ಪರ್ಫೆಕ್ಟ್ ಆಲೂ ಪರೋಟಾ ಮಾಡೋ ಈಸಿ ವಿಧಾನ!

ಆಲೂಗಡ್ಡೆ, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಷ. ಇನ್ನೂ ಆಲೂ ಪರೋಟಾಗಳ ಬಗ್ಗೆ ಹೇಳುವುದಾದರೆ ಯಾರಿಗೆ ಇಷ್ಷ ಇಲ್ಲ ಹೇಳಿ ಈ ತಿಂಡಿ. ಬೆಳಗಿನ ಉಪಾಹಾರ, ಊಟ ಅಥವಾ ರಾತ್ರಿ ಊಟ ಯಾವಾಗ ಬೇಕಾದರೂ ತಿನ್ನಬಹುದು ಆಲೂ ಪರೋಟಾ. ಆದರೆ ಇದನ್ನು ಮಾಡುವುದು ಅಂದರೆ ರಗಳೆ ಅಂದುಕೊಳ್ಳವರೇ ಹೆಚ್ಚು. ಪರೋಟಾ ಲಟ್ಟಿಸುವಾಗ ಆಲೂಗಡ್ಡೆ ಹಿಟ್ಟಿನಿಂದ ಹೊರಬಂದು ಪರಾಟ ಶೇಪ್‌ಲೆಸ್‌ ಆಗುವುದು ಕಾಮನ್‌. ಇನ್ನು ಮುಂದೆ ಚಿಂತಿಸಬೇಕಾಗಿಲ್ಲ ಏಕೆಂದರೆ ಆಲೂ ಪರೋಟಾಗಳನ್ನು ತಯಾರಿಸುವ ಈಸಿ ವಿಧಾನವನ್ನು ನಾವು ಹೇಳ್ತಾ ಇದೀವಿ ಇಲ್ ನೋಡಿ.
 

Easy way and recipe to do Aloo Parotha
ಮೊದಲನೆಯದಾಗಿ,4-5 ದೊಡ್ಡ ಆಲೂಗಡ್ಡೆ ತೆಗೆದುಕೊಳ್ಳಿ.
Easy way and recipe to do Aloo Parotha
ಅದನ್ನು ಸಾಫ್ಟ್‌ ಆಗುವಷ್ಟು ಕುಕ್ಕರ್‌ನಲ್ಲಿ ಬೇಯಿಸಿ.

ಸಿಪ್ಪೆ ಸುಲಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ. ಉಪ್ಪು, ಸಕ್ಕರೆ, ಎಳ್ಳು, ಸೋಂಪು, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸ ಸೇರಿಸಿ.
ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್‌ ಮಾಡಿ. ಅದರಿಂದ ಸಣ್ಣ ಉಂಡೆಗಳನ್ನು ಮಾಡಿ ಪಕ್ಕಕ್ಕೆ ಇರಿಸಿಕೊಳ್ಳಿ.
ಗೋಧಿ ಅಥವಾ ಮೈದಾ ಹಿಟ್ಟಿನ ಉಂಡೆಗಳನ್ನು ತಯಾರಿಸಿ, ಸಣ್ಣದಾಗಿ ಲಟ್ಟಿಸಿ.
ಆ ಹಿಟ್ಟಿನೊಳಗೆ ಆಲೂಗಡ್ಡೆ ಸ್ಟಫ್ ಇಟ್ಟುಕೊಳ್ಳಿ.
ಶಾರ್ಪ್‌ ಅಂಚಿನ ಬೌಲ್ ಅಥವಾ ಚಾಕುವಿನಿಂದ ಹೆಚ್ಚುವರಿ ಹಿಟ್ಟನ್ನು ತೆಗೆದುಹಾಕಿ. ಅದನ್ನು ಸಮವಾಗಿ ಮಾಡಲು ನಿಧಾನವಾಗಿಲಟ್ಟಿಸಿ.
ಇದರ ನಡುವೆ ಮೀಡಿಯಂ ಉರಿಯಲ್ಲಿ ತವಾ ಬಿಸಿ ಮಾಡಿ, ಕಾವಲಿ ಬಿಸಿಯಾದಾಗ ಅದರ ಮೇಲೆ ರೋಲ್‌ ಮಾಡಿರುವ ಪರೋಟಾ ಹಾಕಿ.
ಪರೋಟಾವನ್ನು ಎರಡೂ ಕಡೆ ಎಣ್ಣೆತುಪ್ಪ ಅಥವಾ ಬೆಣ್ಣೆ ಹಾಕಿ ಬೇಯಿಸಿ. ಬೇಯಿಸುವಾಗ ಸ್ವಲ್ಪ ಒತ್ತಿರಿ ಇದರಿಂದ ಹಸಿಯಾಗಿ ಉಳಿಯುವುದಿಲ್ಲ.
ಆಲೂಗೆಡ್ಡೆ ಪರೋಟಾರೆಡಿ.
ಮೊಸರು, ರಾಯಿತಾ ಅಥವಾ ಉಪ್ಪಿನಕಾಯಿಯೊಂದಿಗೆ ಬಿಸಿಯಾಗಿ ತಿನ್ನಿ.

Latest Videos

click me!