ಹಸಿ ಆಲೂಗಡ್ಡೆ, ಕ್ಯಾರೆಟ್
ಕೆಲವರು ಹಸಿ ಆಲೂಗಡ್ಡೆ ಅಥವಾ ಕ್ಯಾರೆಟ್‌ಗಳನ್ನ ಮಿಕ್ಸಿಲಿ ರುಬ್ಬ್ತಾರೆ. ಆದ್ರೆ ಇವುಗಳನ್ನ ಮಿಕ್ಸಿಲಿ ಹಾಕಿದ್ರೆ ಜಾರ್ ಬ್ಲೇಡ್ಸ್ ಹಾಳಾಗುತ್ತೆ. ಇವು ಗಟ್ಟಿಯಾಗಿರೋದ್ರಿಂದ ಮಿಕ್ಸರ್ ಹಾಳಾಗುತ್ತೆ. ಹಾಗಾಗಿ ಇವುಗಳನ್ನ ಮಿಕ್ಸಿಲಿ ಹಾಕಬೇಡಿ.
ಗಟ್ಟಿ ಖರ್ಜೂರ ಅಥವಾ ಒಣದ್ರಾಕ್ಷಿ
ಖರ್ಜೂರ, ಒಣದ್ರಾಕ್ಷಿ ಇತ್ಯಾದಿ ಗಟ್ಟಿ ಡ್ರೈ ಫ್ರೂಟ್ಸ್, ಜಿಗುಟಾದ ಪದಾರ್ಥಗಳನ್ನ ಮಿಕ್ಸಿಲಿ ರುಬ್ಬಬಾರದು. ಇವು ಮಿಕ್ಸರ್ ಜಾರ್‌ಅನ್ನು ಸುಲಭವಾಗಿ ಹಾಳು ಮಾಡುತ್ತೆ. ಯಾಕಂದ್ರೆ ಅವು ಬ್ಲೇಡ್ಸ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೆ. ಹಾಗಾಗಿ ಇವುಗಳನ್ನ ಮಿಕ್ಸಿಲಿ ರುಬ್ಬಬೇಡಿ.