ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಬಾಟಲ್, ಬರೋಬ್ಬರಿ 22.7 ಕೋಟಿ ರೂಗೆ ಮಾರಾಟ!

First Published | Nov 19, 2023, 5:56 PM IST

ಮದ್ಯ ಹೀರುವ ಮುನ್ನ ಎರಡು ಹನಿ ಹೊರಗೆ ಚೆಲ್ಲಿ ಆರಂಭಿಸುವ ಸಂಪ್ರದಾಯ ಹಲವರಿಗಿದೆ. ಆದರೆ ಇಲ್ಲೊಂದು ವಿಸ್ಕಿ ಇದೆ. ನೀವೇನಾದರೂ ಈ ವಿಸ್ಕಿಯ ಗುಟುಕು ಹೀರುವ ಮುನ್ನ ಈ ಸಂಪ್ರದಾಯ ಮಾಡಿದರೆ ಕತೆ ಮುಗಿಯಿತು. ಕಾರಣ ಒಂದೊಂದು ಹನಿಗೆ ಲಕ್ಷ ಲಕ್ಷ ರೂಪಾಯಿ. ಹೌದು, ವಿಶ್ವದ ಅತ್ಯಂತ ದುಬಾರಿ ಮದ್ಯ ಬರೋಬ್ಬರಿ 22.7 ಕೋಟಿ ರೂಪಾಯಿಗೆ ಮಾರಾಟವಾಗಿದೆ. 
 

ಮದ್ಯ ಪ್ರಿಯರಿಗೆ ದುಬಾರಿ ಮದ್ಯದ ಸವಿ ಅನುಭವಿಸಲು ಹಾತೊರೆಯುತ್ತಾರೆ. ಸಾವಿರ, ಲಕ್ಷ ರೂಪಾಯಿಗಳ ಮದ್ಯಗಳ ಗುಟುಕು ಹೀರುವುದೇ ಸಂತಸ ಕ್ಷಣ ಎನ್ನುತ್ತಾರೆ. ಈ ಮದ್ಯಪ್ರೀಯರ ಸಂತಲ ಡಬಲ್ ಮಾಡಲು ಇಲ್ಲೊಂದು ವಿಸ್ಕೆ ಇದೆ. ವಿಶ್ವದ ಅತ್ಯಂತ ದುಬಾರಿ ಈ ವಿಸ್ಕಿ ಬರೋಬ್ಬರಿ 22.7 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಈ ವಿಸ್ಕಿ ಹೆಸರು ಮೆಕಲಮ್ ಆ್ಯಡಮಿ 1926. ಈ ಸ್ಕಾಚ್ ವಿಸ್ಕಿ ಹರಾಜಿನಲ್ಲಿ ಬರೋಬ್ಬರಿ 2.1 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 22.7 ಕೋಟಿ ರೂಪಾಯಿಗೆ ಮಾರಾಟವಾಗಿದೆ.

Tap to resize

ಲಂಡನ್‌ನ ಸೂದಿಬೈಸ್ ಹರಾಜು ಸಂಸ್ಥೆ ಈ ವಿಶೇಷ ವಿಸ್ಕಿಯನ್ನು ಹರಾಜಿಗಿಟ್ಟಿತ್ತು. ಇದು ಬರೋಬ್ಬರಿ 60 ವರ್ಷ ಹಳೆಯ ಮದ್ಯ. ಹೀಗಾಗಿ ಈ ಮದ್ಯಕ್ಕೆ ಇಷ್ಟೊಂದು ಬೆಲೆ.

1986ರಲ್ಲಿ ಈ ಮದ್ಯವನ್ನು 40 ಬಾಟಲಿಗಳಲ್ಲಿ ತುಂಬಿ ಇಡಲಾಗಿತ್ತು. ದಶಕಗಳ ಬಳಿಕ ಒಂದೊಂದು ವಿಸ್ಕಿ ಬಾಟಲಿಯನ್ನು ಹರಾಜು ಮಾಡಲಾಗಿತ್ತು. ಹೀಗಾಗಿ ಕೊನೆಯಲ್ಲಿ 12 ಬಾಟಲಿ ಉಳಿದಿತ್ತು.

12 ಬಾಟಲಿ ಪೈಕಿ 2019ರಲ್ಲಿ ಇದೇ ರೀತಿ ಹರಾಜು ಮಾಡಲಾಗಿತ್ತು. ಈ ವೇಳೆ 15.56 ಕೋಟಿ ರೂಪಾಯಿಗೆ ಈ ಬಾಟಲಿ ಹರಾಜಿ ದಾಖಲೆ ಬರೆದಿತ್ತು. ಅದುವರೆಗೆ ಗರಿಷ್ಠ ಮೊತ್ತ ಇದಾಗಿತ್ತು.

ಇದೀಗ ಈ ಹಿಂದಿನ ಎಲ್ಲಾ ದಾಖಲೆಯನ್ನು ಮೆಕಲಮ್ ಆ್ಯಡಮಿ 1926 ವಿಸ್ಕಿ ಉಡೀಸ್ ಮಾಡಿದೆ. ಬರೋಬ್ಬರಿ 22.7 ಕೋಟಿ ರೂಪಾಯಿ ಹರಾಜಾಗುವ ಮೂಲಕ ಹೊಸ ದಾಖಲೆ ಬರೆದಿದೆ.

ಈ ಮದ್ಯದ ಹರಾಜಿನಲ್ಲಿ ನೋಂದಣಿ ಮಾಡಿದವರಿಗೆ ಒಂದೊಂದ ಹನಿ ರುಚಿ ನೋಡಲು ನೀಡಿದ್ದಾರೆ. ಹೀಗೆ ರುಚಿ ನೋಡಿದ ಹಲವರು ಹೇಗಾದರೂ ಮಾಡಿ ಈ ಮದ್ಯ ಖರೀದಿಸಲೇಬೇಕು ಎಂದು ಹಠ ಮಾಡಿ ಕುಳಿತವರೇ ಹೆಚ್ಚು. 

ಹರಾಜಿನ ವೇಳೆ ಬೆಲೆ ಏರುತ್ತಾ ಹೋದಂತೆ ನೋಂದಣಿ ಮಾಡಿದ ಹಲವರಿಗೆ ನಿರಾಸೆಯಾಗಿದೆ. ಆದರೆ ಕನಿಷ್ಠ ಲಕ್ಷ ರೂಪಾಯಿ ಒಂದು ಹನಿ ಹೀರಿದ್ದೇನೆ ಅನ್ನೋ ಸಮಾಧಾನ ಹಲವರಲ್ಲಿತ್ತು. ಈ ವಿಸ್ಕಿ ಮಾರಾಟಕ್ಕೆ ಲಭ್ಯವಿಲ್ಲ. ಕೇವಲ ಹರಾಜಿನಲ್ಲಿ ಮಾತ್ರ ಖರೀದಿಸಬೇಕು. ದುಬಾರಿ ವಿಸ್ಕಿ ಖರೀದಿಸಲು ಶ್ರೀಮಂತರ ನಡುವೇ ಬಾರಿ ಪೈಪೋಟಿ ಏರ್ಪಟ್ಟಿತ್ತು.

Latest Videos

click me!