ಏನೇನು ವಿಚಿತ್ರ ಆಹಾರ ತಿನ್ನುತ್ತಾರೆ ಜನ... ವೀರ್ಯ ಚೀಲವನ್ನು ಬಿಡಲ್ಲ!

First Published | Oct 16, 2020, 11:47 PM IST

ಪ್ರತಿ ವರ್ಷ ಅಕ್ಟೋಬರ್ 16 ರನ್ನು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನ, ಹಸಿವಿನಿಂದ ಬಳಲುತ್ತಿರುವ ಜನರಿಗೆ ಜಾಗೃತಿ ಹಾಗೂ  ಆಹಾರ ಸಂಬಂಧಿತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹೊಸರುಚಿಯ ಏನನ್ನಾದರೂ ತಿನ್ನಲು ಇಷ್ಟಪಡುವ ಆಹಾರ ಪ್ರಿಯರಿಗೇನು ಪ್ರಪಂಚದಲ್ಲಿ ಕಡಿಮೆ ಇಲ್ಲ.  ಆದರೆ ಜಗತ್ತಿನಲ್ಲಿ ಕೆಲವು ಭಕ್ಷ್ಯಗಳಿವೆ. ಅವುಗಳನ್ನು ತಿನ್ನುವುದು ಇರಲಿ, ನಾವು ನೋಡಲು ಸಹ ಇಷ್ಟಪಡುವುದಿಲ್ಲ ಅಷ್ಷು ಅಸಹ್ಯವಾಗಿವೆ. ಆದರೆ ಜನರು ಅವುಗಳನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಇವುಗಳಲ್ಲಿ ಹಾವಿನ ವೈನ್‌ನಿಂದ ಹಿಡಿದು ಪಕ್ಷಿಗಳ ಗೂಡಿನ ಸೂಪ್ ವರೆಗೆ ಎಲ್ಲವೂ ಸೇರಿವೆ. ಆಕ್ಟೋಪಸ್‌ನಿಂದ ಹಿಡಿದು ಹಾವಿನ ವಿಷದವರೆಗೆ ಈ ಅಸಹ್ಯಕರ ಡಿಶ್‌ಗಳನ್ನು ಬೇರೆ ದೇಶಗಳಲ್ಲಿ ಆಹಾರದ ಹೆಸರಿನಲ್ಲಿ ತಿನ್ನಲಾಗುತ್ತದೆ.

ಹಕ್ಕಿ ಗೂಡಿನ ಸೂಪ್:ಚೀನಾದಲ್ಲಿ ಪಕ್ಷಿಗಳ ಗೂಡಿನ ಸೂಪ್ ಸಖತ್‌ ಫೇಮಸ್‌. 'ಕವಿಯಾರ್' ಎಂದು ಕರೆಯಲಾಗುವ ಈ ಸೂಪ್ ತಯಾರಿಸಲು ಸ್ವಿಫ್ಟ್‌ನ ಗೂಡನ್ನು ಬಳಸಲಾಗುತ್ತದೆ.ಆದರೆ ಸ್ವಿಫ್ಲೆಟ್‌ಗಳು ತಮ್ಮ ಗೂಡುಗಳನ್ನು ಮುಖ್ಯವಾಗಿ ಎಂಜಲಿನಿಂದ ನಿರ್ಮಿಸುತ್ತವೆ. ಈ ಸೂಪ್‌ನಲ್ಲಿ ಪ್ರೋಟೀನ್ ಅಧಿಕವಾಗಿದೆ ಎಂದು ಚೈನೀಸ್ ಹೇಳುತ್ತಾರೆ. 1ಬೌಲ್ ಸೂಪ್ ಬೆಲೆ 5 ರಿಂದ 6 ಸಾವಿರ ರೂಪಾಯಿಗಳು.
ಸ್ಪೈಡರ್ ಡಂಪ್ಲಿಂಗ್:ಇವು ದೇಶೀಯ ಜೇಡಗಳಲ್ಲ, ಅಪಾಯಕಾರಿ ಟಾರಂಟುಲಾ ಜೇಡಗಳು. ಕಾಂಬೋಡಿಯಾದಲ್ಲಿ ಖಮೇರ್ ರೂಜ್ ಆಳ್ವಿಕೆಯಲ್ಲಿ, ಜನರು ಆಹಾರದ ಕೊರತೆಯಿಂದ ಇದನ್ನು ತಿನ್ನಲು ಪ್ರಾರಂಭಿಸಿದರು ಮತ್ತು ಕ್ರಮೇಣ ಅಲ್ಲಿ ಬಹಳ ಜನಪ್ರಿಯವಾದ ತಿಂಡಿಯಾಯಿತು.
Tap to resize

