ಬೆಂಗಳೂರಲ್ಲಿ ಬ್ರೇಕ್ ಫಾಸ್ಟ್ ಗೆ ಫೇಮಸ್ ಆಗಿರುವ ಹೊಟೇಲ್ ಗಳಲ್ಲಿ ಒಂದು ರಾಮೇಶ್ವರಂ ಕೆಫೆ. ಇಲ್ಲಿ ಸಿಗುವಂತಹ ಬಾಯಿ ಚಪ್ಪರಿಸುವಂತೆ ಮಾಡುವ ಆಹಾರಗಳೇ ಕೆಫೆಯನ್ನು ಜನಪ್ರಿಯಗೊಳಿಸಿದ್ದು, ಬನ್ನಿ ಅಲ್ಲಿ ಯಾವೆಲ್ಲಾ ಆಹಾರಗಳು ಫೇಮಸ್ ನೋಡೋಣ.
ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಫಾಸ್ಟೆಸ್ಟ್ ಸರ್ವೀಸ್ ನಿಂದಾಗಿ ಹೆಸರುವಾಸಿ. ಜೊತೆಗೆ ಇಲ್ಲಿ ಸಿಗುವಂತಹ ಬಾಯಲ್ಲಿ ನೀರೂರಿಸುವ ತಿಂಡಿಗಳು ಈ ಕೆಫೆಯನ್ನು ಮೂರು ವರ್ಷಗಳಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರುವಂತೆ ಮಾಡಿದೆ. ದಕ್ಷಿಣ ಭಾರತದ ಜನಪ್ರಿಯ ಸಸ್ಯಾಹರ ಸರ್ವ್ ಮಾಡುವ ಈ ಕೆಫೆಯ ಜನಪ್ರಿಯ ತಿನಿಸುಗಳು ಯಾವ್ಯಾವುವು ನೋಡೋಣ.
211
ತುಪ್ಪ ಪೊಡಿ ಇಡ್ಲಿ (Ghee Podi Idli)
ತುಪ್ಪ ಪೊಡಿ ಇಡ್ಲಿ ಒಂದು ಟೇಸ್ಟಿಯಾದ ಮತ್ತು ಫ್ಲೇವರ್ ಹೊಂದಿರುವ ಖಾದ್ಯವಾಗಿದ್ದು, ಇಲ್ಲಿ ಮೃದುವಾದ ಇಡ್ಲಿಗಳ ತುಪ್ಪ ಮತ್ತು ಉದ್ದಿನ ಬೇಳೆ, ಕಡಲೆ ಬೇಳೆ, ಎಳ್ಳು, ಕೆಂಪು ಮೆಣಸಿನಕಾಯಿ, ಇಂಗು ಮತ್ತು ಉಪ್ಪಿನಿಂದ ತಯಾರಿಸಿದ ಪೋಡಿ (ದಕ್ಷಿಣ ಭಾರತದ ಮಸಾಲೆ ಮಿಶ್ರಣ) ಯ ಮಸಾಲೆ ಮಿಶ್ರಣದೊಂದಿಗೆ ಸರ್ವ್ ಮಾಡ್ತಾರೆ. ಇದು ತಿಂದ್ರೆ ವಾವ್ ಅನ್ನೋದು ಗ್ಯಾರಂಟಿ.
311
ತುಪ್ಪ ಪೊಡಿ ದೋಸೆ (Ghee Podi Masala Dosa)
ಇಲ್ಲಿನ ತುಪ್ಪ ಪೊಡಿ ದೋಸೆ ನೀವು ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನಿಸೋದು ಖಂಡಿತಾ. ಅಷ್ಟೊಂದು ರುಚಿಯಾಗಿದೆ ಈ ದೋಸೆ. ಈ ಕ್ರಿಸ್ಪಿ ದೋಸೆಯ ಮಧ್ಯಭಾಗದಲ್ಲಿ ಆಲೂಗಡ್ಡೆ ಭಾಜಿಯ ಬದಲು ತುಪ್ಪ ಪೊಡಿ ಹಾಕ್ತಾರೆ. ಇದು ತುಂಬಾನೆ ಟೇಸ್ಟಿಯಾಗಿರುತ್ತೆ.
