ಬಟಾಣಿ ತೆಗೆದು ಸಿಪ್ಪೆ ಎಸೆಯೋ ಮುನ್ನ ಇರಲಿ ಗಮನ

First Published | Jan 15, 2023, 2:35 PM IST

ಚಳಿಗಾಲದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಬಟಾಣಿ ಸಿಗುತ್ತವೆ. ಹಾಗಾಗಿ, ಹೆಚ್ಚಿನ ಜನರು ಬಟಾಣಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಜನರು ಬಟಾಣಿ ಸೋಸಿ ಅದರ ಸಿಪ್ಪೆಗಳನ್ನು ಎಸೆಯುತ್ತಾರೆ. ಇಂದು ನಾವು ಅದರ ಪ್ರಯೋಜನಗಳು ಮತ್ತು ಅದನ್ನು ಬಳಸುವ ವಿಧಾನಗಳ ಬಗ್ಗೆ ತಿಳಿಯೋಣ.

ನೀವು ಎಸೆಯುವ ಸಿಪ್ಪೆಯಿಂದ(Peas peel) ಬಗೆ ಬಗೆಯ ಆಹಾರ ತಯಾರಿಸಬಹುದು. ಆದ್ದರಿಂದ ಇಂದಿನಿಂದ ಅವುಗಳನ್ನು ಎಸೆಯೋದನ್ನು ನಿಲ್ಲಿಸಿ, ಯಾಕಂದ್ರೆ ಅದರ ಪ್ರಯೋಜನಗಳು ಯಾವುವು ಮತ್ತು ಅದನ್ನು ಹೇಗೆ ಬಳಸಲಾಗುತ್ತೆ  ಎಂದು ಇಲ್ಲಿ ತಿಳಿಯೋಣ. ಇದು ನಿಮಗೂ ಕೂಡ ಖಂಡಿತವಾಗಿಯೂ ಇಷ್ಟವಾಗಬಹುದು.

ಬಟಾಣಿ ಸಿಪ್ಪೆಯ ಪ್ರಯೋಜನಗಳು

ಬಟಾಣಿ ಸಿಪ್ಪೆಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಹೇಳೋದಾದ್ರೆ, ಫೈಬರ್, ಪೊಟ್ಯಾಸಿಯಮ್, ವಿಟಮಿನ್ಸ್(Vitamins), ತಾಮ್ರದಂತಹ ಅಂಶಗಳು ಇದರಲ್ಲಿ ಕಂಡುಬರುತ್ತವೆ, ಇದು ಜೀರ್ಣಕ್ರಿಯೆ ಮತ್ತು ಕಣ್ಣಿನ ದೃಷ್ಟಿಯನ್ನು ವೇಗಗೊಳಿಸುತ್ತೆ. 
 

Tap to resize

ಬಟಾಣಿ ಸಿಪ್ಪೆ ಸೇವಿಸೋದ್ರಿಂದ ಹೃದ್ರೋಗಗಳನ್ನು ಸಹ ದೂರ ಮಾಡುತ್ತೆ. ಇದಲ್ಲದೆ, ಬಟಾಣಿ ಸಿಪ್ಪೆಗಳನ್ನು ಬಳಸೋದರಿಂದ ಮೆದುಳು ತೀಕ್ಷ್ಣಗೊಳ್ಳುತ್ತೆ ಮತ್ತು ಜ್ಞಾಪಕ ಶಕ್ತಿಯನ್ನು(Memory power) ಹೆಚ್ಚಿಸುತ್ತೆ. ಇಷ್ಟೇಲ್ಲಾ ಗೊತ್ತಾದ ಮೇಲೆ ಬಟಾಣಿ ಕಾಳು ಬಿಸಾಕೋದಿಲ್ಲ ಅಲ್ವಾ? ಹಾಗಿದ್ರೆ ಅದ್ರಿಂದ ಏನೆಲ್ಲಾ ಮಾಡಬಹುದು ನೋಡೋಣ

