ಕಲೆಸಿದ ಚಪಾತಿ ಹಿಟ್ಟನ್ನು ಫ್ರಿಜ್‌ನಲ್ಲಿಟ್ಟು ಬಳಸುವುದು ಕಾಮನ್.
ಇಂದಿನ ಬ್ಯುಸಿ ಲೈಫ್ ಸ್ಟೈಲ್‌ನಲ್ಲಿ, ಸಮಯ ಉಳಿಸಲು ಪಾತಿಗಾಗಿಹಿಟ್ಟನ್ನು ಮೊದಲೇ ಕಲೆಸಿ ಫ್ರಿಜ್‌ನಲ್ಲಿಡುವುದು ಸಾಮಾನ್ಯ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ.
ಈ ವಿಧಾನವು ಸುಲಭವೆಂದು ತೋರುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ .
ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಹಿಟ್ಟು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಸಮಯ ಉಳಿಸುವ ಐಡಿಯಾದಲ್ಲಿ ಆರೋಗ್ಯದ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ.
ಹಿಟ್ಟಿಗೆ ನೀರನ್ನು ಸೇರಿಸಿದಾಗ, ಅದರಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಚಪಾತಿಯನ್ನು ತಕ್ಷಣ ತಿಂದರೆ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ.
ಆದರೆ,ಆ ಹಿಟ್ಟನ್ನು ಫ್ರಿಜ್‌ನಲ್ಲಿ ಇಟ್ಟ ತಕ್ಷಣ, ಫ್ರಿಜ್‌ನಿಂದ ಬರುವ ಹಾನಿಕಾರಕ ಅನಿಲಗಳು ಹಿಟ್ಟನ್ನು ಪ್ರವೇಶಿಸುತ್ತವೆ. ಇದು ಅನೇಕ ರೋಗಗಳಿಗೆ ಕಾರಣವಾಗಬಹುದು.
ಕಲೆಸಿದ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ಫಾಸ್ಟ್ ಆಗಿ ಬೆಳೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ಸ್ಟೋರ್ ಮಾಡುವುದರಿಂದ ಬ್ಯಾಕ್ಟೀರಿಯಾ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತದೆ.ಅವುಗಳಿಂದ ತಯಾರಿಸಿದ ರೋಟಿ ಯಾ ಚಪಾತಿ ತಿಂದಾಗ ಆರೋಗ್ಯಕ್ಕೆ ಹಾನಿಯಾಗುತ್ತದೆ.
ಗೋಧಿ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ, ಮಲಬದ್ಧತೆ ಇರುವವರು, ಅಂತಹ ಹಿಟ್ಟಿನಿಂದ ತಯಾರಿಸಿದ ಚಪಾತಿ ತಿನ್ನಬಾರದು. ಇದು ಸಮಸ್ಯೆಯನ್ನು ಇನ್ನೂ ಹೆಚ್ಚಿಸುತ್ತದೆ.
'ಕಲೆಸಿಟ್ಟ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಅದನ್ನು ಏರ್ ಟೈಟ್ ಡಬ್ಬದಲ್ಲಿ ಇರಿಸಿದ್ದರೂ ಸಹ? ನಿಮಗೆ ಹೊಟ್ಟೆಯ ಸಮಸ್ಯೆ ಇದ್ದರೆ, ಇದನ್ನು ಮಾಡಬೇಡಿ' ಹೆಲ್ತ್ ನ್ಯೂಟ್ರಿಷನಿಸ್ಟ್ ಪ್ರೀತಿ ತ್ಯಾಗಿ ಹೇಳುತ್ತಾರೆ.
ಚಪಾತಿ ತಯಾರಿಸುವ ಮೊದಲು, ಹಿಟ್ಟನ್ನು ಕಲೆಸಿ, ಫ್ರೆಶ್ ಆಗಿ, ಬಿಸಿಯಾಗಿ ತಿನ್ನಲು ಪ್ರಯತ್ನಿಸಿ. ಇದು ಅತ್ಯುತ್ತಮ ಮಾರ್ಗ.