Winter Special: ಎಳ್ಳು - ಡ್ರೈ ಫ್ರೂಟ್‌ ಟೇಸ್ಟಿ ಹಾಗೂ ಹೆಲ್ದಿ ಚಿಕ್ಕಿ ರೆಸಿಪಿ!

First Published | Dec 4, 2021, 7:29 PM IST

ಚಳಿಗಾಲಕ್ಕೆ ಚಿಕ್ಕಿ ಬೆಸ್ಟ್‌ ಸ್ನಾಕ್‌ ಆಗಿದೆ ಮತ್ತು ಇದು ಆರೋಗ್ಯಕ್ಕೂ ಉತ್ತಮ. ಚಿಕ್ಕಿಯನ್ನು ಭಾರತದಲ್ಲಿ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ ಆದರೆ  ಹೆಸರೇನೇ ಇರಲಿ, ಚಿಕ್ಕಿ ಭಾರತದಾದ್ಯಂತ ಪ್ರಸಿದ್ಧವಾಗಿದೆ ಮತ್ತು ಇದನ್ನು ವಿವಿಧ ರೀತಿಯಲ್ಲಿ ಮಾಡಬಹುದು ಬೆಲ್ಲ ಅಥವಾ ಕಡಲೆ ಬೀಜದ ಚಿಕ್ಕಿ ಕಾಮನ್‌.  ಈ ಚಳಿಗಾಲಕ್ಕಾಗಿನ ಇಲ್ಲಿವೆ ಬೇರೆಬೇರೆ ತರದ ಚಿಕ್ಕಿ ರೆಸಿಪಿಗಳು.

मूंगफली की चिक्की

ಕಡಲೆಕಾಯಿ ಚಿಕ್ಕಿ:
ಕಡಲೆಬೀಜ, ಬೆಲ್ಲ ಮತ್ತು ತುಪ್ಪದಿಂದ ಮಾಡಿದ ಈ ಕ್ಲಾಸಿಕ್ ಚಿಕ್ಕಿ ಚಳಿಗಾಲದ ಊಟದ ನಂತರ ತಿನ್ನಲು ತುಂಬಾ ರುಚಿ ಮತ್ತು ಆರೋಗ್ಯಕರವಾಗಿರುತ್ತದೆ. ಪೊಂಗಲ್ ಮತ್ತು ಮಕರ ಸಂಕ್ರಾಂತಿಯಂತಹ ಹಬ್ಬಗಳಲ್ಲಿ ಈ ಕಡಲೆಕಾಯಿ ಚಿಕ್ಕಿಯನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. 

तिल की चिक्की

ಎಳ್ಳಿನ ಚಿಕ್ಕಿ:
ಮತ್ತೊಂದು ರುಚಿಕರವಾದ ಚಿಕ್ಕಿ ರೆಸಿಪಿ ಇದಾಗಿದೆ.  ಇದು ಮಾಡಲು ಸಹ ತುಂಬಾ ಸುಲಭ. ಇದನ್ನು  ಬೆಲ್ಲವನ್ನು ಕರಗಿಸಿ ಪಾಕ ಮಾಡಿ  ಮತ್ತು ಅದಕ್ಕೆ ಹುರಿದ ಎಳ್ಳನ್ನು ಸೇರಿಸಿ ತಯಾರಿಸಲಾಗುತ್ತದೆ. ಈ ಚಿಕ್ಕಿ ತಿಂಗಳುಗಟ್ಟಲೆ ಕೆಡುವುದಿಲ್ಲ.

Latest Videos


ड्राई फ्रूट चिक्की

ಡ್ರೈ ಫ್ರೂಟ್‌ ಚಿಕ್ಕಿ:
ಡ್ರೈ ಫ್ರೂಟ್ಸ್‌  ತಿನ್ನುವುದು ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಪ್ರತಿನಿತ್ಯ ಬಾದಾಮಿಯನ್ನು ನೆನೆಸುವುದು ಅಥವಾ ಪಿಸ್ತಾ ಸಿಪ್ಪೆ ಸುಲಿಯುವುದು ಬಹಳ  ಕಷ್ಟದ ಕೆಲಸವೆಂದು ತೋರುತ್ತದೆ. ಹಾಗಾದರೆ ಈ ಚಿಕ್ಕಿ ರೆಸಿಪಿ ನಿಮಗಾಗಿ. ಡ್ರೈ ಫ್ರೂಟ್ ಚಿಕ್ಕಿಗಳನ್ನು ಬಾದಾಮಿ, ಗೋಡಂಬಿ, ವಾಲ್‌ನಟ್ಸ್ ಮತ್ತು ಬೆಲ್ಲದೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ. ಇದು ಪರಿಪೂರ್ಣ ಬೆಳಗಿನ ತಿಂಡಿ.

