Food of India: ರಾಜಸ್ಥಾನದ ರುಚಿ ನೋಡಲೇಬೇಕಾದ ಸಾಂಪ್ರದಾಯಿಕ ನಾನ್‌ವೆಜ್‌ ಅಡುಗೆ!

Published : Dec 03, 2021, 06:31 PM IST

ಪ್ರತಿಯೊಂದು ರಾಜ್ಯದಲ್ಲೂ ವಿವಿಧ ರೀತಿಯ ಆಹಾರ ಪದಾರ್ಥಗಳು ದೊರೆಯುವ ದೇಶ ಭಾರತ.  ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ತುಂಬಿರುವ ಸುಂದರ ರಾಜ್ಯ ರಾಜಸ್ಥಾನದ (Rajasthan) ಅಡುಗೆಗಳು ಅಷ್ಟೇ ರುಚಿಕರ.  ಕೆಲವು ಭವ್ಯವಾದ ಅರಮನೆಗಳು, ಸುಂದರವಾದ ನೃತ್ಯ ಪ್ರಕಾರಗಳು, ಕಲಾಕೃತಿಗಳ ಜೊತೆ ರಾಜಸ್ಥಾನಿ ಪಾಕ ಪದ್ಧತಿಯು ಈ ಪ್ರದೇಶದ ವಿಶೇಷತೆಯಾಗಿದೆ. ರಾಜಸ್ಥಾನದ ದಾಲ್-ಬಾಟಿ ಮತ್ತು ಚುರ್ಮಾ ಸಖತ್‌ ಫೇಮಸ್‌ ಡಿಶ್‌. ಹಾಗೆಯೇ ರಾಜಮನೆತನದ ಔತಣಗಳಲ್ಲಿ ಹೆಚ್ಚಾಗಿ ಬಡಿಸುತ್ತಿದ್ದ ಸಾಂಪ್ರದಾಯಿಕ ರಾಜಸ್ಥಾನಿ ಮಾಂಸಾಹಾರಿ ಖಾದ್ಯಗಳ ಪರಿಚಯ ಇಲ್ಲಿದೆ.

PREV
16
Food of India: ರಾಜಸ್ಥಾನದ  ರುಚಿ ನೋಡಲೇಬೇಕಾದ ಸಾಂಪ್ರದಾಯಿಕ ನಾನ್‌ವೆಜ್‌ ಅಡುಗೆ!
लाल मांस

ಕೆಂಪು ಮಾಂಸ:
ಕೆಂಪು ಮಾಂಸವು ರಾಜಸ್ಥಾನದ ಅತ್ಯಂತ ಪ್ರಸಿದ್ಧ ಮಾಂಸಾಹಾರಿ ಭಕ್ಷ್ಯ. ಇದನ್ನು ಕುರಿಮರಿ ಮಾಂಸದಿಂದ ತಯಾರಿಸಲಾಗುತ್ತದೆ. ಮಟನ್‌ ಅನ್ನು ಕೆಂಪು ಮೆಣಸಿನಕಾಯಿಗಳೊಂದಿಗೆ ವಿವಿಧ ಮಸಾಲೆಗಳಲ್ಲಿ ಬೇಯಿಸಲಾಗುತ್ತದೆ. ಇದನ್ನು ಎಣ್ಣೆಯ ಬದಲು ಸಾಕಷ್ಟು ದೇಸಿ ತುಪ್ಪದಿಂದ ತಯಾರಿಸಲಾಗುತ್ತದೆ, ಇದು ಹೆಚ್ಚು ರಾಯಲ್ ರುಚಿಯನ್ನು ನೀಡುತ್ತದೆ. ಈ ರುಚಿಕರವಾದ ಕೆಂಪು ಬಣ್ಣದ ಖಾದ್ಯವನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಲಾಗುತ್ತದೆ.

26
सफेद मांस

ಬಿಳಿ ಮಾಂಸ:
ಸ್ವೀಟ್‌ ಮತ್ತು ರಿಚ್‌ ಗ್ರೇವಿ ಹೊಂದಿರುವ ಅಡುಗೆಗಳನ್ನು ಇಷ್ಟಪಡುವವರಿಗೆ ಈ ಬಿಳಿ ಮಾಂಸವು ಬೆಸ್ಟ್‌ ಆಯ್ಕೆ. ಈ ರಾಜಸ್ಥಾನಿ ಮಾಂಸವನ್ನು ತಯಾರಿಸಲು, ಮಾಂಸವನ್ನು ಕುದಿಸಿ ಮತ್ತು ಮಸಾಲೆಗಳು, ಬಾದಾಮಿ-ಗೋಡಂಬಿ ಪೇಸ್ಟ್, ಕೆನೆ, ಹಾಲು ಮತ್ತು ಮೊಸರು ಸೇರಿಸಿ ಬೇಯಿಸಲಾಗುತ್ತದೆ, ಇದು ರಾಯಲ್ ರುಚಿಯನ್ನು ನೀಡುತ್ತದೆ.

