ಸ್ಟಾಕ್ ತಂದಿಡೋ ಅಕ್ಕಿಯಲ್ಲಿ ಹುಳು ಆಗ್ಬಾರ್ದು ಅಂದ್ರೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

Published : Jan 17, 2024, 09:29 AM IST

ಅಕ್ಕಿಯನ್ನು ಹಲವು ದಿನ ಶೇಖರಿಸಿಟ್ಟರೆ ಅದರಲ್ಲಿ ಹುಳು ಕಂಡು ಬರುತ್ತದೆ. ಆದರೆ ಕೆಲವೊಂದು ಸಿಂಪಲ್ ಟಿಪ್ಸ್ ಪಾಲಿಸಿದರೆ ಎಷ್ಟೇ ವರ್ಷವಾದರೂ ಮನೆಯಲ್ಲಿರುವ ಅನ್ನಕ್ಕೆ ಕ್ರಿಮಿಕೀಟಗಳ ಕಾಟ ಇರಲ್ಲ. ಅದಕ್ಕಾಗಿ ಏನು ಮಾಡಬೇಕು ತಿಳಿಯಿರಿ. 

PREV
17
ಸ್ಟಾಕ್ ತಂದಿಡೋ ಅಕ್ಕಿಯಲ್ಲಿ ಹುಳು ಆಗ್ಬಾರ್ದು ಅಂದ್ರೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಭಾರತದಲ್ಲಿ ಅನ್ನ ಜನಜೀವನದ  ದೈನಂದಿನ ಆಹಾರವಾಗಿದೆ. ಅದಕ್ಕಾಗಿಯೇ ಅನೇಕ ಜನರು ಒಂದೇ ಬಾರಿಗೆ ಸಾಕಷ್ಟು ಅಕ್ಕಿಯನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಆದರೆ ಹೀಗೆ ಮನೆಗೆ ತಂದಿಟ್ಟ ಹೆಚ್ಚಿನ ಪ್ರಮಾಣದ ಅಕ್ಕಿಯಲ್ಲಿ ಹಲವಾರು ಬಾರಿ ಹುಳುಗಳಾಗುವುದನ್ನು ನೋಡಬಹುದು. 

27

ಅನೇಕ ಜನರಿಗೆ ಅಕ್ಕಿಯನ್ನು ಸಂಗ್ರಹಿಸಲು ಸರಿಯಾದ ಮಾರ್ಗ ಯಾವುದೆಂದು ತಿಳಿದಿಲ್ಲ. ಹೀಗಾಗಿ ಅಕ್ಕಿಯಲ್ಲಿ ಹುಳುಗಳಾಗುತ್ತವೆ. ಪ್ರತಿದಿನ ಈ ಹುಳುಗಳನ್ನು ತೆಗೆದು ಕ್ಲೀನ್ ಮಾಡಿ ಬಳಸುವುದು ಕಷ್ಟ. ಹೀಗಾಗಿ ಒಂದಿಷ್ಟು ಟಿಪ್ಸ್ ಪಾಲಿಸಿದರೆ ಅಕ್ಕಿಗೆ ಕ್ರಿಮಿ ಕೀಟಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

37

ಬಿರಿಯಾನಿ ಎಲೆಗಳು
ಬಿರಿಯಾನಿ ಎಲೆಗಳನ್ನು ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಕ್ಕಿಯನ್ನು ಕೀಟಗಳಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ. ಮನೆಯಲ್ಲಿ ತಂದಿಟ್ಟಿರುವ ಅಕ್ಕಿಯಲ್ಲಿ ಹುಳುವಾಗಿದ್ದರೆ, ಆ ಡಬ್ಬಕ್ಕೆ ಸ್ವಲ್ಪ ಬಿರಿಯಾನಿ ಎಲೆಗಳನ್ನು ಹಾಕಿ. ಇದರಿಂದ ಹುಳು, ಅಕ್ಕಿಯಿಂದ ಸುಲಭವಾಗಿ ಬೇರೆಯಾಗುತ್ತದೆ. ಮಾತ್ರವಲ್ಲ ವರ್ಷವಿಡೀ ಅಕ್ಕಿಗೆ ಹುಳು ಸೇರೋ ಭಯವಿರೋದಿಲ್ಲ.

47

ಬೇವಿನ ಎಲೆಗಳು
ಬೇವಿನ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಕಹಿ ರುಚಿಯನ್ನು ಹೊಂದಿರುವ ಕೀಟಗಳಿಂದ ಅಕ್ಕಿಯನ್ನು ರಕ್ಷಿಸುವಲ್ಲಿ ಈ ಎಲೆಗಳು ಪರಿಣಾಮಕಾರಿ. ಇದಕ್ಕಾಗಿ ಬೇವಿನ ಸೊಪ್ಪನ್ನು ಹತ್ತಿ ಬಟ್ಟೆಯಲ್ಲಿ ಕಟ್ಟಿ ಅಕ್ಕಿಯಿರುವ ಪಾತ್ರೆಯಲ್ಲಿ ಹಾಕಬೇಕು. ಇದರಿಂದ ಅಕ್ಕಿಯಲ್ಲಿರುವ ಎಲ್ಲಾ ಕೀಟಗಳು ನಾಶವಾಗುತ್ತವೆ. 

57

ಬೆಂಕಿ ಕಡ್ಡಿಗಳು
ಅಕ್ಕಿಯನ್ನು ಹುಳುಗಳು ಮತ್ತು ಇತರ ಕೀಟಗಳಿಂದ ರಕ್ಷಿಸಲು ಬಯಸಿದರೆ.. ಅದನ್ನು ಸಂಗ್ರಹಿಸಿದ ಪಾತ್ರೆಯಲ್ಲಿ ಬೆಂಕಿಕಡ್ಡಿಗಳನ್ನು ಹಾಕುವುದು ಸಹ ಪ್ರಯೋಜನಕಾರಿಯಾಗಿದೆ.. ಇವುಗಳು ಅಕ್ಕಿಯ ಮೇಲೆ ಇರುವಂತೆ ನೋಡಿಕೊಳ್ಳಿ. ಇವುಗಳಿಂದಲೂ ಸಂಗ್ರಹಿಸಿಟ್ಟ ಅಕ್ಕಿಗೆ ಕೀಟಗಳು ಬರುವುದಿಲ್ಲ

67

ಲವಂಗ
ಲವಂಗವು ಅಕ್ಕಿಯಿಂದ ಹುಳುಗಳನ್ನು ಹೊರಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ಕೆಲವು ಲವಂಗಗಳನ್ನು ತೆಗೆದುಕೊಂಡು ಅಕ್ಕಿ ಇರುವ ಪಾತ್ರೆಗಳಲ್ಲಿ ಇರಿಸಿ. ಇದು ಕೀಟಗಳು ಮತ್ತು ಇರುವೆಗಳು ಬರದಂತೆ ತಡೆಯುತ್ತದೆ.
 

77

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಬಳಸುವುದರಿಂದ ಅಕ್ಕಿಯನ್ನು ಕೀಟಗಳಿಂದ ರಕ್ಷಿಸಬಹುದು. ಕತ್ತರಿಸಿದ ಬೆಳ್ಳುಳ್ಳಿಯನ್ನು ಅಕ್ಕಿಯ ಬಾಕ್ಸ್‌ನಲ್ಲಿ ಇರಿಸಿ. ಅದರ ಬಲವಾದ ವಾಸನೆಯಿಂದ ಕೀಟಗಳು, ಹುಳುಗಳು ಓಡಿಹೋಗುತ್ತವೆ.

Read more Photos on
click me!

Recommended Stories