ಅಕ್ಕಿ, ಗೋಧಿಯಲ್ಲಿನ ಕೀಟ ದೂರ ಮಾದಲು ಇಲ್ಲಿವೆ ಸೂಪರ್ ಟಿಪ್ಸ್

First Published | Nov 13, 2023, 5:48 PM IST

ಅಡುಗೆಮನೆಯಲ್ಲಿ ಇರಿಸಲಾದ ಧಾನ್ಯಗಳಲ್ಲಿ ಕೀಟಗಳು ಸಾಮಾನ್ಯವಾಗಿ ಕಂಡುಬರುತ್ತವೆ,  ಅಂತಹ ಪರಿಸ್ಥಿತಿಯಲ್ಲಿ, ಕೆಲವು ಮನೆಮದ್ದುಗಳು ಈ ಕೀಟಗಳನ್ನು ತೆಗೆದುಹಾಕುತ್ತವೆ ಮತ್ತು ಧಾನ್ಯ ಹಾಳಾಗಲು ಬಿಡುವುದಿಲ್ಲ. ಅವುಗಳ ಬಗ್ಗೆ ತಿಳಿಯೋಣ. 

ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಒಂದಲ್ಲ ಒಂದು ಧಾನ್ಯಗಳನ್ನು ಹೊಂದಿದ್ದಾರೆ, ಅದು ಗೋಧಿ ಅಥವಾ ಅಕ್ಕಿ ಮತ್ತು ರಾಗಿ ಇತ್ಯಾದಿ ಯಾವುದೋ ಒಂದು ಇದ್ದೇ ಇರುತ್ತೆ. ಗೋಧಿ ಮತ್ತು ಅಕ್ಕಿ ಹೆಚ್ಚಾಗಿ ಹುಳಗಳು ಅಥವಾ ಕೀಟಗಳಿಗೆ (insects) ಗುರಿಯಾಗುತ್ತವೆ. ಈ ಕೀಟಗಳು ಒಳಗಿನಿಂದ ಧಾನ್ಯಗಳನ್ನು ಟೊಳ್ಳಾಗಿಸಲು ಪ್ರಾರಂಭಿಸುತ್ತವೆ ಮತ್ತು ಅವುಗಳೊಳಗೆ ಕುಳಿತುಕೊಳ್ಳುತ್ತವೆ. ಹೀಗಿರೋವಾಗ ಅಡುಗೆ ಮಾಡೋ ಮೊದಲು ಅವುಗಳನ್ನು ತೆಗೆದು ಹಾಕೋದು ತುಂಬಾನೆ ಮುಖ್ಯ. ಧಾನ್ಯಗಳಲ್ಲಿನ ಕೀಟಗಳಿಂದ ನೀವು ತೊಂದರೆಗೀಡಾಗಿದ್ದರೆ, ಈ ಟಿಪ್ಸ್ ನಿಮ್ಮದಾಗಿಸಿ. 

ಬೇ ಲೀಫ್ ಅಥವಾ ಪುಲಾವ್ ಎಲೆ: ಬೇ ಎಲೆ (bay leaf) ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಧಾನ್ಯಗಳಲ್ಲಿನ ಕೀಟಗಳನ್ನು ದೂರವಿರಿಸುತ್ತದೆ. ಬೇ ಎಲೆಗಳನ್ನು ಧಾನ್ಯದ ಡಬ್ಬದಲ್ಲಿ ಹಾಕಿ ಇರಿಸಿ. ಬೇ ಎಲೆಯನ್ನು ಇಡುವುದರಿಂದ ಧಾನ್ಯ ಹಾಳಾಗುವುದಿಲ್ಲ ಮತ್ತು ಕೀಟಗಳು ಬೆಳೆಯೋದಿಲ್ಲವಂತೆ. 

Latest Videos


ಬೇವಿನ ಎಲೆಗಳು: ಬೇವಿನ ಎಲೆಗಳು (neem leaves) ಕೀಟಗಳಿಂದ ಧಾನ್ಯಗಳನ್ನು ರಕ್ಷಿಸುವಲ್ಲಿ ಪರಿಣಾಮ ಬೀರುತ್ತವೆ. ಬೇವಿನ ಎಲೆಗಳ ಔಷಧೀಯ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೀಟಗಳನ್ನು ದೂರವಿರಿಸುತ್ತದೆ. ಆದ್ದರಿಂದ, ಬೇವಿನ ಎಲೆಗಳನ್ನು ಗೋಧಿ, ಅಕ್ಕಿ ಅಥವಾ ಬೇಳೆಕಾಳುಗಳ ಪೆಟ್ಟಿಗೆಗಳಲ್ಲಿ ಇಡಬಹುದು.

ಬೆಳ್ಳುಳ್ಳಿ: ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಜೊತೆಗೆ ಕೀಟಗಳನ್ನು ದೂರವಿರಿಸುವಲ್ಲಿ ಸಹ ಉತ್ತಮ ಪರಿಣಾಮ ತೋರಿಸುತ್ತೆ. ಬೆಳ್ಳುಳ್ಳಿಯನ್ನು (Garlic) ಸಿಪ್ಪೆ ಸುಲಿಯದೆ ಧಾನ್ಯದ ಪೆಟ್ಟಿಗೆಯಲ್ಲಿ ಇರಿಸಿ. ಕೀಟಗಳು ಧಾನ್ಯಗಳಿಂದ ದೂರವಿರುತ್ತವೆ. 

ಲವಂಗ: ಇರುವೆಗಳು ಮತ್ತು ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಲವಂಗವನ್ನು ಬಳಸಲಾಗುತ್ತದೆ. ಧಾನ್ಯಗಳಿಂದ ಕೀಟಗಳನ್ನು ದೂರವಿರಿಸಲು ಈ ಲವಂಗವನ್ನು ಇಡಬಹುದು. ಧಾನ್ಯದಲ್ಲಿ ಕೀಟಗಳಿದ್ದರೆ, ಲವಂಗವನ್ನು (clove) ಇಟ್ಟುಕೊಂಡ ನಂತರ ಅವು ಓಡಿಹೋಗುತ್ತವೆ. ಜೊತೆಗೆ ಧಾನ್ಯಗಳಲ್ಲಿ ಕೀಟ ಬೆಳೆಯದೇ ಇರಲು ಸಹ ಇದು ಸಹಾಯ ಮಾಡುತ್ತೆ. 

ಸೂರ್ಯನ ಬೆಳಕು: ಕೆಲವೊಮ್ಮೆ ಧಾನ್ಯದಲ್ಲಿರುವ ತೇವಾಂಶದಿಂದ ಕೀಟಗಳು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಧಾನ್ಯವನ್ನು ಬಿಸಿಲಿನಲ್ಲಿ ಇಡುವುದು ಉತ್ತಮ. ನೀವು ಧಾನ್ಯವನ್ನು ಸ್ವಚ್ಛವಾದ ಬಟ್ಟೆಯ ಮೇಲೆ ಇರಿಸಿ ಮತ್ತು ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ (sunlight) ಇಡಬಹುದು. ಇದರಿಂದ ಕೀಟ ದೂರವಾಗುತ್ತೆ. 

click me!