ಹಿಟ್ಟು, ಹಂಚು ಎಲ್ಲಾ ಸರಿಯಿದ್ರೂ ದೋಸೆ ಅಂಟಿಕೊಳ್ಳುತ್ತಿದೆಯೇ? ಬಾಣಸಿಗರ ಈ ಟ್ರಿಕ್ಸ್ ಫಾಲೋ ಮಾಡಿ

Published : Sep 04, 2026, 04:15 PM IST

Hotel style dosa secret: ಅಕ್ಕಿ-ಉದ್ದಿನ ಪ್ರಮಾಣ ಸರಿಯಿದ್ದರೂ, ಹಿಟ್ಟು ಚೆನ್ನಾಗಿ ಹುದುಗಿದ್ದರೂ ದೋಸೆ ಹಂಚಿಗೆ ಅಂಟಿಕೊಳ್ಳುತ್ತಿದೆಯೇ? ಹಾಗಿದ್ದರೆ ಸಮಸ್ಯೆ ಇರುವುದು ಹಿಟ್ಟಿನಲ್ಲಿಲ್ಲ, ನೀವು ಹಂಚನ್ನು ಸಿದ್ಧಪಡಿಸುವ ವಿಧಾನದಲ್ಲಿ!

PREV
15
ಸಮಸ್ಯೆ ಹಿಟ್ಟಿನಲ್ಲಿಲ್ಲ

ಸಮಸ್ಯೆ ಹಿಟ್ಟಿನಲ್ಲಿಲ್ಲ
ಅಕ್ಕಿ-ಉದ್ದಿನ ಪ್ರಮಾಣ ಸರಿಯಾಗಿದ್ದರೂ, ಹಿಟ್ಟು ಚೆನ್ನಾಗಿ ಹುದುಗಿದ್ದರೂ ದೋಸೆ ಹಂಚಿಗೆ ಅಂಟಿಕೊಳ್ಳುತ್ತಿದೆಯೇ? ಎಷ್ಟೇ ಪ್ರಯತ್ನಿಸಿದರೂ ಹೋಟೆಲ್‌ನಲ್ಲಿ ಸಿಗುವಂತೆ ಪೇಪರ್‌ನಂತೆ ಗರಿಗರಿಯಾಗಿ ದೋಸೆ ಬರುತ್ತಿಲ್ಲ ಎಂಬುದು ಅನೇಕರ ದೂರು. ಆದರೆ ಸಮಸ್ಯೆ ಹಿಟ್ಟಿನಲ್ಲಿಲ್ಲ, ದೋಸೆ ಹಾಕುವ ಹಂಚನ್ನು ಸಿದ್ಧಪಡಿಸುವ ವಿಧಾನದಲ್ಲಿದ್ದು, ಶೆಫ್‌ಗಳು ಬಳಸುವ ಆ ಸೀಕ್ರೆಟ್ ಟ್ರಿಕ್ ಇಲ್ಲಿದೆ.

25
ನೀವೂ ಅನುಸರಿಸಿ

ನೀವೂ ಅನುಸರಿಸಿ
ದೋಸೆ ಪ್ರಿಯರಿಗೆ ದೋಸೆಯ ರುಚಿಗಿಂತ ಅದರ ಗರಿಗರಿತನವೇ ಹೆಚ್ಚು ಇಷ್ಟ. ಹಲವೊಮ್ಮೆ ನಾವು ಪದಾರ್ಥಗಳ ಪ್ರಮಾಣವನ್ನು ಸರಿಯಾಗಿ ಹಾಕಿರುತ್ತೇವೆ ಮತ್ತು ಹಿಟ್ಟು ಕೂಡ ಚೆನ್ನಾಗಿ ಹುದುಗಿರುತ್ತದೆ (Fermented), ಆದರೂ ದೋಸೆ ಸರಿಯಾಗಿ ಬರುವುದಿಲ್ಲ. ಹಂಚಿಗೆ ಅಂಟಿಕೊಳ್ಳುವುದು ಅಥವಾ ಮೆತ್ತಗೆ ಬರುವುದು ಗೃಹಿಣಿಯರಿಗೆ ದೊಡ್ಡ ತಲೆನೋವು. ಈ ಸಮಸ್ಯೆಗೆ ಪರಿಹಾರವಾಗಿ ಹೋಟೆಲ್‌ಗಳಲ್ಲಿ ಬಳಸುವ ಈ ಅದ್ಭುತ ವಿಧಾನವನ್ನು ನೀವೂ ಅನುಸರಿಸಿ.

