ಸಂಜೆಗೆ ಮಾಡ್ಕೊಳ್ಳಿ ಸೂರ್ಯವಂಶ ಸಿನಿಮಾ ಶೈಲಿಯ ತಿಂಡಿ; ಇದು ಮಕ್ಕಳಿಗೂ ಇಷ್ಟ ಆಗುತ್ತೆ

Published : Sep 04, 2026, 04:21 PM IST

Kannada Recipe: ಸೂರ್ಯವಂಶ ಸಿನಿಮಾದಲ್ಲಿ ತೋರಿಸಿದಂತೆ ಸಂಜೆಗೆ ರುಚಿಕರವಾದ ತಿಂಡಿ ತಯಾರಿಸಬಹುದು. ಈ ಲೇಖನವು ರುಚಿಯಾದ ತಿಂಡಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಅದನ್ನು ತಯಾರಿಸುವ ಸಂಪೂರ್ಣ ವಿಧಾನವನ್ನು ವಿವರಿಸುತ್ತದೆ.

PREV
16
ಸೂರ್ಯವಂಶ ಸಿನಿಮಾ ಶೈಲಿಯ ತಿಂಡಿ

ಮಕ್ಕಳು ಶಾಲೆಯಿಂದ ಬರುತ್ತಲೇ ಅಥವಾ ಕೆಲಸದಿಂದ ಮನೆಗೆ ಬರೋರು ಏನಾದ್ರು ತಿಂಡಿ ತಿನ್ನೋ ಬಯಕೆ ಬಹುತೇಕರಿಗೆ ಆಗುತ್ತದೆ. ಪ್ರತಿದಿನ ಏನು ತಿಂಡಿ ಮಾಡಬೇಕು ಅನ್ನೋದು ಎಲ್ಲರಿಗೂ ಎದುರಾಗುವ ಬಹುದೊಡ್ಡ ಪ್ರಶ್ನೆ. ಇಂದು ನಾವು ನಿಮಗೆ ಕನ್ನಡದ ಸೂಪರ್ ಹಿಟ್ ಸಿನಿಮಾ ಸೂರ್ಯವಂಶ (Kannada Movie Suryavamsha) ಶೈಲಿಯ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ.

26
ನಾಯಕಿ ತಂದೆಗೆ ಮಾಡಿಕೊಡೋ ರುಚಿಯಾದ ತಿಂಡಿ

ಬೆಳಗ್ಗೆ ನೀವೇನಾದ್ರು ಇಡ್ಲಿ ಮಾಡಿದ್ರೆ, ಸಂಜೆಗೆ ಈ ತಿಂಡಿ ಮಾಡಬಹುದು. ಬೆಳಗ್ಗೆ ಮಾಡಿರೋ ಐದಾರು ಇಡ್ಲಿಗಳು ಉಳಿದಿದ್ರೆ ಸಂಜೆಗೆ ಇವುಗಳಿಂದ ರುಚಿಯಾದ ತರಕಾರಿ ಉಪ್ಪಿಟ್ಟು (Leftover Idli Uppittu) ಮಾಡಬಹುದು. ಸೂರ್ಯವಂಶ ಸಿನಿಮಾದಲ್ಲಿ ನಾಯಕಿ ಮನೆಗೆ ತಂದೆ ಬರುತ್ತಾನೆ. ಈ ವೇಳೆ ಮಗಳು, ಬೆಳಗ್ಗೆ ಉಳಿದಿರೋ ಇಡ್ಲಿಗಳಿಂದ ಉಪ್ಪಿಟ್ಟು ಮಾಡಿಕೊಡುತ್ತಾಳೆ. ಉಪ್ಪಿಟ್ಟು ತಿಂದ ನಂತ್ರ ರುಚಿಗೆ ಸೋತ ಅಪ್ಪಾ, ಒಂದಿಷ್ಟು ತನ್ನ ಮನೆಗೂ ತೆಗೆದುಕೊಂಡು ಹೋಗುತ್ತಾನೆ. ಈ ಉಪ್ಪಿಟ್ಟು ಮಾಡೋದು ಹೇಗೆ ಎಂದು ಮಾಡೋಣ ಬನ್ನಿ.

