ಕಿತ್ತಳೆ ಚಳಿಗಾಲದ ಸಾಮಾನ್ಯ ಹಣ್ಣಾಗಿದ್ದು, ವಿಟಮಿನ್ ಸಿ ಯ ಪ್ರಯೋಜನಗಳನ್ನು ಹೊಂದಿದೆ. ಆದರೆಬಿಸಾಡುವ ಸಿಪ್ಪೆಯಲ್ಲಿಯೂ ಸಹ ಪೋಷಕಾಂಶಗಳಿವೆ ಮತ್ತು ತುಂಬಾ ಆರೋಗ್ಯಕರವಾಗಿದೆ. ಕಿತ್ತಳೆ ಸಿಪ್ಪೆಯ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
ಈ ಚಹಾವನ್ನು ತಯಾರಿಸುವುದು ಹೇಗೆಬೇಕಾಗುವ ಸಾಮಗ್ರಿಗಳು: .ಅರ್ಧ ಕಿತ್ತಳೆ ಸಿಪ್ಪೆಒಂದೂವರೆ ಕಪ್ ನೀರು .12 ಇಂಚು ದಾಲ್ಚಿನ್ನಿ 2-3 ಲವಂಗ1-2 ಹಸಿರು ಏಲಕ್ಕಿ12 ಟೇಬಲ್ ಸ್ಪೂನ್ ಬೆಲ್ಲ .
ತಯಾರಿಸುವುದು ಹೇಗೆ?ಒಂದು ಪಾತ್ರೆಗೆ ನೀರು ಹಾಕಿ ಮಧ್ಯಮ ಉರಿಯಲ್ಲಿ ಒಲೆಯ ಮೇಲೆ ಇಡಿ. ಈಗ ಅದಕ್ಕೆ ಕತ್ತರಿಸಿದ ಕಿತ್ತಳೆ ಸಿಪ್ಪೆ ಮತ್ತು ಇತರ ಮಸಾಲೆಗಳನ್ನು ಸೇರಿಸಿ. 2-3 ನಿಮಿಷ ಕುದಿಯಲು ಬಿಡಿ, ನಂತರ ಒಲೆ ಆಫ್ ಮಾಡಿ. ಒಂದು ಕಪ್ ನಲ್ಲಿ ಟೀ ಹಾಕಿ , ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಕಲಕಿ. ಕಿತ್ತಳೆ ಸಿಪ್ಪೆಯ ಚಹಾ ಸಿದ್ಧವಾಗಿದೆ.
ಕಿತ್ತಳೆ ಸಿಪ್ಪೆಯ ಪ್ರಯೋಜನಗಳು:ಸಿಟ್ರಿಕ್ ಹಣ್ಣುಗಳ ಹೊರಚರ್ಮವು ಫ್ಲೇವನಾಯ್ಡ್ ಗಳ ಉಪಸ್ಥಿತಿಯಿಂದಾಗಿ ಕಹಿರುಚಿಯನ್ನು ಹೊಂದಿದ್ದು, ಇದು ಹಣ್ಣನ್ನು ಕೀಟಗಳಿಂದ ರಕ್ಷಿಸುತ್ತದೆ. ಇದು ಹಣ್ಣಿನ ಇತರ ಭಾಗಗಳಿಗಿಂತ ಹೆಚ್ಚಿನ ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತದೆ.
ಹಣ್ಣುಗಳಂತೆಯೇ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ನಾರಿನಾಂಶ, ವಿಟಮಿನ್ ಸಿ, ಪಾಲಿಫೆನಾಲ್ ನಂತಹ ಸಸ್ಯ ಸಂಯುಕ್ತಗಳೂ ಸೇರಿದಂತೆ ಹಲವಾರು ಪೋಷಕಾಂಶಗಳಿವೆ.
