Green Peas Paratha : ಬಾಯಲ್ಲಿ ನೀರೂರಿಸುವ ತಿಂಡಿಯ ರೆಸಿಪಿ, ಮಾಡಿ, ಸವಿಯಿರಿ

First Published | Nov 17, 2021, 2:04 PM IST

ಚಳಿಗಾಲ ಸಮೀಪಿಸುತ್ತಿದ್ದಂತೆ ನಮ್ಮ ಮನೆಗಳಲ್ಲಿ ಆಲೂಗಡ್ಡೆ, ಎಲೆಕೋಸು, ಪಾಲಕ್ ಮತ್ತು ಮೆಂತ್ಯಗಳಂತಹ ವಿವಿಧ ತರಕಾರಿಗಳನ್ನು ಹೆಚ್ಚಾಗಿ ತರಲು ಆರಂಭಿಸುತ್ತಾರೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ  (vegetables) ಮಾಡಿದ ಪರೋಟ ಮಾಡಿ ನೀವು ಸವಿದಿರಬಹುದು. ಆದರೆ ಇಂದು ನಾವು ಬಟಾಣಿ ಪರೋಟ ರೆಸಿಪಿಯ ಬಗ್ಗೆ ನಿಮಗೆ ತಿಳಿಸುತ್ತೇವೆ, ಇದು ತಿನ್ನಲು ತುಂಬಾ ರುಚಿಕರ ಮತ್ತು ಆರೋಗ್ಯಕರವಾಗಿದೆ. 

ಚಳಿಗಾಲದಲ್ಲಿ ಬಟಾಣಿ ತಾಜಾ (fresh green peas) ಆಗಿರುವ ಕಾರಣ, ಬಟಾಣಿಯನ್ನು ಚಳಿಗಾಲದಲ್ಲಿ ಬಳಸುತ್ತಾರೆ. ತರಕಾರಿಗಳು ಅಥವಾ ಮನೆಯಲ್ಲಿ ತಯಾರಿಸಿದ ತಿಂಡಿಗಳಲ್ಲಿ ಬಳಸಲಾಗುತ್ತದೆ. ಉದಾ: ಪೋಹಾ, ಪನ್ನೀರ್, ಮಿಕ್ಸ್ ವೆಜ್, ಪುಲಾವ್ ಇತ್ಯಾದಿ. ಆದರೆ ಇಂದು  ಬಟಾಣಿ ಪರೋಟಾ ರೆಸಿಪಿಯನ್ನು ತಿಳಿಸುತ್ತೇವೆ, ಈ ಪರೋಟಾ ತಯಾರಿಸುವುದು ಸುಲಭ, ಮತ್ತು ಆರೋಗ್ಯಕ್ಕೂ ಒಳ್ಳೆಯದು.

ಬಟಾಣಿ ಪರೋಟ ತಯಾರಿಸುವುದು ಹೇಗೆ? 
1 ಕಪ್ ಗೋಧಿ ಹಿಟ್ಟು
1 ಕಪ್ ತಾಜಾ ಬಟಾಣಿ
1 ಅಥವಾ 2 ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ 
ಸ್ವಲ್ಪ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಎಲೆಗಳು
1 ತುರಿದ ಶುಂಠಿ
ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಆಮ್ಚೂರ್ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು

Tap to resize

ಮಾಡುವುದು ಹೇಗೆ?
ಮೊದಲು ಬಟಾಣಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಚೆನ್ನಾಗಿ ಬೇಯಿಸಿ. ಬಯಸಿದರೆ ಉಪ್ಪನ್ನು ಸೇರಿಸಬಹುದು, ಆದ್ದರಿಂದ ಬಟಾಣಿ ಬೇಗ ಕುದಿಯುತ್ತದೆ. ಬಟಾಣಿಯನ್ನು ಕುದಿಸಲು ಸುಮಾರು 8-10 ನಿಮಿಷಗಳು ತೆಗೆದುಕೊಳ್ಳುತ್ತದೆ. ಬಟಾಣಿಯನ್ನು ಕುದಿಸಿದ ತಕ್ಷಣ, ಅವುಗಳನ್ನು ಸೋಸಿ ಇಟ್ಟುಕೊಳ್ಳಿ. 

ಬಟಾಣಿ ತಣ್ಣಗಾಗುವವರೆಗೂ, ನೀವು ಪರೋಟಕ್ಕಾಗಿ ಹಿಟ್ಟನ್ನು ತಯಾರಿಸಿಕೊಳ್ಳಬಹುದು. ಹಿಟ್ಟನ್ನು ತಯಾರಿಸುವಾಗ, ನೀವು ಅದಕ್ಕೆ  ಉಪ್ಪು ಮತ್ತು ಎಣ್ಣೆಯನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಹಿಟ್ಟು ಮೃದುವಾಗುತ್ತದೆ. ಇದರಿಂದ ಪರೋಟ ಒಳ್ಳೆಯದಾಗುತ್ತದೆ. ಹಿಟ್ಟನ್ನು 10 ರಿಂದ 15 ನಿಮಿಷಗಳ ವಿಶ್ರಾಂತಿಗೆ ಬಿಡಿ. ಹಿಟ್ಟನ್ನು ಮೃದುವಾದ ಬಟ್ಟೆಯಿಂದ ಮುಚ್ಚಿಡಿ. ಇದು ಹಿಟ್ಟನ್ನು ಒಣಗಿಸುವುದಿಲ್ಲ.