36
ಬೇಕಾಗುವ ಸಾಮಾಗ್ರಿಗಳು

ಇಡ್ಲಿ: 5 ರಿಂದ 6, ದೊಡ್ಡ ಗಾತ್ರದ ಒಂದು ಈರುಳ್ಳಿ, ಟೊಮೆಟೋ: 1, ನಿಂಬೆಹಣ್ಣಿನ ರಸ: 1 ಟೀ ಸ್ಪೂನ್, ಹಸಿಮೆಣಸಿನಕಾಯಿ: 4, ಕರೀಬೇವು: 10 ರಿಂದ 12 ಎಲೆ, ಕೋತಂಬರಿ ಸೊಪ್ಪು, ಸಾಸವೆ-ಜೀರಿಗೆ: 1/2 ಟೀ ಸ್ಪೂನ್, ಕಡಲೆಬೀಜ: 2 ಟೀ ಸ್ಪೂನ್, ಕಡಲೆಬೇಳೆ: 1 ಟೀ ಸ್ಪೂನ್, ಉದ್ದಿನಬೇಳೆ: 1 ಟೀ ಸ್ಪೂನ್, ಅರಿಶಿನ: 1/4 ಟೀ ಸ್ಪೂನ್, ಅಡುಗೆಎಣ್ಣೆ: 3 ಟೀ ಸ್ಪೂನ್, ತೆಂಗಿನಕಾಯಿ ತುರಿ: 2 ಕಪ್, ಉಪ್ಪು ರುಚಿಗೆ ತಕ್ಕಷ್ಟು

46
ಮಾಡುವ ವಿಧಾನ

ಮೊದಲಿಗೆ ಬೆಳಗ್ಗೆ ಮಾಡಿರೋ ಇಡ್ಲಿಗಳನ್ನು ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ನಂತರ ತೆಂಗಿನಕಾಯಿ ತುರಿಯನ್ನು ಸಹ ಸಿದ್ಧಪಡಿಸಿಕೊಳ್ಳಬೇಕು. ತದನಂತರ ಒಗ್ಗರಣೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕು.

56
ಒಗ್ಗರಣೆ

ಈಗ ಒಲೆ ಆನ್ ಮಾಡ್ಕೊಂಡು ಪಾತ್ರೆಯನ್ನಿಟ್ಟುಕೊಳ್ಳಿ. ಪಾತ್ರೆ ಬಿಸಿಯಾಗುತ್ತಿದ್ದಂತೆ ಅಡುಗೆಎಣ್ಣೆ ಹಾಕಿಕೊಳ್ಳಿ. ಈಗ ಸಾಸವೆ, ಜೀರಿಗೆ, ಕಡಲೆಬೀಜ, ಕಡಲೆಬೇಳೆ, ಉದ್ದಿನಬೇಳೆ ಸೇರಿಸಿಕೊಂಡು ಕಂದು ಬಣ್ಣ ಬರೋವರೆಗೂ ಫ್ರೈ ಮಾಡಿಕೊಳ್ಳಿ. ಆನಂತರ ಇದಕ್ಕೆ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಸೇರಿಸಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದೇ ವೇಳೆ ಕರಿಬೇವು ಮತ್ತು ಚಿಟಿಕೆ ಅರಿಶಿನ ಸೇರಿಸಿ ಮಿಕ್ಸ್ ಮಾಡ್ಕೊಳ್ಳಿ.

66
ರುಚಿಯಾದ ಇಡ್ಲಿ ಉಪ್ಪಿಟ್ಟು

ನೀರು ಕುದಿಯಲು ಆರಂಭಿಸಿದಾಗ ಕಿವುಚಿಟ್ಟುಕೊಂಡಿರುವ ಇಡ್ಲಿಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಎರಡು ನಿಮಿಷ ಬೇಯಿಸಿಕೊಳ್ಳಿ. ಕೊನೆಗೆ ತೆಂಗಿನಕಾಯಿ ತುರಿ ಮತ್ತು ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಇಡ್ಲಿ ಉಪ್ಪಿಟ್ಟು (Idli Upma) ಸವಿಯಲು ಸಿದ್ಧವಾಗುತ್ತದೆ. ಈ ಸಮಯದಲ್ಲಿ ನಿಮ್ಮಿಷ್ಟದ ತರಕಾರಿಗಳನ್ನು (ಬಟಾಣಿ, ಬೀನ್ಸ್, ಕ್ಯಾರಟ್) ಹೆಚ್ಚುವರಿಯಾಗಿ ಸೇರಿಸಿಕೊಳ್ಳಬಹುದು. ಮಸಾಲೆ ಚೆನ್ನಾಗಿ ಬೆಂದು ಎಣ್ಣೆ ಸೈಡ್‌ಗೆ ಬರುತ್ತಿದ್ದಂತೆ ಇದಕ್ಕೆ ಒಂದು ಗ್ಲಾಸ್‌ನಷ್ಟು ನೀರು ಸೇರಿಸಿಕೊಳ್ಳಿ. ಈ ಸಮಯದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories