Poha Laddu Recipe: ಬೆಸನ್- ಮೋತಿಚೂರ್ ಲಡ್ಡು ಬಿಡಿ, ಈ ಪೋಹಾ ಲಡ್ಡು ಮಾಡಿ ನೋಡಿ...

Suvarna News   | Asianet News
Published : Nov 22, 2021, 04:55 PM IST

ಅವಲಕ್ಕಿ (Poha) ಭಾರತದ ಅತ್ಯಂತ ಪ್ರಸಿದ್ಧ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಮಾಡೋದು ಸುಲಭ ಆಗಿರೋದರಿಂದ ಪ್ರತಿಮನೆಯಲ್ಲೂ ಇದ್ದೆ ಇರುತ್ತೆ. ಜೊತೆಗೆ ದೇಗುಲಗಳಲ್ಲಿ ಪ್ರಸಾದವಾಗಿ ಸಹ ಇದನ್ನು ನೀಡುತ್ತಾರೆ. ಇದು ತ್ವರಿತವಾಗುತ್ತದೆ ಮತ್ತು ತಿನ್ನಲು ತುಂಬಾ ರುಚಿಕರವಾಗಿದೆ. ಆದರೆ ನೀವು ಎಂದಾದರೂ ಅವಲಕ್ಕಿಯಿಂದ ಮಾಡಿದ ಲಡ್ಡುಗಳನ್ನು ತಯಾರಿಸಿ ತಿಂದಿದ್ದೀರಾ? 

PREV
19
Poha Laddu Recipe: ಬೆಸನ್- ಮೋತಿಚೂರ್ ಲಡ್ಡು ಬಿಡಿ, ಈ ಪೋಹಾ ಲಡ್ಡು ಮಾಡಿ ನೋಡಿ...

ಹೌದು, ಪೊಹಾ ಅಥವಾ ಅವಲಕ್ಕಿಯಿಂದಲೂ ಲಡ್ಡುಗಳನ್ನು ಮಾಡಬಹುದು. ಮತ್ತು ಆ ಲಡ್ಡುಗಳು ತುಂಬಾ ರುಚಿಕರ ಮತ್ತು ತ್ವರಿತವಾಗಿ ಸಿದ್ಧವಾಗಿರುತ್ತವೆ. ನೀವು ಕೂಡ ಈ ಲಡ್ಡನ್ನು ಮನೆಯಲ್ಲಿ ಮಾಡಿ ಸೇವಿಸಬಹುದು. ಬೆಲ್ಲ ಮತ್ತು ಅವಲಕ್ಕಿಯಿಂದ ಮಾಡಲಾಗುವ ಈ ಲಡ್ಡನ್ನು ಹೇಗೆ ತಯಾರಿಸಬಹುದು? ಇಲ್ಲಿದೆ ಸಂಪೂರ್ಣ ರೆಸಿಪಿ ನೀವು ಟ್ರೈ ಮಾಡಿ. 

29

ಬೇಕಾಗುವ ಸಾಮಗ್ರಿಗಳು : 
250 ಗ್ರಾಂ ಪೋಹಾ
1-1 ಕಪ್ ತೆಂಗಿನಕಾಯಿ 
ಬೆಲ್ಲ (ತುರಿದ)
3/4 ಕಪ್ ತುಪ್ಪ
10 ಗೋಡಂಬಿ (ಕತ್ತರಿಸಿದ)
2 ಚಮಚ ಒಣದ್ರಾಕ್ಷಿ

39

ಪೋಹಾ/ಅವಲಕ್ಕಿ ಲಡ್ಡುಗಳನ್ನು ತಯಾರಿಸಲು, ಮೊದಲು ಒಂದು ಪ್ಯಾನ್ ತೆಗೆದುಕೊಳ್ಳಿ ಮತ್ತು ಬಿಸಿ ಮಾಡಿದ ನಂತರ ಪೋಹಾವನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಹುರಿಯಿರಿ. ಅವಲಕ್ಕಿ ಹೆಚ್ಚು ಫ್ರೈ ಆಗದಂತೆ ನೋಡಿಕೊಳ್ಳಿ. ಅವಲಕ್ಕಿ ತೆಳುವಾಗಿರೋದರಿಂದ ಅದು ಬೇಗ ಫ್ರೈ ಆಗುತ್ತದೆ. ಆದುದರಿಂದ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಲು ಇರಿಸಿ.

49

ಪೊಹಾ ತಣ್ಣಗಾದ ನಂತರ ಮಿಕ್ಸರ್ ಜಾರ್ ನಲ್ಲಿ  (mixi jar)ಹಾಕಿ ರುಬ್ಬಿಕೊಳ್ಳಿ. (ಅದನ್ನು ಚೆನ್ನಾಗಿ ಪುಡಿ ಮಾಡಬೇಕು ಎಂಬುದನ್ನು ನೆನಪಿಡಿ) ಚೆನ್ನಾಗಿ ಪುಡಿ ಆಗುವಂತೆ ನೋಡಿಕೊಳ್ಳಿ. ಇದರಿಂದ ಲಡ್ಡು ಸಹ ಚೆನ್ನಾಗಿ ಬರುತ್ತದೆ. ಇಲ್ಲವಾದರೆ ಉಂಡೆ ಕಟ್ಟಲು ಮತ್ತು ತಿನ್ನಲು ಸ್ವಲ್ಪ ಕಷ್ಟವಾಗುತ್ತದೆ. 

