ರಸ್ತೆ ಬದಿ ಮೊಮೊಸ್ ಮಾರ್ತಿದ್ದ ವ್ಯಕ್ತಿಯೀಗ ಕೋಟ್ಯಾಧಿಪತಿ, ತಿಂಗಳ ಆದಾಯ ಬರೋಬ್ಬರಿ 40 ಕೋಟಿ!

First Published | Jan 16, 2024, 9:22 AM IST

ಸಾಧನೆ ಮಾಡೋಕೆ ಹೊರಟರೆ ಯಾವುದೂ ಅಸಾಧ್ಯವಲ್ಲ. ರಸ್ತೆ ಬದಿ ಮೊಮೊಸ್ ಮಾರುತ್ತಿದ್ದ ವ್ಯಕ್ತಿ ಅದು ನಿಜ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಕೇವಲ 30,000ದಿಂದ ಮೊಮೊಸ್ ಅಂಗಡಿ ಆರಂಭಿಸಿದ ವ್ಯಕ್ತಿಯೀಗ ಕೋಟ್ಯಾಧಿಪತಿ. ತಿಂಗಳ ಆದಾಯ 40 ಕೋಟಿ. 2000 ಕೋಟಿ ಕಂಪನಿಯನ್ನು ಹೊಂದಿದ್ದಾರೆ.

ಭಾರತದಾದ್ಯಂತ ಫೇಮಸ್ ಆಗಿರುವ ಹಲವು ಸ್ಟ್ರೀಟ್‌ ಫುಡ್‌ಗಳಿವೆ. ಅದರಲ್ಲೊಂದು ಮೊಮೋಸ್‌. ಆದ್ರೆ ಇಲ್ಲೊಬ್ಬ ವ್ಯಕ್ತಿ ಮೊಮೊಸ್ ಬಿಸಿನೆಸ್ ಸ್ಟಾರ್ಟ್ ಮಾಡಿ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಆ ಹೆಸರಾಂತ ಉದ್ಯಮಿ ಮತ್ಯಾರು ಅಲ್ಲ. ಅವರೇ ಸಾಗರ್ ದರಿಯಾನಿ.

ಕೇವಲ 30,000ನಿಂದ ಬಿಸಿನೆಸ್ ಆರಂಭಿಸಿ ಈಗ ತಿಂಗಳಿಗೆ 40 ಕೋಟಿ ರೂ. ಗಳಿಸುತ್ತಿದ್ದಾರೆ. ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದ ಮೊಮೊದ ಸಂಸ್ಥಾಪಕ ಮತ್ತು ಸಿಇಒ ಸಾಗರ್ ದರಿಯಾನಿ ಅವರು ಭಾರತದಲ್ಲಿ ಮೊಮೊ ವ್ಯಾಪಾರವನ್ನು ಆರಂಭಿಸಿ ಸಕ್ಸಸ್ ಆಗಿದ್ದಾರೆ

Tap to resize

ಕ್ಲಾಸ್‌ಮೇಟ್‌ ಬಿನೋದ್ ಹೊಮಗೈ ಸಹಭಾಗಿತ್ವದಲ್ಲಿ, ದರಿಯಾನಿ ಕೋಲ್ಕತ್ತಾದ ಸೇಂಟ್ ಕ್ಸೇವಿಯರ್‌ನಲ್ಲಿ ತಮ್ಮ ಪದವಿಯ ಅಂತಿಮ ವರ್ಷಗಳಲ್ಲಿ ಆಗಸ್ಟ್ 29, 2008ರಂದು ವಾವ್ ಮೊಮೊವನ್ನು ಸ್ಥಾಪಿಸಿದರು. ಕೋಲ್ಕತ್ತಾದಲ್ಲಿ ಸಣ್ಣ ಕಿಯೋಸ್ಕ್‌ನಿಂದ ಪ್ರಾರಂಭಿಸಿ, ಸರಳವಾದ ಕಲ್ಪನೆಯನ್ನು ಯಶಸ್ವಿ ವ್ಯಾಪಾರವಾಗಿ ಪರಿವರ್ತಿಸಿದರು. 