35
ಈರುಳ್ಳಿ ಉಜ್ಜಿ

ಈರುಳ್ಳಿ ಉಜ್ಜಿ
ದೋಸೆ ಹಂಚನ್ನು ಒಲೆಯ ಮೇಲಿಟ್ಟು ಅದು ಕಾದ ನಂತರ, ಮೊದಲು ಸ್ವಲ್ಪ ಎಣ್ಣೆಯನ್ನು ಹಂಚಿನ ಮೇಲೆ ಹಾಕಿ. ನಂತರ ಒಂದು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ, ಅದರ ಭಾಗದಿಂದ ಹಂಚಿನ ಮೇಲ್ಮೈಗೆ ಚೆನ್ನಾಗಿ ಉಜ್ಜಿ (Rub). ಹಿಟ್ಟು ಚೆನ್ನಾಗಿದ್ದರೂ ಹಂಚಿನ ಮೇಲ್ಮೈ ಸರಿಯಾಗಿಲ್ಲದಿದ್ದರೆ ದೋಸೆ ಅಂಟಿಕೊಳ್ಳುತ್ತದೆ. ಈರುಳ್ಳಿ ಉಜ್ಜುವುದರಿಂದ ಹಂಚಿನ ಮೇಲೆ ನೈಸರ್ಗಿಕವಾಗಿ ನಾನ್-ಸ್ಟಿಕ್ ಪದರ ನಿರ್ಮಾಣವಾಗುತ್ತದೆ.

45
ನೀರು ಚಿಮುಕಿಸಿ

ನೀರು ಚಿಮುಕಿಸಿ
ಈರುಳ್ಳಿ ಉಜ್ಜಿದ ನಂತರ, ಹೋಟೆಲ್‌ಗಳಲ್ಲಿ ಮಾಡುವಂತೆ ಸ್ವಲ್ಪ ನೀರನ್ನು ಹಂಚಿನ ಮೇಲೆ ಚಿಮುಕಿಸಿ. ಬಿಸಿಯಾದ ಹಂಚಿನ ಮೇಲೆ ನೀರು ಬಿದ್ದಾಗ ಅದು ತಾಪಮಾನವನ್ನು ಸಮತೋಲನಗೊಳಿಸುತ್ತದೆ. ತಕ್ಷಣವೇ ಒಂದು ಬಟ್ಟೆಯಿಂದ ಹಂಚನ್ನು ಒರೆಸಿ ದೋಸೆ ಹಿಟ್ಟನ್ನು ಹಾಕಿದರೆ, ದೋಸೆಯು ಹಂಚಿಗೆ ಅಂಟಿಕೊಳ್ಳದೆ ಸಮಾನವಾಗಿ ಬೇಯುತ್ತದೆ. ಇದರಿಂದ ದೋಸೆ ಪೇಪರ್‌ನಂತೆ ಗರಿಗರಿಯಾಗಿ ಮತ್ತು ಕೆಂಪಗೆ ಮೂಡಿಬರುತ್ತದೆ.

55
ನೆನಪಿರಲಿ

ನೆನಪಿರಲಿ
ದೋಸೆ ಹಿಟ್ಟು ಎಷ್ಟೇ ಪರಿಪೂರ್ಣವಾಗಿದ್ದರೂ, ಪ್ರತಿ ದೋಸೆ ಹಾಕುವ ಮೊದಲು ಹಂಚಿಗೆ ಎಣ್ಣೆ ಹಚ್ಚಿ, ಈರುಳ್ಳಿ ಉಜ್ಜಿ, ನೀರು ಚಿಮುಕಿಸುವುದನ್ನು ಮರೆಯಬೇಡಿ. ಈ ಒಂದು ಸಣ್ಣ ಬದಲಾವಣೆ ನಿಮ್ಮ ಮನೆಯ ದೋಸೆಯನ್ನು ಹೋಟೆಲ್ ದೋಸೆಯಂತೆ ಸ್ವಾದಿಷ್ಟವಾಗಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories