ರಂಜಾನ್ ಮಾಸದಲ್ಲಿ ಉಪವಾಸದ ಸಮಯದಲ್ಲಿ ಸೇವಿಸುವ ವಿಶೇಷ ಪಾನೀಯವೇ ಮೊಹಬ್ಬತ್ ಕಾ ಶರಬತ್. ಹಾಲು, ಕಲ್ಲಂಗಡಿ, ಮತ್ತು ರೂಹ್‌ಅಫ್ಜಾ ಬಳಸಿ ತಯಾರಿಸುವ ಈ ಪಾನೀಯವು ದೇಹಕ್ಕೆ ತಂಪು ನೀಡಿ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಲೇಖನದಲ್ಲಿ ಇದನ್ನು ತಯಾರಿಸುವ ಸರಳ ವಿಧಾನವನ್ನು ವಿವರಿಸಲಾಗಿದೆ.
ರಂಜಾನ್ ಮಾಸದಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗೋದರ ಜೊತೆ ಮುಸ್ಲಿಮರು ತಾವು ಸೇವಿಸುವ ಆಹಾರಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಉಪವಾಸಕ್ಕೂ ಮುನ್ನ ಮತ್ತು ಉಪವಾಸದ ನಂತರ ಏನು ಸೇವಿಸಬೇಕು ಎಂಬುದರ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುತ್ತಾರೆ. ಮಾಂಸಾಹಾರ ಜೊತೆ ಫಲಹಾರಕ್ಕೂ ವಿಶೇಷವಾಗಿ ಗಮನ ನೀಡುತ್ತಾರೆ. ರಂಜಾನ್‌ನಲ್ಲಿ ತಯಾರಿಸಲಾಗುವ ವಿಶೇಷ ಪಾನೀಯ ಅಂದ್ರೆ ಅದು ಮೊಹಬ್ಬತ್ ಕಾ ಶರಬತ್.
25
ಇಲ್ಲಿದೆ ರೆಸಿಪಿ
ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಮೊಹಬ್ಬತ್ ಕಾ ಶರಬತ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಒಂದು ಗ್ಲಾಸ್ ಈ ಜ್ಯೂಸ್ ಕುಡಿದ್ರೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಮೊಹಬ್ಬತ್ ಕಾ ಶರಬತ್ ತಯಾರಿಸುವ ರೆಸಿಪಿ ಇಲ್ಲಿದೆ.
35
ಮೊಹಬ್ಬತ್ ಕಾ ಶರಬತ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಹಾಲು: 2 ಕಪ್, ಕಲ್ಲಂಗಡಿ, ಸಕ್ಕರೆ: 1 ಟೀ ಸ್ಪೂನ್, ರೂಹ್‌ಅಫ್ಜಾ (ರೋಸ್ ಸಿರಪ್): 2 ಟೀ ಸ್ಪೂನ್, ಚಿಯಾಬೀಜಗಳು: ಅರ್ಧ ಟೀ ಸ್ಪೂನ್, ಐಸ್ ಕ್ಯೂಬ್ ಮತ್ತು ಜೇನು
ಮೊದಲಿಗೆ ಚಿಯಾಬೀಜಗಳನ್ನು ನೀರಿನಲ್ಲಿ ಹಾಕಿಕೊಂಡು 10 ರಿಂದ 20 ನಿಮಿಷ ನೆನೆಸಿಟ್ಟುಕೊಳ್ಳಬೇಕು. ಮತ್ತೊಂದೆಡೆ ಹಾಲು ಚೆನ್ನಾಗಿ ಬಿಸಿ ಮಾಡಿಕೊಂಡು ತಣ್ಣಗಾಗಲು ಬಿಡಿ. ಹಾಲು ಸಂಪೂರ್ಣವಾಗಿ ತಣ್ಣಗಾದ ನಂತರವೇ ಪಾನೀಯ ತಯಾರಿಸಲು ಬಳಸಬೇಕು.
55
ಬೇಕಿದ್ರೆ ಜೇನುತುಪ್ಪ ಸೇರಿಸಿಕೊಳ್ಳಿ
ಈಗ ಒಂದು ಪಾತ್ರೆಗೆ ಹಾಲು ಹಾಕಿಕೊಳ್ಳಬೇಕು. ಈಗ ಇದಕ್ಕೆ ನೆನೆಸಿಟ್ಟುಕೊಂಡಿರುವ ಚಿಯಾಬೀಜ, ರೂಹ್‌ಅಫ್ಜಾ ಮತ್ತು ಸಕ್ಕರೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕಲ್ಲಂಗಡಿ ಸೇರಿಸಿಕೊಂಡ್ರೆ ರುಚಿಯಾದ ರಿಫ್ರೆಶ್ ಪಾನೀಯ ಮೊಹಬ್ಬತ್ ಕಾ ಶರಬತ್ ಕುಡಿಯಲು ಸಿದ್ಧವಾಗುತ್ತದೆ. ಕೊನೆಗೆ ಐಸ್ ಕ್ಯೂಬ್ ಹಾಕಿಕೊಳ್ಳಿ. ಬೇಕಿದ್ರೆ ಜೇನು ತುಪ್ಪ ಮತ್ತು ಅಲಂಕಾರಕ್ಕೆ ಗುಲಾಬಿ ದಳ ಬಳಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.