ಸಂಕ್ರಾತಿಯಲ್ಲಿ ಪೊಂಗಲ್ ಮಾಡೋದ್ರ ಹಿಂದಿದೆ ವೈಜ್ಞಾನಿಕ ಕಾರಣ, ಆರೋಗ್ಯಕ್ಕಿದು ಒಳ್ಳೇದು!

First Published Jan 3, 2023, 5:38 PM IST

ಕಿಚಡಿ ಅಥವಾ ಪೊಂಗಲ್ ತಿನ್ನಲು ತುಂಬಾ ರುಚಿಕರ ಮತ್ತು ಹೊಟ್ಟೆಗೆ ಹಗುರವೆಂದು ಪರಿಗಣಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು, ಇದನ್ನು ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ತಯಾರಿಸಲಾಗುತ್ತದೆ. ಇದರ ಪ್ರಯೋಜನಗಳು ದೇಹದಲ್ಲಿ ಬೆಳೆಯುವ ಅನೇಕ ರೋಗಗಳನ್ನು ತೆಗೆದುಹಾಕಬಹುದು ಅನ್ನೋದು ನಿಮಗೆ ಗೊತ್ತಾ?.

ಕರೋನಾವೈರಸ್ ಸಾಂಕ್ರಾಮಿಕ ರೋಗದ ನಡುವೆ ಇದು ಹಬ್ಬದ ಋತುವಾಗಿದೆ. ವಿಶೇಷ ಭಕ್ಷ್ಯಗಳಿಲ್ಲದೆ ಯಾವುದೇ ಹಬ್ಬವೂ ಪೂರ್ಣಗೊಳ್ಳುವುದಿಲ್ಲ. ಪ್ರತಿ ಹಬ್ಬಕ್ಕೂ ಒಂದು ವಿಶೇಷ ಪಾಕವಿಧಾನವಿದೆ. ಮಕರ ಸಂಕ್ರಾಂತಿ ಹಬ್ಬವನ್ನು ಸಹ ಜನವರಿ 14 ರಂದು ಆಚರಿಸಲಾಗುತ್ತಿದೆ. ಈ ಹಬ್ಬದಂದು ಪೊಂಗಲ್ ತಿನ್ನುವ ಸಂಪ್ರದಾಯವಿದೆ. ಜನರು ಈ ದಿನದಂದು ತಮ್ಮ ಮನೆಗಳಲ್ಲಿ ರುಚಿಕರವಾದ ಪೊಂಗಲ್(Pongal) ತಯಾರಿಸುತ್ತಾರೆ ಮತ್ತು ಕುಟುಂಬದ ಜೊತೆ ಸೇರಿ ತಿನ್ನುತ್ತಾ ಆನಂದಿಸುತ್ತಾರೆ.