ನಂತರ ತಣ್ಣಗಾದ ಬಟಾಣಿಯನ್ನು ಮಿಕ್ಸಿ ಜಾರ್ ನಲ್ಲಿ (mixi jar) ರುಬ್ಬಿಕೊಳ್ಳಿ. ಮಿಕ್ಸಿಯಲ್ಲಿ ರುಬ್ಬುವುದರಿಂದ ಬಟಾಣಿಯ ನಯವಾದ ಪೇಸ್ಟ್ ದೊರೆಯುತ್ತದೆ. ಇದು ಪರೋಟಾಗಳನ್ನು ಚೆನ್ನಾಗಿ ತುಂಬಲು ಮತ್ತು ಸಿಡಿಯುವ ಅಪಾಯವನ್ನು ಕಡಿಮೆ ಮಾಡುತ್ತದೆ. ಎಲ್ಲ ಬಟಾಣಿ ಸರಿಯಾಗಿ ನುಣ್ಣಗಾಗುವಂತೆ ನೋಡಿಕೊಳ್ಳಿ. ಇಲ್ಲವಾದರೆ ಅದನ್ನು ತಿನ್ನಲು ಕಷ್ಟ. 

ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಮಾಡಲು ಬಿಡಿ. ಎಣ್ಣೆ ಬಿಸಿಯಾದ ತಕ್ಷಣ ಜೀರಿಗೆ ಹಾಕಿ. ನಂತರ ಶುಂಠಿಯನ್ನು ಸೇರಿಸಿ. ಶುಂಠಿ ಸೇರಿಸಿದ ನಂತರ ಬಟಾಣಿ ಹಾಕಿ, ಕೆಂಪು ಮೆಣಸಿನಕಾಯಿ, ಉಪ್ಪು, ಗರಂ ಮಸಾಲ (garam masala) ಮತ್ತು ಆಮ್ಚೂರ್ ಪುಡಿಯನ್ನು ಸೇರಿಸಿ  ರುಚಿ ನೋಡಿ. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ, ಮತ್ತು ಸುಮಾರು 2-3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಇರಿಸಿ.

ಬಟಾಣಿಯನ್ನು ಬೇಯಿಸುವಾಗ ಶಾಖವು ಕಡಿಮೆಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಬಟಾಣಿ ಸ್ಟಫಿಂಗ್ ಕೂಡ ಹೆಚ್ಚಿನ ಉರಿಯಲ್ಲಿ ಉರಿಯಬಹುದು. ಅದರ ನಂತರ ನಿಮ್ಮ ಬಟಾಣಿ  ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಗ್ಯಾಸ್ ನಿಂದ ಅದನ್ನು ತೆಗೆದು ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಸ್ಟಫ್ ರುಚಿ ಮತ್ತಷ್ಟು ಹೆಚ್ಚುತ್ತದೆ. 

दाल पराठा

ನಂತರ ತಣ್ಣಗಾಗಲು  ಬಟಾಣಿ ಸ್ಟಫಿಂಗ್ ಅನ್ನು ಪ್ಲೇಟ್ ನಲ್ಲಿ ಹಾಕಿ. ಏಕೆಂದರೆ ಹಾಟ್ ಸ್ಟಫಿಂಗ್ ಪರೋಟಾಗಳನ್ನು ತುಂಡಾಗುವಂತೆ ಮಾಡುತ್ತದೆ. .
ಸ್ಟಫಿಂಗ್ ತಣ್ಣಗಾಗುವವರೆಗೆ ಹಿಟ್ಟಿನ ಉಂಡೆಯನ್ನು ಮಾಡಿ. ಇದರಿಂದ ನಿಮ್ಮ ಸಮಯವೂ ಬಳಕೆಯಾಗುತ್ತದೆ ಮತ್ತು ಪರೋಟಾಗಳನ್ನು ಬೇಗ ಮಾಡಬಹುದು. ಫ್ರೈಯಿಂಗ್ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇರಿಸಿ. ಸ್ಟಫಿಂಗ್ ಅನ್ನು ತುಂಬುವ ಹೊತ್ತಿಗೆ ತವಾ ಬಿಸಿಯಾಗುತ್ತದೆ.

ನಂತರ ಹಿಟ್ಟನ್ನು ರೋಲ್ ಮಾಡಿ ಮತ್ತು ಬಟಾಣಿ ಸ್ಟಫಿಂಗ್ ನಿಂದ ತುಂಬಿಸಿ. ಪರೋಟಾವನ್ನು ಬೇಕ್ ಮಾಡಲು ಪ್ರಾರಂಭಿಸಿ ಮತ್ತು ಗರಿಗರಿಯಾಗಿಸಲು ಕಡಿಮೆ ಉರಿಯಲ್ಲಿ  ಬೇಕ್ ಮಾಡಿ. ಈಗ ಪರೋಟ ಸಿದ್ಧ . ನೀವು ಅದನ್ನು  ಕೊತ್ತಂಬರಿ ಚಟ್ನಿಯೊಂದಿಗೆ ಅಥವಾ ಮೊಸರಿನೊಂದಿಗೆ ಸರ್ವ್ ಮಾಡಬಹುದು. 

Latest Videos

click me!