ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ : ಒಂದು ಬೌಲ್ನಲ್ಲಿ 10 ಬದಾಮ್, 8 ಗೋಡಂಬಿ , 12 ಪಿಸ್ತಾ , 2 ಅಂಜೂರ ತಗೊಂಡು ಅದಕ್ಕೆ 1 ಕಪ್ ನೀರು ಹಾಕಿ ಅರ್ಧ ಗಂಟೆ ನೆನಸಿಡಿ. ನಂತರ ನೀರಿಂದ ಡ್ರೈಫ್ರೂಟ್ಸ್ ತೆಗದು ಬದಾಮ್ ಹಾಗೂ ಪಿಸ್ತಾ ಸಿಪ್ಪೆ ತೆಗೆಯಿರಿ. ಇದಕ್ಕೆ 4-5 ಖರ್ಜುರ , ಸ್ವಲ್ಪ ಏಲಕ್ಕಿ ಪುಡಿ, 2 ಸ್ಪೂನ್ ಸಕ್ಕರೆ ಅಥವಾ ಜೇನುತುಪ್ಪಹಾಗೂ ಸ್ವಲ್ಪ ಹಾಲು ಹಾಕಿ ಬ್ಲೆಂಡರ್ ಅಥವಾ ಮಿಕ್ಸಿಲಿ ನುಣ್ಣಗೆ ರುಬ್ಬಿ. ನಂತರ ನಿಮ್ಗೆ ಬೇಕಾಗಿವಷ್ಟು ಹಾಲು ಹಾಕಿ ಬ್ಲೆಂಡ್ ಮಾಡಿ .
ಈ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಕುಡಿಯೋದ್ರಿಂದ ಮಕ್ಕಳ ಮಲಬದ್ಧತೆ ಸಮಸ್ಯೆ ದೂರ ಆಗೋದು ಅಲ್ಲದೆ ದೇಹದ ತೂಕ ಸಹ ಆರೋಗ್ಯಕರವಾಗಲಿ ಹೆಚ್ಚುತ್ತದೆ.
ಡ್ರೈ ಫ್ರೂಟ್ ಸೇವನೆಯಿಂದ ಮಕ್ಕಳ ಅರೋಗ್ಯ ಉತ್ತಮವಾಗುವುದರ ಜೊತೆಗೆ ಅವರು ಚುರುಕಾಗುತ್ತಾರೆ ಎಂದು ಹೇಳಲಾಗುತ್ತದೆ.
ಇದು ಮಕ್ಕಳಿಗೆ ತುಂಬಾನೇ ಪ್ರಯೋಜನಕಾರಿ. ನಿದ್ರಾಹೀನತೆ ಹಾಗೂ ನ್ಯೂಟ್ರಿಷನ್ ಕೊರತೆ ನೀಗಿಸೋಕೆ ಕೂಡ ಇದು ಸೂಕ್ತವಾಗಿದೆ.
ನೀವು ಮಕ್ಕಳಿಗೆ ಡ್ರೈ ಫ್ರೂಟ್ ಶೇಕ್ ನೀಡುವುದಾದರೆ ಪ್ರತಿದಿನ ನೀಡಬೇಡಿ, ಬದಲಾಗಿ ವಾರದಲ್ಲಿ ಎರಡು ಮೂರು ದಿನ ಈ ಮಿಲ್ಕ್ ಶೇಕ್ ನೀಡಿದರೆ ಸಾಕು. ಯಾಕೆಂದರೆ ಪ್ರತಿದಿನ ಹೆಚ್ಚು ಸಿಹಿ ಸೇವನೆ ಮಾಡಿದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಸ್ಟ್ರಾಬೆರಿ ಹಾಗೂ ಬನಾನಾ ಮಿಲ್ಕ್ ಶೇಕ್ : ಮೊದಲು ಸ್ಟ್ರಾಬೆರಿಗಳನ್ನು ತೊಳೆದು ಕಟ್ ಮಾಡಿ, ಬಾಳೆಹಣ್ಣು ಕೂಡ ಕಟ್ ಮಾಡ್ಕೊಳಿ . ಬ್ಲೆಂಡರ್ಗೆ 1 ಗ್ಲಾಸ್ ತಣ್ಣನೆಯ ಹಾಲು, ಕತ್ತರಿಸಿದ ಸ್ಟ್ರಾಬೆರಿ, ಬಾಳೆಹಣ್ಣು, 3 ಸ್ಪೂನ್ ಸಕ್ಕರೆ ಮತ್ತು ಬೇಕಾದಲ್ಲಿ ಐಸ್-ಕ್ಯೂಬ್ಗಳನ್ನು ಸೇರಿಸಿ ಬ್ಲೆಂಡ್ ಮಾಡಿದ್ರೆ ಸ್ಟ್ರಾಬೆರಿ ಹಾಗೂ ಬನಾನಾ ಮಿಲ್ಕ್ ಶೇಕ್ ರೆಡಿ. ಇದನ್ನ ತಕ್ಷಣ ಸರ್ವ್ ಮಾಡಿ.
ಸ್ಟ್ರಾಬೆರಿ ಹಾಗೂ ಬಾಳೆಹಣ್ಣು ಕಣ್ಣಿಗೆ ತುಂಬಾನೇ ಒಳ್ಳೆಯದು, ಹಾಗೆ ಇದು ಇಮ್ಮ್ಯೂನಿಟಿ ಬೂಸ್ಟರ್ ಹಾಗೂ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದನ್ನು ಕುಡಿದರೆ ಮಕ್ಕಳು ಚುರುಕಾಗುತ್ತಾರೆ ಎಂದು ಹೇಳಲಾಗುತ್ತದೆ.
ಇದರಲ್ಲಿ ಫೈಬರ್ ಮತ್ತು ಪ್ರೊಟೀನ್ ಇರುವುದರಿಂದ ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಇದು ,ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ
ಮಕ್ಕಳಿಗೆ ಇಷ್ಟ ಅಗೋ ಈ ಮಿಲ್ಕ್ ಶೇಕ್ ದೊಡ್ಡವರಿಗೂ ಕೂಡ ಹೆಲ್ತಿ. ನೀವು ಈ ರೆಸಿಪೀಗಳನ್ನೂ ಟ್ರೈ ಮಾಡಿ ನೋಡ್ತೀರಾ ಅಲ್ವಾ ??