36

ಭುನಾ ಕುಕ್ರಾ‌: 
ಭುನಾ ಕುಕ್ರಾ ಅಥವಾ ರೋಸ್ಟ್ ಚಿಕನ್ ಮತ್ತೊಂದು ರಾಜಸ್ಥಾನಿ ಮಸಾಲೆ ಅಡುಗೆಯಾಗಿದೆ. ಚಿಕನ್ ತುಂಡುಗಳನ್ನು ಸಾಕಷ್ಟು ಸ್ಥಳೀಯ ಮಸಾಲೆಗಳು ಮತ್ತು ಮೊಸರುಗಳೊಂದಿಗೆ ಗಂಟೆಗಳ ಕಾಲ ಮ್ಯಾರಿನೇಟ್ ಮಾಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಈ ಹುರಿದ ಕುಕ್ಡಾವು ವಿಶೇಷ ಸಂದರ್ಭಗಳಲ್ಲಿ ಅಥವಾ ಹೌಸ್ ಪಾರ್ಟಿಗಳಿಗೆ ಬೆಸ್ಟ್ ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

46

ಬಂಜಾರ ಮಾಂಸ:
ಈ ಮಟನ್ ಖಾದ್ಯವು ರಾಜಸ್ಥಾನಿ ಮನೆಗಳ ಪ್ರಮುಖ ಭಕ್ಷ್ಯ. ಬಂಜಾರ ಗೋಷ್ಟ್ ಸರಳವಾದ ಆದರೆ ರುಚಿಕರವಾದ ಮಟನ್ ಕರಿ. ಇದನ್ನು ಈರುಳ್ಳಿ, ಅರೆದ ಮಸಾಲೆಗಳು ಮತ್ತು ಹರ್ಬ್‌ ಜೊತೆ  ಗಂಟೆಗಳ ಕಾಲ ಬೇಯಿಸಲಾಗುತ್ತದೆ. ಈ ಮಟನ್ ಕರಿ ಅನ್ನದೊಂದಿಗೆ ತುಂಬಾ ರುಚಿಯಾಗಿರುತ್ತದೆ.

56

ಕಾಡು ಮಾಂಸ:
ಇದು ಸುಲಭವಾದ ಮಟನ್ ಕರಿ ರೆಸಿಪಿಗಳಲ್ಲಿ ಒಂದು. ಮ್ಯಾರಿನೇಶನ್ ಇಲ್ಲದ ರಾಜಸ್ಥಾನಿ ಡಿಶ್‌ ಕಾಡು ಮಾಂಸ. ಮಟನ್ ಅನ್ನು ಕೆಂಪು ಮೆಣಸಿನಕಾಯಿಗಳು, ಬೆಳ್ಳುಳ್ಳಿ ಲವಂಗ ಮತ್ತು ಉಪ್ಪಿನಂತಹ ಸರಳ ಮಸಾಲೆಗಳೊಂದಿಗೆ ಬೇಯಿಸಿ ಮಸಾಲೆಯುಕ್ತ ಗ್ರೇವಿಯನ್ನು ತಯಾರಿಸಲಾಗುತ್ತದೆ.

66

ಫಿಶ್‌ ಜಾಸ್ಮಂಡಿ:
ಪಿಶ್‌ ಜಾಸ್ಮಂಡಿ ಮೀನು ತಿನ್ನುವ ಜನರಿಗೆ ಅತ್ಯುತ್ತಮ ಭಕ್ಷ್ಯ. ಇದನ್ನು ಕೆನೆ ಮತ್ತು ಹಸಿರು ಚಟ್ನಿಯಿಂದ ಮಾಡಿದ ತುಂಬಾ ನಯವಾದ ಗ್ರೇವಿಯಿಂದ ತಯಾರಿಸಲಾಗುತ್ತದೆ, ಇದು ಮೀನಿಗೆ ವಿಶಿಷ್ಟವಾದ ಪರಿಮಳ ನೀಡುತ್ತದೆ ಮತ್ತು ಬಾಯಿಗೆ ಹಾಕಿದ ತಕ್ಷಣ ಮೀನಿನ ತುಂಡುಗಳು ಕರಗುತ್ತವೆ. ಮೀನನ್ನು ಗ್ರೇವಿಯಲ್ಲಿ ಬೇಯಿಸುವ ಮೊದಲು, ಅದನ್ನು ಮೊಟ್ಟೆ, ಹಿಟ್ಟು ಮತ್ತು ಮಸಾಲೆಗಳ ಮಿಶ್ರಣದಲ್ಲಿ ಅದ್ದಿ ಚಿನ್ನದ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಲಾಗುತ್ತದೆ. 

Read more Photos on
click me!

Recommended Stories