ರೆಸಿಪಿ lehsuni palak - ಈ ಡಿಶ್‌ ಟ್ರೈ ಮಾಡಿ ನೋಡಿ !

First Published | Feb 28, 2021, 1:03 PM IST

ನಾವು ತಿನ್ನುವ ಆಹಾರಗಳು ರುಚಿ ಇದ್ದರೆ ಮಾತ್ರ ಸಾಲದು, ಆರೋಗ್ಯಕರವಾಗಿರವುದು ಸಹ ಮುಖ್ಯ. ಆದರೆ ಕೆಲವು ಸೊಪ್ಪು ತರಕಾರಿಗಳನ್ನು ಮಕ್ಕಳು ತಿನ್ನಲು ಇಷ್ಷ ಪಡುವುದಿಲ್ಲ. ಅಂತಹ ಸಮಯದಲ್ಲಿ ಪಾಲಕ್‌ ಸೊಪ್ಪಿನಿಂದ ಬೆಳ್ಳುಳ್ಳಿ ಪಾಲಕ್‌ (lehsuni palak) ಮಾಡಿ ನೋಡಿ. ಗ್ಯಾರಂಟಿ ಮಕ್ಕಳ ಜೊತೆ, ದೊಡ್ಡವರೂ ಈ ವಿಶೇಷ ರೆಸಿಪಿಯನ್ನು ಇಷ್ಟಪಡುತ್ತಾರೆ.

ಅನೇಕ ಪೋಷಕಾಂಶಗಳನ್ನು ಹೊಂದಿರಯವ ಪಾಲಕ್‌ ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
undefined
ಫೈಬರ್‌ ಅಂಶ ಹೆಚ್ಚಿರುವ ಈ ಸೊಪ್ಪಿನಲ್ಲಿ ಪ್ರೋಟಿನ್‌ ಹಾಗೂ ಕಬ್ಬಿಣದ ಅಂಶ ಹೇರಳವಾಗಿದೆ.
undefined
Tap to resize

ಟೇಸ್ಟಿ ಬೆಳ್ಳುಳ್ಳಿ ಪಾಲಕ್‌ ತಯಾರಿಸುವ ಈಸಿರೆಸಿಪಿ ಇಲ್ಲಿದೆ.
undefined
12 ಕೆಜಿ ಪಾಲಕ್‌, 2 ಚಮಚ ಬೆಳ್ಳುಳ್ಳಿ, 12 ಕಪ್ ಹೆಚ್ಚಿದ ಈರುಳ್ಳಿ, 2 ಹಸಿರು ಮೆಣಸಿನಕಾಯಿ, 1 ಟೀಸ್ಪೂನ್ ಗರಂ ಮಸಾಲ, 2 ಒಣ ಕೆಂಪು ಮೆಣಸಿನಕಾಯಿ, ರುಚಿಗೆ ತಕ್ಕಂತೆ ಉಪ್ಪು.
undefined
ಬೆಳ್ಳುಳ್ಳಿ ಪಾಲಕ್‌ ಅನ್ನು ತಯಾರಿಸಲು, ಮೊದಲು ಪಾಲಕ್‌ವನ್ನು ಚೆನ್ನಾಗಿ ತೊಳೆದು ಪ್ರೆಶರ್ ಕುಕ್ಕರ್‌ನಲ್ಲಿ ಎರಡುಸೀಟಿ ಕೂಗಿಸಿ. ಬೆಂದ ಪಾಲಕ್‌ ಸೊಪ್ಪನ್ನು ತಣ್ಣೀರಿನಲ್ಲಿ ಹಾಕಿ.
undefined
ಪ್ಯಾನ್‌ಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿಎಣ್ಣೆಯನ್ನು ಚೆನ್ನಾಗಿ ಕಾಯಿಸಿ.
undefined
ಕಾದ ಎಣ್ಣೆಗೆ ಜೀರಿಗೆ ಹಾಕಿ ಕೆಂಪಾದ ನಂತರ, ಈರುಳ್ಳಿ ಸೇರಿಸಿ. ಈಗ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
undefined
ಈ ನಡುವೆ ನೀರು ಬಸಿದು ಪಾಲಕ್‌ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ.
undefined
ಫ್ರೈ ಆಗಿರುವ ಈರುಳ್ಳಿ, ಬೆಳ್ಳುಳ್ಳಿಗೆ ಪಾಲಕ್ ಪೇಸ್ಟ್ ಸೇರಿಸಿ. ಸುಮಾರು 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಪಾಲಕ್ ಚೆನ್ನಾಗಿ ಬೆಂದಾಗ ಅದಕ್ಕೆ ಗರಂ ಮಸಾಲ ಮತ್ತು ಉಪ್ಪು ಸೇರಿಸಿ.
undefined
ಈ ಮಿಶ್ರಣ ದಪ್ಪವಾದರೆ ಅದಕ್ಕೆ ನೀರನ್ನು ಸೇರಿಸಿ ಸ್ಪಲ್ಪ ಕುದಿಯಲು ಬಿಡಿ.
undefined
ಅಂತಿಮವಾಗಿ, ಮತ್ತೊಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆ, ಬೆಳ್ಳುಳ್ಳಿ ಮತ್ತು ಕೆಂಪು ಮೆಣಸಿನಕಾಯಿಒಗ್ಗರಣೆ ತಯಾರಿಸಿಕೊಳ್ಳಿ.
undefined
ಅದನ್ನು ತಕ್ಷಣ ಪಾಲಕ್‌ ಮಿಶ್ರಣದ ಮೇಲೆ ಹಾಕಿದರೆಬೆಳ್ಳುಳ್ಳಿ ಪಾಲಕ್‌ ರೆಡಿ. Lehsuni palak ಅನ್ನು ರೋಟಿ ಯಾ ಚಪಾತಿಯೊಂದಿಗೆ ಎಂಜಾಯ್‌ ಮಾಡಿ.
undefined

Latest Videos

click me!