ಉಪ್ಪಿನಕಾಯಿಯಲ್ಲಿ ಎಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಹಾಗೂ ಇದರಲ್ಲಿ ಉಪಯೋಗಿಸುವಂತಹ ಮಸಾಲೆ ಹೆಚ್ಚಾಗಿ ಕಾದಿರುವುದಿಲ್ಲ. ಇದರಿಂದ ಕೊಲೆಸ್ಟ್ರಾಲ್ ಮತ್ತು ಇತರ ಸಮಸ್ಯೆ ಉಂಟಾಗುತ್ತದೆ.
ದಕ್ಷಿಣ ಭಾರತದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಉಪ್ಪಿನಕಾಯಿ ಹೆಚ್ಚಾಗಿ ಸೇವನೆಯಿಂದ ಗ್ಯಾಸ್ಟ್ರಿಕ್, ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ.
ಉಪ್ಪಿನಕಾಯಿಗಳು ಓಸೋಫೇಜಿಯಲ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ದ್ವಿಗುಣಗೊಳಿಸುತ್ತವೆ. ಅಧ್ಯಯನವು ಯಾವುದೇ ನಿರ್ಧಾರಿತಫಲಿತಾಂಶಗಳನ್ನು ನೀಡಲಿಲ್ಲವಾದರೂ ಅಪಾಯದ ಅಂಶಗಳನ್ನು ನಿರ್ಲಕ್ಷಿಸುವಂತಿಲ್ಲ.
ಉಪ್ಪಿನಕಾಯಿ ಬಳಕೆ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಿಸುತ್ತದೆ. ಇದರಿಂದ ಆ್ಯಸಿಡಿಟಿ, ಗ್ಯಾಸ್, ಹುಳಿ ತೇಗು ಮೊದಲಾದ ಸಮಸ್ಯೆ ಉಂಟಾಗುತ್ತದೆ.
ಉಪ್ಪಿನಕಾಯಿಯಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೆಚ್ಚಿನ ಸೋಡಿಯಂ ದೇಹಕ್ಕೆ ಸೇರುತ್ತದೆ, ಅಲ್ಲದೆ ಹೈ ಬ್ಲಡ್ ಪ್ರೆಶರ್ ಉಂಟಾಗುತ್ತದೆ. ಇದರಿಂದ ಇತರ ಅರೋಗ್ಯ ಸಮಸ್ಯೆ ಕೂಡ ಉಂಟಾಗುತ್ತದೆ.
ಉಪ್ಪಿನಕಾಯಿಯಲ್ಲಿ ಮಸಾಲೆ ಅಲ್ಲದೆ ವಿನೆಗರ್ ಉಪಯೋಗಿಸಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಅಲ್ಸರ್ ಉಂಟಾಗುತ್ತದೆ. ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಹೆಚ್ಚು ಹೆಚ್ಚು ಉಪ್ಪಿನಕಾಯಿ ತಿನ್ನುತ್ತಿದ್ದರೆ ಕಾಡುತ್ತದೆ ಅಸಿಡಿಟಿ ಸಮಸ್ಯೆ . ಹೊಟ್ಟೆ ಉಬ್ಬರ ಉಂಟಾಗುತ್ತದೆ. ಎಚ್ಚರ ಇರಲಿ.
ಉಪ್ಪಿನಕಾಯಿ ತಯಾರಿಸಲು ಮತ್ತು ಅದನ್ನು ಸುರಕ್ಷಿತವಾಗಿಡಲು ಪ್ರಿಸರ್ವೇಟಿವ್ ಬಳಸುತ್ತಾರೆ. ಇವು ಶರೀರಕ್ಕೆ ಹಾನಿಕಾರಕ. ಇದರಿಂದಲೂ ಅಲ್ಸರ್ ಉಂಟಾಗಬಹುದು.