ಆರಂಭದಲ್ಲೇ ಸಾಗರ್‌ ದರಿಯಾನಿ ಕುಟುಂಬದಿಂದ ಉದ್ಯಮ ನಡೆಸೋದಕ್ಕೆ ವಿರೋಧ ಕೇಳಿ ಬಂದಿತ್ತು. ಆದರೂ ಸಾಗರ್ ತಮ್ಮ 21ನೇ ವಯಸ್ಸಿನಲ್ಲಿ ಕೇವಲ 30,000 ರೂ. ನಿಂದ ಬಿಸಿನೆಸ್ ಆರಂಭಿಸಿದರು. 1 ಟೇಬಲ್ ಮತ್ತು 2 ಅರೆಕಾಲಿಕ ಅಡುಗೆಯವನ್ನು ಇಟ್ಟುಕೊಂಡು ಹೊಟೇಲ್ ನಡೆಸುತ್ತಿದ್ದರು

ವಿಶಿಷ್ಟವಾದ ಹೆಸರು - WowMomo ಗ್ರಾಹಕರಿಗೆ ಅತಿ ಬೇಗನೇ ಪ್ರಿಯವಾಯಿತು. ವಾವ್ ಮೊಮೊ ನಂತರದ ದಿನಗಳಲ್ಲಿ ತಿಂಗಳಿಗೆ ಕೋಟ್ಯಾಂತರ ರೂ. ಗಳಿಸುವ ಉದ್ಯಮವಾಗಿ ಹೊರಹೊಮ್ಮಿತು. ಇವರ ಹೆಚ್ಚು ಮಾರಾಟವಾಗುವ ಆವಿಷ್ಕಾರಗಳಲ್ಲಿ ಮೊಮೊ ಮತ್ತು ಬರ್ಗರ್‌ನ ಸಮ್ಮಿಳನವಾದ 'ಮೊಬರ್ಗ್' ಸೇರಿದೆ

ಜನಪ್ರಿಯತೆ ಮತ್ತು ಮಾರುಕಟ್ಟೆಯು ಹೆಚ್ಚಾದಂತೆ, WowMomo ಭಾರತದಾದ್ಯಂತ ಟೆಕ್ ಪಾರ್ಕ್‌ಗಳು, ಮಾಲ್‌ಗಳು ಮತ್ತು ಹೈಪರ್‌ಮಾರ್ಕೆಟ್‌ಗಳಂತಹಾ ಜಾಗಗಳಲ್ಲಿ ಆರಂಭಗೊಂಡವು. ಪ್ರಸ್ತುತ, ಕಂಪನಿಯು 250 ಮಳಿಗೆಗಳನ್ನು ಹೊಂದಿದೆ. ಆ ಸಂಖ್ಯೆಯನ್ನು 350ಕ್ಕೆ ಹೆಚ್ಚಿಸುವ ಗುರಿಯನ್ನು ಸಾಗರ್ ದರಿಯಾನಿ ಹೊಂದಿದೆ.

ವರದಿಗಳ ಪ್ರಕಾರ, WowMomo ಪ್ರತಿದಿನ 6 ಲಕ್ಷ ಮೊಮೊಗಳನ್ನು ಮಾರಾಟ ಮಾಡುತ್ತದೆ, 26 ರಾಜ್ಯಗಳಲ್ಲಿ 800 ಮಳಿಗೆಗಳನ್ನು ಹೊಂದಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ 3000 ಸ್ಟೋರ್‌ಗಳನ್ನು ತೆರೆಯುವ ಗುರಿಯನ್ನು ಇಟ್ಟುಕೊಂಡಿದೆ.

Latest Videos

click me!