ಮಕರ ಸಂಕ್ರಾಂತಿಯಂದು ಪೊಂಗಲ್ ಏಕೆ ತಯಾರಿಸಲಾಗುತ್ತೆ ಎಂದು ನಿಮಗೂ ಅನಿಸಿರಬಹುದು ಅಲ್ವಾ?  ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ಪೊಂಗಲ್ ಹಬ್ಬ ಎಂದೂ ಕರೆಯಲಾಗುತ್ತದೆ. ಅಕ್ಕಿಯನ್ನು ಚಂದ್ರನ ಸಂಕೇತವೆಂದು ಪರಿಗಣಿಸಲಾಗುತ್ತದೆ, ಬೇಳೆಯನ್ನು ಶನಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ತರಕಾರಿಗಳನ್ನು ಬುಧನ ಸಂಕೇತವೆಂದು ಹೇಳಲಾಗುತ್ತದೆ. ಈ ಸೂಪರ್ ಆಹಾರ (super food) ಗ್ರಹ ಸ್ಥಾನವನ್ನು ಬಲವಾಗಿಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಕಿಚಡಿ ಅಥವಾ ಪೊಂಗಲ್ ಭಾರತದ ಪ್ರತಿಯೊಂದು ಭಾಗದಲ್ಲೂ ತಿನ್ನುವ ಒಂದು ಆಹಾರ. ಇದನ್ನು ತಯಾರಿಸುವುದು ಸುಲಭ. ನಾಲಿಗೆಗೂ ರುಚಿ. ಆರೋಗ್ಯಕರ. ಭಾರತದ ವಿವಿಧ ಭಾಗಗಳಲ್ಲಿ ಇದನ್ನು ವಿಭಿನ್ನವಾಗಿ ತಯಾರಿಸಲಾಗುತ್ತೆ. ಕಿಚಡಿಯನ್ನು ಸಾಮಾನ್ಯವಾಗಿ ದಾಲ್ ಮತ್ತು ಅಕ್ಕಿಯಿಂದ ತಯಾರಿಸಲಾಗುತ್ತದೆ ಆದರೆ ಅದಕ್ಕೆ ಪರಿಮಳ ಮತ್ತು ಪೋಷಣೆಯನ್ನು ಸೇರಿಸಲು ಕೆಲವು ತರಕಾರಿಗಳು ಮತ್ತು ತುಪ್ಪ ಬಳಸಬಹುದು. ಕಿಚಡಿ, ಪೊಂಗಲ್ ಅಥವಾ ಕರ್ನಾಟಕದ ಫೇಮಸ್ ಬಿಸಿಬೇಳೆ ಬಾತ್.ಇದು ಎಲ್ಲಾ ಜನರು ಇಷ್ಟಪಡುವಂತಹ ತಿನಿಸು. ಅಷ್ಟೇ ಅಲ್ಲದೇ ಇದನ್ನು ಜೀರ್ಣಿಸಿಕೊಳ್ಳಲು ಸುಲಭವಾಗಿದೆ, ಇದರಿಂದಾಗಿ ಇದು ಮಕ್ಕಳು ಮತ್ತು ವಯಸ್ಸಾದವರಿಗೆ ಉತ್ತಮ ಭಕ್ಷ್ಯವಾಗಿದೆ. 

ಪೊಂಗಲ್ ಪೋಷಕಾಂಶಗಳ ಭಂಡಾರ

ಪೊಂಗಲ್ ಹೆಚ್ಚಿನ ಪೌಷ್ಟಿಕಾಂಶದ (nutrition) ಆಹಾರ. ವಿವಿಧ ತರಕಾರಿಗಳು ಮತ್ತು ಬೇಳೆ-ಅಕ್ಕಿಯ ಮಿಶ್ರಣದಿಂದ ತಯಾರಿಸಿದ ಪೊಂಗಲ್ ನಿಮ್ಮ ದೇಹಕ್ಕೆ ಅಗತ್ಯ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಫೈಬರ್, ಆರೋಗ್ಯಕರ ಕೊಬ್ಬು ಸೇರಿ ಸಮತೋಲಿತ ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಹೊಂದಿರುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಪೊಂಗಲ್ ಜೀರ್ಣಕ್ರಿಯೆಗೆ (better digestion) ಸಹಾಯ ಮಾಡುವ ಮತ್ತು ಸುಲಭವಾಗಿ ಜೀರ್ಣವಾಗುವ ಒಂದು ಭಕ್ಷ್ಯ. ಅಕ್ಕಿ ಮತ್ತು ಬೇಳೆಕಾಳುಗಳು ಮಾತ್ರ ಕಿಚಡಿಯಲ್ಲಿ ಮುಖ್ಯ ಪದಾರ್ಥಗಳಾಗಿದ್ದು, ಈ ಕಾರಣದಿಂದಾಗಿ ಅದು ಸುಲಭವಾಗಿ ಜೀರ್ಣವಾಗುತ್ತದೆ. ಇತರ ಆಹಾರಗಳ ಸೇವನೆ ಸಮಯದಲ್ಲಿ ನಿಮ್ಮ ಕರುಳಿನ ಗೋಡೆಗಳಲ್ಲಿ ಉಂಟಾಗುವ ಕಿರಿಕಿರಿಯು, ಪೊಂಗಲ್ ತಿನ್ನುವಾಗ ಸಂಭವಿಸುವುದಿಲ್ಲ. 