ಈ ಡಿಶ್‌ ನೋಡಿದರೆ ಹಾರ್ಟ್‌ ಆಟ್ಯಾಕ್‌ ಗ್ಯಾರಂಟಿ ಫಿಲಿಪೈನ್ಸ್‌ನಲ್ಲಿ, ಬಾತುಕೋಳಿ ಮರಿಗಳನ್ನು ಮೊಟ್ಟೆಯೊಳಗೆ ಸ್ವಲ್ಪ ಬೆಳೆಯಲು ಅವಕಾಶ ನೀಡಿ ಈ ಡಿಶ್‌ ತಯಾರಿಸುತ್ತಾರೆ. ಅಂದರೆ ಭ್ರೂಣ ಪೂರ್ತಿ ಬೆಳೆಯುವ ಮೊದಲು ಅದನ್ನು ಬೇಯಿಸಿ ತಿನ್ನಲಾಗುತ್ತದೆ. ಇದನ್ನು ಫಿಲಿಪೈನ್ಸ್‌ನಲ್ಲಿ ಬಿಯರ್‌ನೊಂದಿಗೆ ಸೇವಿಸುವ ಜನಪ್ರಿಯ ಸ್ಟ್ರೀಟ್‌ ಪುಡ್‌.
ಜೀವಂತ ಆಕ್ಟೋಪಸ್ :Sannakji ಆಕ್ಟೋಪಸ್ ಕೊರಿಯಾದಲ್ಲಿ ಹಸಿಯಾಗಿ ತಿನ್ನುತ್ತಾರೆ. ಆಕ್ಟೋಪಸ್ ಅನ್ನು ತುಂಡುಗಳಾಗಿ ಕತ್ತರಿಸಿ, ಎಳ್ಳಿನ ಎಣ್ಣೆಯಿಂದ ಲಘುವಾಗಿ ಬೇಯಿಸಿ ತಕ್ಷಣ ಬಡಿಸಲಾಗುತ್ತದೆ.
ಹಾವಿನ ವೈನ್ : ವಿಯೆಟ್ನಾಂನಿಂದ ಹಾವುಗಳಿಂದ ತಯಾರಿಸಿದ ವೈನ್ ಫೇಮಸ್‌. ತಿಂಗಳುಗಳ ಕಾಲ ಅಕ್ಕಿ ವೈನ್‌ ಜೊತೆ ವಿಷಕಾರಿ ಹಾವನ್ನು ಬಾಟಲಿಯಲ್ಲಿ ಹಾಕುವ ಮೂಲಕ ತಯಾರಿಸಲಾಗುತ್ತದೆ. ಹಾವಿನ ರಕ್ತದಿಂದಾಗಿ ಇದು ತಿಳಿ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಎಥೆನಾಲ್ ಹಾವಿನ ವಿಷವನ್ನು ತಟಸ್ಥಗೊಳಿಸುತ್ತದೆ. ಆದ್ದರಿಂದ ಇದು ಅಪಾಯಕಾರಿ ಅಲ್ಲ. ಇದು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ.
ಹ್ಯಾಗಿಸ್ :ಸ್ಕಾಟ್ಲೆಂಡ್‌ನ ಫೇವರೇಟ್ ಭಕ್ಷ್ಯಗಳಲ್ಲಿ ಒಂದಾಗಿದೆ. ಇದರಲ್ಲಿ, ಕುರಿಮರಿ ಹೃದಯ ಲೀವರ್‌, ಲಂಗ್ಸ್‌ ಜೊತೆ ಅನೇಕ ಮಸಾಲೆಗಳನ್ನು ಸೇರಿಸಿ ಅದರ ಹೊಟ್ಟೆಯೊಳಗೆ ಬೇಯಿಸಲಾಗುತ್ತದೆ.
ಬ್ಲಾಕ್‌ ಪುಡಿಂಗ್ : ಏಷ್ಯಾ, ಆಫ್ರಿಕಾ, ಅಮೆರಿಕ ಮತ್ತು ಯುರೋಪ್‌ನಲ್ಲಿ ರಕ್ತವನ್ನು ನೇರವಾಗಿ ಸೇವಿಸುವುದಿಲ್ಲ, ಆದರೆ ಇದನ್ನು ಸಿಹಿ ಖಾದ್ಯದಲ್ಲಿ ಸೇವಿಸಲಾಗುತ್ತದೆ. ಈ ಡಿಶ್‌ ಅನ್ನು ರಕ್ತ ಹೆಪ್ಪುಗಟ್ಟುಸಿ ಸಾಸೇಜ್ ಚರ್ಮದಲ್ಲಿ ವಿವಿಧ ಮಸಾಲೆಗಳು ಫ್ಲೇವರ್‌ಗಳೊಂದಿಗೆ ತುಂಬಿಸಲಾಗುತ್ತದೆ.