59

ಈಗ ಒಂದು ಬಾಣಲೆಯಲ್ಲಿ 1 ಟೀ ಚಮಚ ತುಪ್ಪ ಬಿಸಿ ಮಾಡಿ ಮತ್ತು ತೆಂಗಿನಕಾಯಿಯನ್ನು ಕಡಿಮೆ ಉರಿಯಲ್ಲಿ ಹುರಿದು ಒಂದು ತಟ್ಟೆಯಲ್ಲಿ ತೆಗೆದು ಬದಿಯಲ್ಲಿ ಇರಿಸಿ. ಗೋಡಂಬಿ (cashew nut) ಮತ್ತು ಒಣದ್ರಾಕ್ಷಿಯನ್ನು (raisins) ತುಪ್ಪದಲ್ಲಿ ಒಂದೊಂದಾಗಿ ಒಂದೇ ಬಾಣಲೆಯಲ್ಲಿ ಹುರಿಯಿರಿ.

69

ಈಗ ಒಂದು ದೊಡ್ಡ ಪಾತ್ರೆಯಲ್ಲಿ ಪೋಹಾ ಪುಡಿ, ಏಲಕ್ಕಿ ಪುಡಿ, ಗೋಡಂಬಿ-ಒಣದ್ರಾಕ್ಷಿ, ತುರಿದ ಬೆಲ್ಲ ಮತ್ತು ತೆಂಗಿನಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತುಂಬಾ ಒಣಗಿದ ಅನುಭವವಾದರೆ ಅದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಇದರಿಂದ ಲಡ್ಡು ಮೃದುವಾಗುತ್ತದೆ. ಈಗ  ಮಧ್ಯಮ ಗಾತ್ರದ ಲಡ್ಡುಗಳನ್ನು ಮಾಡಿ.

79

ಪೊಹಾದಿಂದ ತಕ್ಷಣ ತಯಾರಿಸಲಾದ ಸೂಪರ್ ಟೇಸ್ಟಿ ಲಡ್ಡುಗಳು ಸಿದ್ಧ. ನೀವು ಇದನ್ನು ಗಾಳಿಯಾಡದ ಕಂಟೇನರ್ (container) ನಲ್ಲಿ 15-20 ದಿನಗಳವರೆಗೆ ಸಂಗ್ರಹಿಸಬಹುದು. ಈ ಲಡ್ಡು ತುಂಬಾನೇ ಟೇಸ್ಟಿಯಾಗಿರುತ್ತದೆ. ಮಾಡೋದು ಸಹ ತುಂಬಾ ಸುಲಭವಾಗಿದೆ. ಆದುದರಿಂದ ಇದನ್ನು ನೀವು ಯಾವಾಗ ಬೇಕಾದರೂ ಮಾಡಿ ಸೇವಿಸಬಹುದು. 

89

ಅವಲಕ್ಕಿಯ ಪ್ರಯೋಜನಗಳು (benes of poha)

ಪೊಹಾ ಅಥವಾ ಅವಲಕ್ಕಿಯಲ್ಲಿ ಆಂಟಿ ಆಕ್ಸಿಡೆಂಟ್, ಖನಿಜಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ. ಇದನ್ನು ಜೀರ್ಣಿಸಿಕೊಳ್ಳುವುದು ತುಂಬಾ ಸುಲಭ. ಮತ್ತೊಂದೆಡೆ, ತಂಪಾದ ದಿನಗಳಲ್ಲಿ ಬೆಲ್ಲ ತಿನ್ನುವುದು ತುಂಬಾ ಪ್ರಯೋಜನಕಾರಿ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿ. 

99
गुड़ के फायदे

ಬೆಲ್ಲದ ಪ್ರಯೋಜನಗಳು (benefits of jaggery)
ಬೆಲ್ಲದಲ್ಲಿ ಕಬ್ಬಿಣ ಮತ್ತು ಫ್ಲೋರಿನ್ ಸಮೃದ್ಧವಾಗಿದೆ. ಅಲ್ಲದೇ ಹಲವಾರು ರೀತಿಯ ವಿಟಮಿನ್ ಗಳು ಮತ್ತು ಖನಿಜಗಳು ನಿಮ್ಮನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಅಲ್ಲದೆ ಚಳಿಗಾಲದಲ್ಲಿ ಬೆಲ್ಲ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಇದು ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ. 

Read more Photos on
click me!

Recommended Stories