ಬಟಾಣಿ ಸಿಪ್ಪೆ ಸಾರು

ನೀವು ಬಟಾಣಿ ಆಲೂಗಡ್ಡೆ(Potato) ಸಾರು ಮಾಡಿದಂತೆಯೇ, ಬಟಾಣಿ ಸಿಪ್ಪೆಯನ್ನು ಬಳಸಿಕೊಂಡು ರುಚಿಕರವಾದ ಸಾರು ತಯಾರಿಸಬಹುದು. ಇದಕ್ಕಾಗಿ, 20 ರಿಂದ 25 ಬಟಾಣಿ ಸಿಪ್ಪೆಗಳನ್ನು ದೊಡ್ಡದಾಗಿ ಕತ್ತರಿಸಿ. ಎರಡು ಮಧ್ಯಮ ಗಾತ್ರದ ಆಲೂಗಡ್ಡೆಗಳನ್ನು ಸಹ ಕತ್ತರಿಸಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಮತ್ತು ಈರುಳ್ಳಿ ಹಾಕಿ ಸಾಮಾನ್ಯ ಬಟಾಣಿ ಆಲೂಗಡ್ಡೆಯಂತೆ ಸಾರು  ತಯಾರಿಸಿ. ಅಂತಿಮವಾಗಿ, ಅದಕ್ಕೆ ನಿಂಬೆ ರಸ (Lemon) ಅಥವಾ ಆಮ್ಚೂರ್ ಪುಡಿಯನ್ನು ಸೇರಿಸಿ ಮತ್ತು ಬಿಸಿಯಾಗಿ ಬಡಿಸಿ. ಇದು ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತೆ. ಟ್ರೈ ಮಾಡಿ ನೋಡಿ.

ಬಟಾಣಿ ಸಿಪ್ಪೆ ಚಟ್ನಿ (Chatni)

ಸಾಮಾನ್ಯವಾಗಿ ಮನೆಯಲ್ಲಿ ಎಲ್ಲಾ ತಿಂಡಿಗಳಿಗೂ ಚಟ್ನಿ ಮಾಡ್ತೀವಿ ಅಲ್ವಾ? ಪ್ರತಿಯೊಬ್ಬರೂ ಪರೋಟ ಅಥವಾ ಪಕೋಡಾಗಳೊಂದಿಗೆ ಚಟ್ನಿ ತಿನ್ನಲು ಇಷ್ಟಪಡುತ್ತಾರೆ. ಹಾಗಾಗಿ, ಈ ಬಾರಿ ಅದೇ ಕೊತ್ತಂಬರಿ ಚಟ್ನಿ, ಪುದೀನಾ ಚಟ್ನಿ ಸೇವಿಸೋ ಬದಲು, ಬಟಾಣಿ ಸಿಪ್ಪೆ ಬಳಸಿ ಚಟ್ನಿ ಮಾಡಲು ಪ್ರಯತ್ನಿಸಿ. 

ಬಟಾಣಿ ಸಿಪ್ಪೆಯ ಚಟ್ನಿ ತಯಾರಿಸಲು, 1 ಕಪ್ ಕೊತ್ತಂಬರಿ ಸೊಪ್ಪು, 1 ಕಪ್ ಬಟಾಣಿ ಸಿಪ್ಪೆ, ಒಂದು ಸಣ್ಣ ಈರುಳ್ಳಿ, 1/2 ಇಂಚು ಶುಂಠಿ, 2-3 ಬೆಳ್ಳುಳ್ಳಿ ಎಸಳುಗಳು ಮತ್ತು 2 ಹಸಿ ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಅಂತಿಮವಾಗಿ ನಿಂಬೆ ಮತ್ತು ಚಾಟ್ ಮಸಾಲಾ(Chat masala) ಸೇರಿಸಿ ಪರೋಟಾ, ಪುರಿ ಅಥವಾ ಪಕೋಡಾದೊಂದಿಗೆ ಬಡಿಸಿ.

Latest Videos

click me!