸಿಕೊಳ್ಳಬಹುದು. ಮಸಾಲೆದೋಸೆಯಲ್ಲಿ ಆಲೂ ಪಲ್ಯ ಸೇರಿಸುವಂತೆ ಇಲ್ಲಿ ಗುಲಾಬ್ ಜಾಮೂನು ಸೇರಿಸಿಕೊಳ್ಳಬೇಕು. ಈ ದೋಸೆ ಮೇಲೆ ಸಣ್ಣದಾಗ ಬೆಣ್ಣೆಯ ತುಂಡು ಸೇರಿಸಿದ್ರೆ ಸಿಹಿ ತಿಂಡಿಯ ರುಚಿ ಇಮ್ಮಡಿಗೊಳ್ಳುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories