ಚಿಕನ್ ಬಿರಿಯಾನಿ ಜೊತೆ ಮೊಟ್ಟೆ ತಿಂತೀರಾ..? ಹಾಗಾದ್ರೆ ಇಲ್ಲಿ ಓದಿ

First Published | Feb 24, 2021, 6:25 PM IST

ಮೊಟ್ಟೆ ಪ್ರೋಟೀನ್ ನ ಉತ್ತಮ ಮೂಲವಾಗಿದೆ. 1 ಮೊಟ್ಟೆಯ ಹಳದಿ ಭಾಗವು  6 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಇದರಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಕೂಡ ಇವೆ. ಆದರೆ ಈ ಪ್ರಯೋಜನಕಾರಿ ಮೊಟ್ಟೆಯನ್ನು ತಿನ್ನುವ ಸರಿಯಾದ ವಿಧಾನ ಗೊತ್ತಿಲ್ಲದಿದ್ದರೆ, ಅದು ಸಾವಿಗೆ ಕಾರಣವಾಗಬಹುದು. 

ಹೌದು, ಮೊಟ್ಟೆಯನ್ನು ಕೆಲವು ವಸ್ತುಗಳೊಂದಿಗೆ ತಿಂದರೂ ಅದು ವಿಷವಾಗಿ ಜೀವವನ್ನು ತೆಗೆಯಬಹುದು. ಮೊಟ್ಟೆ ತಿನ್ನುವ ಮುನ್ನ ಮೊಟ್ಟೆಗಳ ಪರಿಪೂರ್ಣ ಗುಣಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ಈ ಕೆಳಗೆ ತಿಳಿಸಿದ ಪದಾರ್ಥಗಳೊಂದಿಗೆ ಮೊಟ್ಟೆ ಸೇವಿಸಿದರೆ ಅಪಾಯ ಖಂಡಿತಾ.
ಮೊಟ್ಟೆಯನ್ನು ತಿನ್ನುವಾಗ ಕೆಲವು ವಸ್ತುಗಳಿಂದ ದೂರವಿರಬೇಕು. ಈ ಸಂಯೋಜನೆಗಳನ್ನು ಪರಿಗಣಿಸದಿದ್ದರೆ, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇವುದೇಹದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಅವುಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು.
Tap to resize

ಈ ಪಟ್ಟಿಯಲ್ಲಿ ಮೊದಲ ಹೆಸರು ಹುಳಿ ಪದಾರ್ಥಗಳಿಂದ ಆರಂಭವಾಗುತ್ತದೆ. ಹೌದು, ಎಂದಿಗೂ ಮೊಟ್ಟೆಯೊಂದಿಗೆ ಹುಳಿಪದಾರ್ಥಗಳನ್ನು ಸೇವಿಸಬಾರದು. ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಹುಳಿ ಪದಾರ್ಥಗಳನ್ನು ಮೊಟ್ಟೆಯೊಂದಿಗೆ, ಸೇವಿಸುವುದು ಎಂದರೆ ಉದಾಹರಣೆಗೆ ಕಿತ್ತಳೆ ಅಥವಾ ನಿಂಬೆಹಣ್ಣು ಜೊತೆಗೆ ಮೊಟ್ಟೆ ತಿಂದಾಗ, ಅವು ದೇಹದ ಒಳಗೆ ಹೋಗಿ ವಿಷವಾಗಿ ಪರಿವರ್ತನೆ ಹೊಂದುತ್ತವೆ.
ಮೊಟ್ಟೆ ಮತ್ತು ಹುಳಿ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಹೃದಯದ ತೊಂದರೆಗಳು ಕಾಡುತ್ತವೆ. ಹೃದಯವು ದುರ್ಬಲವಾಗುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.
ಅನೇಕ ಸಂದರ್ಭಗಳಲ್ಲಿ, ವೈದ್ಯರು ಮೊಟ್ಟೆಯೊಂದಿಗೆ ತಿಂದ ಹುಳಿ ಪದಾರ್ಥಗಳು ದೇಹದಲ್ಲಿ ವಿಷಕಾರಿ ಆಮ್ಲಗಳನ್ನು ಉಂಟುಮಾಡುತ್ತವೆ, ಇದರಿಂದ ಅಂಗಗಳಿಗೆ ಹಾನಿಯುಂಟಾಗುತ್ತದೆ ಎಂದು ಹೇಳುತ್ತಾರೆ.
ಹುಳಿ ಪದಾರ್ಥಗಳನ್ನು ಹೊರತುಪಡಿಸಿ, ಮಾಂಸ ಮತ್ತು ಮೀನುಗಳನ್ನು ಮೊಟ್ಟೆಯೊಂದಿಗೆ ಸೇವಿಸಬಾರದು. ಇದೊಂದು ಅತ್ಯಂತ ಮಾರಕವಾದ ಸಂಯೋಜನೆಯಾಗಿದೆ. ಅನೇಕ ಜನರು ಈ ತಪ್ಪುಗಳನ್ನು ಮಾಡುತ್ತಾರೆ.
ಅನೇಕ ರೆಸ್ಟೋರೆಂಟ್ ಗಳಲ್ಲಿ ಮೊಟ್ಟೆಗಳನ್ನು ಚಿಕನ್ ಅಥವಾ ಮಟನ್ ಬಿರಿಯಾನಿ ಜೊತೆ ಬಡಿಸಲಾಗುತ್ತದೆ. ಆದರೆ ಅದು ಸಂಪೂರ್ಣ ತಪ್ಪು. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮೊಟ್ಟೆಯೊಂದಿಗೆ ಮಾಂಸ ಮತ್ತು ಮೀನು ಗಳನ್ನು ತಿಂದಾಗ ಚರ್ಮದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಮೊಡವೆ ಮತ್ತು ಬಿಳಿ ಕಲೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಕೋಳಿ ಅಥವಾ ಮೀನುಗಳನ್ನು ಮೊಟ್ಟೆಯೊಂದಿಗೆ ಸೇವಿಸಬಾರದು!!

Latest Videos

click me!