चना दाल चिक्की

ಕಡಲೆ ಬೇಳೆ  ಚಿಕ್ಕಿ:
ಕಡಲೆ ಬೇಳೆ  ತುಂಬಾ ಆರೋಗ್ಯಕರವಾದ ಬೇಳೆ. ಇದನ್ನು ಹೆಚ್ಚಾಗಿ ಖಾರದ ತಿಂಡಿಗಳು ಮತ್ತು ಅಡುಗೆಗಳಲ್ಲಿ ಬಳಸಲಾಗುತ್ತದೆ, ಆದರೆ  ಇದರಿಂದ ರುಚಿಕರವಾದ ಚಿಕ್ಕಿಗಳನ್ನು ಸಹ ಮಾಡಬಹುದು. ಇದನ್ನು ಕರಗಿದ ಬೆಲ್ಲದಲ್ಲಿ ಹುರಿದ ಕಡಲೆ ಬೇಳೆಯನ್ನು ಹಾಕಿ ತಯಾರಿಸಲಾಗುತ್ತದೆ.

मखाना चिक्की

ಮಖಾನ ಚಿಕ್ಕಿ:
ಮಖಾನಾ ಚಿಕ್ಕಿ ಮತ್ತೊಂದು ಆರೋಗ್ಯಕರ ಮತ್ತು ಟೇಸ್ಟಿ ಚಿಕ್ಕಿ ರೆಸಿಪಿ ಆಗಿದೆ.. ಇದನ್ನು ಮಖಾನಾ, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಖರ್ಜೂರ‌, ಜೇನುತುಪ್ಪ ಮತ್ತು ಪಿನಟ್‌ ಬಟರ್‌  ಬಳಸಿ ತಯಾರಿಸಲಾಗುತ್ತದೆ.
 

खसखस चिक्की

ಗಸಗಸೆ ಚಿಕ್ಕಿ:
ಚಳಿಗಾಲದಲ್ಲಿ ಗಸಗಸೆ ಬೀಜದ ಚಿಕ್ಕಿ ಸೇವನೆ ಆರೋಗ್ಯ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಮಾಡಲು, ಗಸಗಸೆಯನ್ನು ಲಘುವಾಗಿ ಹುರಿಯಿರಿ ಮತ್ತು ಅದನ್ನು ಬೆಲ್ಲದ ಪಾಕಕ್ಕೆ ಸೇರಿಸಿ. ನಂತರ  ತಟ್ಟೆಗೆ ಸುರಿದು ಸೆಟ್‌ ಆಗಲು ಬಿಡಿ  ಚೌಕಾಕಾರದಲ್ಲಿ ಕತ್ತರಿಸಿ.

गुलाब बादाम चिक्की

ಗುಲಾಬ್ ಬಾದಮ್ ಚಿಕ್ಕಿ:
ಬಾದಾಮಿಯ ಜೊತೆಗೆ ಗುಲಾಬಿ ಆರೊಮ್ಯಾಟಿಕ್ ಸುವಾಸನೆಯ  ಪೌಷ್ಟಿಕತೆಯ ಜೊತೆಗೆ  ಚಿಕ್ಕಿಗೆರುಚಿಯನ್ನು ನೀಡುತ್ತದೆ. ಸಂಜೆಯ ಚಹಾದೊಂದಿಗೆ ಈ ಚಿಕ್ಕಿ ಅತ್ಯುತ್ತಮ ತಿಂಡಿಯಾಗಿದೆ. ಈ ಡಿಫ್ರೆಂಟ್‌ ಚಿಕ್ಕಿ ರೆಸಿಪಿಗಳನ್ನು ಟ್ರೈ ಮಾಡಿ ಹಾಗೂ ಚಳಿಗಾಲವನ್ನು ಎಂಜಾಯ್‌ ಮಾಡಿ. 

click me!