ಇದರಲ್ಲಿ ಪ್ರೋವಿಟಮಿನ್ ಎ, ಫೋಲೇಟ್, ರೈಬೋಫ್ಲೇವಿನ್, ಥಿಯಾಮಿನ್, ವಿಟಮಿನ್ ಬಿ6 ಮತ್ತು ಕ್ಯಾಲ್ಸಿಯಂ ನಂತಹ ಇತರ ಆರೋಗ್ಯ ಸ್ನೇಹಿ ಪೋಷಕಾಂಶಗಳಿವೆ. ಕಿತ್ತಳೆ ಸಿಪ್ಪೆಯ ಚಹಾದ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.
ಕ್ಯಾನ್ಸರ್ ಬರದಂತೆ ತಡೆಯಬಹುದು:ಸಿಟ್ರಿಕ್ ಹಣ್ಣುಗಳ ಚರ್ಮವು ಲಿಮೋನೆನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ವಿಶೇಷವಾಗಿ ಕಿತ್ತಳೆ ಸಿಪ್ಪೆಗಳಲ್ಲಿ ಇದು ಕೇಂದ್ರೀಕೃತವಾಗಿದ್ದು, ನೈಸರ್ಗಿಕವಾಗಿ ದೊರೆಯುವ ಈ ರಾಸಾಯನಿಕವು ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಆಹಾರದಲ್ಲಿ ಸೇರಿಸಿದಲ್ಲಿ ಉರಿಯೂತ ಮತ್ತು ಚರ್ಮದ ಕ್ಯಾನ್ಸರ್ ನಿಂದ ಉಂಟಾಗುವ ವಿವಿಧ ರೀತಿಯ ಕಾಯಿಲೆಗಳನ್ನು ತಡೆಗಟ್ಟಬಹುದು.
ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಚಹಾದ ಪ್ರಬಲ ರುಚಿಯು ಲಾಲಾರಸ ಮತ್ತು ಜಠರ ಆಮ್ಲಗಳ ಉತ್ಪಾದನೆಯನ್ನು ಹೆಚ್ಚಿಸಬಹುದು. ಪ್ರತಿದಿನ ಬೆಳಗ್ಗೆ ಈ ಟೀ ಯನ್ನು ನಿಯಮಿತವಾಗಿ ಕುಡಿಯುವುದರಿಂದ ಜೀರ್ಣಾಂಗವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ಸುಧಾರಿಸುತ್ತದೆ. ಜೊತೆಗೆ ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಂಶವು ಚಯಾಪಚಯ ಕ್ರಿಯೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೀರ್ಘಕಾಲೀನ ರೋಗಗಳನ್ನು ತಡೆಯಿರಿ:ಪಾಲಿಫಿನಾಲ್ಸ್ ಎಂಬ ಸಸ್ಯ ಸಂಯುಕ್ತದ ಸಮೃದ್ಧ ಮೂಲವಾಗಿರುವ ಈ ಚಹಾವು ಟೈಪ್ 2 ಮಧುಮೇಹ, ಬೊಜ್ಜು ಮತ್ತು ಅಲ್ಝೈಮರ್ ನಂತಹ ಅನೇಕ ದೀರ್ಘಕಾಲೀನ ಪರಿಸ್ಥಿತಿಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.
ಕಿತ್ತಳೆ ಸಿಪ್ಪೆಯನ್ನು ಸಾಮಾನ್ಯವಾಗಿ ಕುಕೀಸ್ ಮತ್ತು ಕೇಕ್ ತಯಾರಿಸಲು ಬಳಸಲಾಗುತ್ತದೆ. ಇದು ಸೇವನೆಗೆ ಸಂಪೂರ್ಣ ಸುರಕ್ಷಿತ. ಆದರೆ, ಕೆಲವರಿಗೆ ಹೊಟ್ಟೆ ಸಮಸ್ಯೆ ಯಂತಹ ಅಡ್ಡ ಪರಿಣಾಮಗಳು ಉಂಟಾಗಬಹುದು. ಅಂತವರು ಈ ಚಹಾವನ್ನು ಸೇವಿಸಬಾರದು. ಟೀ ತಯಾರಿಸುವಾಗ ಕಿತ್ತಳೆ ಸಿಪ್ಪೆಯನ್ನು ಹೆಚ್ಚು ಬಳಸಬೇಡಿ.