ಹೌಕಾ :ಮನು‍ಷ್ಯರನ್ನು ತಿನ್ನುವ ಶಾರ್ಕ್ ಮೀನುಗಳನ್ನು ಐಲ್ಯಾಂಡ್‌ನಲ್ಲಿ ಕೊಳೆಸಿ ತಿನ್ನಲು ಆದ್ಯತೆ ನೀಡಲಾಗುತ್ತದೆ. ​​ಐಲ್ಯಾಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಿನ್ನಲಾಗುವ ಶಾರ್ಕ್‌ಗಳು ಬಾಸ್ಕಿಂಗ್ ಶಾರ್ಕ್‌ಗಳು. ಇದನ್ನು ತಯಾರಿಸಲು ಹಲವಾರು ದಿನಗಳವರೆಗೆ ವಿಶೇಷವಾಗಿ ಫರ್ಮೇಂಟ್‌ ಮಾಡಲಾಗುತ್ತದೆ.
ಶಿರಾಕೊ:ಜಪಾನೀಸ್ ಭಾಷೆಯಲ್ಲಿ ಶಿರಾಕೊ ಎಂದರೆ 'ಬಿಳಿ ಮಗು'. ಮೂಲತಃ ಶಿರಾಕೊ ಮೀನಿನ 'ವೀರ್ಯ ಚೀಲ'ದ ಭಕ್ಷ್ಯ. ಬಿಳಿ ಬಣ್ಣದ ಬ್ರೈನ್‌ನಂತೆ ಕಾಣುವ ಇದು ಸಿಹಿ ಕಸ್ಟರ್ಡ್‌ನ ರುಚಿ ಹೊಂದಿರುತ್ತಾರೆ.
ಖಶ್ :ಭಾರತದಲ್ಲಿ ಗೋಮಾಂಸ ತಿನ್ನುವುದು ಅಷ್ಟು ಪ್ರಚಲಿತದಲ್ಲಿ ಇಲ್ಲ, ಆದರೆ ಇತರ ದೇಶಗಳಲ್ಲಿ ಇದನ್ನು ಜನ ಬಹಳ ಇಷ್ಟ ಪಡುತ್ತಾರೆ. ಖಶ್ ಹೆಸರಿನ ಈ ಸೂಪ್ ಮುಖ್ಯವಾಗಿ ಅರ್ಮೇನಿಯಾ, ಇರಾಕ್ ಮತ್ತು ಟರ್ಕಿಯಲ್ಲಿ ಫೇಮಸ್‌ . ಇದರಲ್ಲಿ, ಹಸುವಿನ ಗೊರಸು ಮತ್ತು ಮೆದುಳನ್ನು ಸುಮಾರು 32 ಗಂಟೆಗಳ ಕಾಲ ಅನೇಕ ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ. ಈ ಹೇವಿ ಆಹಾರವನ್ನು ಜನರು ಚಳಿಗಾಲದಲ್ಲಿ ಮಾತ್ರ ಇದನ್ನು ಕುಡಿಯುತ್ತಾರೆ. ಈ ಸೂಪ್‌ ಮದುವೆ-ಪಾರ್ಟಿಯಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.
ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ಕಂಡುಬರುವ ವಿಶೇಷ ರೀತಿಯ ಕೀಟಗಳನ್ನು ಅಲ್ಲಿ ಜನರು ತಿನ್ನಲು ಇಷ್ಟಪಡುತ್ತಾರೆ. ಇದನ್ನು ಹಸಿ ಮತ್ತು ಬೇಯಿಸಿ ಎರಡೂ ರೀತಿಯಲ್ಲಿ ತಿನ್ನಲಾಗುತ್ತದೆ.

Latest Videos

click me!