ಯಾವುದೇ ಆಹಾರವಾದರೂ ಸರಿ ಅದು ತೃಪ್ತಿಯನ್ನು ನೀಡಿದರೆ ಮಾತ್ರ ಆರೋಗ್ಯಕರವಾಗುತ್ತದೆ. ಇಷ್ಟವಿಲ್ಲದೆ ಡಯಟ್ ಮಾಡಿದರೂಆ ಆಹಾರ ದೇಹಕ್ಕೆ ಹಾನಿ ಉಂಟು ಮಾಡುವುದು ಗ್ಯಾರಂಟಿ.
undefined
ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವ ಜನರು ಮೊದಲು ತಮ್ಮ ಆಹಾರದಿಂದ ಚಪಾತಿ ಮತ್ತು ಅಕ್ಕಿ ಎರಡನ್ನೂ ಕೈ ಬಿಡುತ್ತಾರೆ. ಆದರೆ ಅವುಗಳನ್ನು ಆಹಾರದಿಂದ ಸಂಪೂರ್ಣವಾಗಿ ತೆಗೆದುಹಾಕುವ ಮೂಲಕ ದೇಹದಲ್ಲಿ ದೌರ್ಬಲ್ಯ ಉಂಟಾಗುತ್ತದೆ.
undefined
ರೊಟ್ಟಿ ಚಪಾತಿ ಮತ್ತು ಅಕ್ಕಿ ಎರಡೂ ತಮ್ಮದೇ ಆದ ಗುಣಗಳನ್ನು ಹೊಂದಿವೆ. ರೊಟ್ಟಿ ಚಪಾತಿ ತಿನ್ನುವುದರಿಂದ ದಿನವಿಡೀ ಹೊಟ್ಟೆ ತುಂಬಿರುತ್ತದೆ, ಅಕ್ಕಿಯಲ್ಲಿರುವ ಪಿಷ್ಟದಿಂದಾಗಿ ಅದು ಬೇಗನೆ ಜೀರ್ಣವಾಗುತ್ತದೆ.
undefined
ಇವುಗಳ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ, ಅವುಗಳಲ್ಲಿರುವ ಸೋಡಿಯಂ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿದೆ. ಅಕ್ಕಿಯಲ್ಲಿ ಸೋಡಿಯಂ ಬಹಳ ಕಡಿಮೆ ಇದ್ದರೆ, ರೊಟ್ಟಿ (120 ಗ್ರಾಂ ಹಿಟ್ಟು) 190 ಮಿಗ್ರಾಂ ಸೋಡಿಯಂ ಹೊಂದಿರುತ್ತದೆ. ನಿಮ್ಮ ಡಯಟ್‌ನಲ್ಲಿ ಸೋಡಿಯಂ ಕಡಿಮೆ ಮಾಡಿಕೊಳ್ಳಲು ಬಯಸಿದಲ್ಲಿ, ರೊಟ್ಟಿ ಚಪಾತಿ ತಿನ್ನುವುದನ್ನು ನಿಲ್ಲಿಸಬಹುದು.
undefined
ಅನ್ನ ಚಪಾತಿಗಿಂತ ಕಡಿಮೆ ಫೈಬರ್, ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ, ಆದರೆ ಅಕ್ಕಿಯಲ್ಲಿನ ಕ್ಯಾಲೊರಿಗಳು ಚಪಾತಿಗಿಂತ ಹೆಚ್ಚು. ಇದರೊಂದಿಗೆ ಅಕ್ಕಿಯಲ್ಲಿ ನೀರಿನಲ್ಲಿ ಕಂಡು ಬರುವ ವಿಟಮಿನ್‌ಗಳಿವೆ, ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.
undefined
ಚಪಾತಿ ದೇಹಕ್ಕೆ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ರಂಜಕವನ್ನು ಒದಗಿಸುತ್ತದೆ. ಆದಾಗ್ಯೂ, ಅನ್ನದಲ್ಲಿ ಕ್ಯಾಲ್ಸಿಯಂ ಇರುವುದಿಲ್ಲ ಮತ್ತು ಇದು ಪೊಟ್ಯಾಸಿಯಮ್ ಮತ್ತು ರಂಜಕವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತದೆ.
undefined
ರಾತ್ರಿಯಿಂದ ಬೆಳಿಗ್ಗೆ ತನಕ ಆಹಾರ ಸೇವಿಸುವ ಸಮಯದಲ್ಲಿ ಹೆಚ್ಚಿನ ಅಂತರವಿದೆ, ಆದ್ದರಿಂದ ರಾತ್ರಿಯಲ್ಲಿ ಚಪಾತಿ ತಿನ್ನುವುದು ಉತ್ತಮ. ಸಜ್ಜೆ ರೊಟ್ಟಿಯಲ್ಲಿ ಪ್ರೋಟೀನ್ ಹೆಚ್ಚಿರುವುದರಿಂದ ಡಿನ್ನರ್‌ಗೆ ತಿನ್ನಬಹುದು.
undefined
ಹೆಲ್ದಿ ಡಯಟ್‌ಗೆ ಅಕ್ಕಿ ಮತ್ತು ರೊಟ್ಟಿ ಎರಡೂ ಬೆಸ್ಟ್.
undefined
ಆದರೆ ತೂಕ ಇಳಿಸಿಕೊಳ್ಳಲು ಅಕ್ಕಿಗಿಂತ ಚಪಾತಿ ಉತ್ತಮ ಆಯ್ಕೆ.
undefined