ಆಯುರ್ವೇದ ಪ್ರಯೋಜನಗಳು ಹಲವು (ayurveda benefits)

ಪೊಂಗಲ್, ಖಿಚಡಿ ಅಥವಾ ಬಿಸಿಬೇಳೆ ಬಾತ್ ಅನ್ನು ಪ್ರಾಚೀನ ಕಾಲದಿಂದಲೂ ಸೇವಿಸಲಾಗುತ್ತಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ ಮತ್ತು ನಿಮ್ಮ ದೇಹದ ಶಕ್ತಿಯನ್ನು ಸಮತೋಲನಗೊಳಿಸುತ್ತದೆ . ಖಿಚಡಿಯನ್ನು ತ್ರಿದೋಷ ನಿವಾರಕ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಮೂರು ಧಾತುಗಳು ಅಥವಾ ಮೂರು ದೋಷಗಳನ್ನು (ವಾತ, ಪಿತ್ತ, ಕಫ) ಸಮತೋಲನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ

ಪೊಂಗಲ್ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಕೆಲವು ಆಹಾರ ಪದಾರ್ಥಗಳು ದೇಹದಲ್ಲಿ ವಿಷವನ್ನು ಸಂಗ್ರಹಿಸುತ್ತವೆ. ದೇಹವನ್ನು ನಿರ್ವಿಷಗೊಳಿಸಲು (detox body) ಜನರು ವಿವಿಧ ರೀತಿಯ ಆಹಾರ ಸೇವಿಸುತ್ತಾರೆ. ಅದರ ಬದಲು ನೀವು ಪೊಂಗಲ್ ಸೇವಿಸೋದು ಉತ್ತಮ. ಪೊಂಗಲ್ ನಿಮ್ಮ ದೇಹವನ್ನು ಬಹಳ ಸುಲಭವಾಗಿ ನಿರ್ವಿಷಗೊಳಿಸುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ.

ತೂಕ ನಿಯಂತ್ರಣದಲ್ಲಿ ಸಹಾಯಕ (weight control)

ಪೊಂಗಲ್ ನಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬು ಇರುವುದರಿಂದ, ತೂಕ ಇಳಿಸುವ ಜನರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದು ದೇಹದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಹೆಚ್ಚಿನ ಪ್ರಮಾಣದ ನಾರಿನಂಶದಿಂದಾಗಿ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ನೀವು ತೂಕ ಕಳೆದುಕೊಳ್ಳುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಕಿಚಡಿ/ಪೊಂಗಲ್ / ಬಿಸಿಬೇಳೆಬಾತ್ ಸೇರಿಸಿ.

ಮಧುಮೇಹ ತಡೆಗಟ್ಟಬಹುದು

ಸಾಬುದಾನಾ ಕಿಚಡಿ ಮಧುಮೇಹವನ್ನು ತಡೆಗಟ್ಟಲು (prevent diabetes) ಸಹಾಯ ಮಾಡುತ್ತದೆ. ಸಾಬುದಾನ ಕಿಚಡಿ ನೆನೆಸಿದ ಸಾಬುದಾನದಿಂದ ಮಾಡಿದ ಭಕ್ಷ್ಯವಾಗಿದೆ. ದೇಹದಲ್ಲಿ ಇನ್ಸುಲಿನ್ ಅನ್ನು ಕಾಪಾಡಿಕೊಳ್ಳಲು ಸಾಬುದಾನ ಸಹಾಯ ಮಾಡುತ್ತದೆ. ಆ ಮೂಲಕ ಇದು ಮಧುಮೇಹವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
 

click me!