ಚಿಕನ್-ಆಲೂಗಡ್ಡೆ:ಆಲೂಗಡ್ಡೆ ಕಾರ್ಬ್ ಹೊಂದಿದ್ದರೆ ಚಿಕನ್ ಪ್ರೋಟೀನ್ ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಎರಡನ್ನೂ ಒಟ್ಟಿಗೆ ಸೇವಿಸಿದಾಗ, ಹೊಟ್ಟೆಯಲ್ಲಿ ಗ್ಯಾಸ್ ಉತ್ತತ್ಪಿಯಾಗುತ್ತದೆ.
ಚಿಕನ್-ಹಣ್ಣು ಆಯುರ್ವೇದದ ಪ್ರಕಾರ, ಎಂದಿಗೂ ಕೋಳಿ ಮಾಂಸದ ಜೊತೆ ಹಣ್ಣು ತಿನ್ನಬಾರದು. ಈ ಎರಡನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ, ನಿಧಾನವಾಗಿಜೀರ್ಣ ಕ್ರಿಯೆಯೂ ಹಾಳಾಗುತ್ತದೆ. ಆದ್ದರಿಂದ, ಅವುಗಳನ್ನು ಒಟ್ಟಿಗೆ ತಿನ್ನಬೇಡಿ.
ಹಾಲು-ಕಲ್ಲಂಗಡಿ :ಜನರು ಹೆಚ್ಚಾಗಿ ಕಲ್ಲಂಗಡಿ ಮಿಲಕ್ಕ್ ಶೇಕ್ ಇಷ್ಟಪಡುತ್ತಾರೆ.ಆದರೆ ಇದು ಸಾಕಷ್ಟು ಅಪಾಯಕಾರಿ. ಹಾಲು ಜೀರ್ಣವಾಗಲುಸಮಯ ತೆಗೆದುಕೊಂಡರೆ, ಕಲ್ಲಂಗಡಿಯಲ್ಲಿನ ನೀರಿನಿಂದಾಗಿ ಅದು ಬೇಗಜೀರ್ಣವಾಗುತ್ತದೆ. ಅದ್ದರಿಂದ ಎರಡನ್ನೂ ಒಟ್ಟಿಗೆ ಸೇವಿಸಬಾರದು.
ಹಾಲು-ಮೀನು:ಹೆಚ್ಚು ವಿವಾದಿತ ಫುಡ್ ಕಾಂಬಿನೇಷನ್ ಆಗಿದೆ. ಅನೇಕ ಜನರು ಇದನ್ನು ವಿಷ ಎಂದು ಕರೆಯುತ್ತಾರೆ. ಹಲವರು ಇದನ್ನು ತಪ್ಪು ತಿಳುವಳಿಕೆ ಎನ್ನುತ್ತಾರೆ. ಆದರೆ ತಜ್ಞರ ಪ್ರಕಾರ, ಎರಡು ಒಟ್ಟಿಗೆ ತಿನ್ನುವುದರಿಂದ ಚರ್ಮದ ಸಮಸ್ಯೆಯನ್ನು ಪ್ರಚೋದಿಸುತ್ತದೆ. ಆದ್ದರಿಂದ, ಇದನ್ನು ತಪ್ಪಿಸಬೇಕು
ನಟ್ಸ್-ಚೀಸ್:ಅನೇಕ ಜನರು ಕೀಟೋ ಡಯಟ್ ಹೆಸರಿನಲ್ಲಿ ನಟ್ಸ್ ಜೊತೆ ಚೀಸ್ ತಿನ್ನುತ್ತಾರೆ. ಇದನ್ನು ಒಟ್ಟಿಗೆ ತಿನ್ನುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ.
ಮೂಲಂಗಿ-ಜೇನುತುಪ್ಪ:ಮೂಲಂಗಿಯೊಂದಿಗೆ ಜೇನುತುಪ್ಪವನ್ನು ಸೇವಿಸಿದರೆ, ದೇಹದಲ್ಲಿ ಟಾಕ್ಸಿನ್ಸ್‌ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಅಲ್ಲದೆ, ಈ ಕಾಂಬಿನೇಷನ್‌ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಅವುಗಳನ್ನು ಒಟ್ಟಿಗೆ ಅಥವಾಒಂದರ ನಂತರ ಇನ್ನೊಂದನ್ನು ತಿನ್ನುವ ತಪ್ಪು ಮಾಡಬೇಡಿ.