411
ತುಪ್ಪ ತಟ್ಟೆ ಇಡ್ಲಿ (Ghee Thatte Idli)
ತಟ್ಟೆ ಇಡ್ಲಿ ದಕ್ಷಿಣ ಭಾರತದ ಒಂದು ಜನಪ್ರಿಯ ತಿಂಡಿ. ಅದರಲ್ಲೂ ಕರ್ನಾಟಕದಲ್ಲಿ ಇದು ಫೇಮಸ್. ಇದರ ಅಗಲವಾದ ತಟ್ಟೆಯ ಆಕಾರದಿಂದಾಗಿ ಇದನ್ನು ತಟ್ಟೆ ಇಡ್ಲಿ ಎನ್ನಲಾಗುತ್ತೆ. ರಾಮೇಶ್ವರಂ ಕೆಫೆಯ ತಟ್ಟೆ ಇಡ್ಲಿ ಬೆಸ್ಟ್ ತಿಂಡಿ ಎನ್ನಬಹುದು.
511
ಗೊಂಗುರ ರೈಸ್ (Gongura Rice)
ಗೊಂಗುರಾ ರೈಸ್ ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದ ಜನಪ್ರಿಯ ಮತ್ತು ರುಚಿಕರ ಅಕ್ಕಿ ಖಾದ್ಯ. ಇದನ್ನು ಗೊಂಗುರಾ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ, ಇದನ್ನು ಸೋರೆಲ್ ಎಲೆಗಳು ಅಥವಾ ರೋಸೆಲ್ ಎಲೆಗಳು ಎಂದೂ ಕರೆಯಲಾಗುತ್ತದೆ, ಇದು ಆಹಾರಕ್ಕೆ ಹುಳಿ ರುಚಿಯನ್ನು ನೀಡುತ್ತದೆ.
611
ಅಕ್ಕಿ ರೊಟ್ಟಿ (Akki Roti)
ಅಕ್ಕಿ ರೊಟ್ಟಿ ಅಕ್ಕಿ ಹಿಟ್ಟು, ನೀರು, ಉಪ್ಪು, ಈರುಳ್ಳಿ, ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಮತ್ತು ಜೀರಿಗೆ ಬೀಜಗಳಿಂದ ತಯಾರಿಸಿದ ಸಾಂಪ್ರದಾಯಿಕ ದಕ್ಷಿಣ ಭಾರತದ ಜನಪ್ರಿಯ ರೊಟ್ಟಿಯಾಗಿದೆ.
711
ಓಪನ್ ಬೆಣ್ಣೆ ಮಸಾಲೆ ದೋಸೆ (Open Butter Masala Dosa)
ಇದು ಸಹ ಮಸಾಲೆ ದೋಸೆಯಂತೆ ದಕ್ಷಿಣ ಭಾರತದ ಜನಪ್ರಿಯ ಜೊತೆಗೆ ಟೇಸ್ಟಿಯಾದ ದೋಸೆಯಾಗಿದೆ. ಇದರ ಮೇಲೆ ಸಾಕಷ್ಟು ಬೆಣ್ಣೆಯನ್ನು ಹಾಕಲಾಗುತ್ತೆ. ಈ ದೋಸೆಯನ್ನು ಮಡಚದೆ ಓಪನ್ ಆಗಿ ಸರ್ವ್ ಮಾಡಲಾಗುತ್ತೆ.
811
ವೆಜ್ ಪೊಂಗಲ್ (Veg Pongal)
ವೆಜ್ ಪೊಂಗಲ್ ಒಂದು ರುಚಿಕರವಾದ ದಕ್ಷಿಣ ಭಾರತದ ಖಾದ್ಯ, ಇದನ್ನು ಮುಖ್ಯವಾಗಿ ಅಕ್ಕಿ ಮತ್ತು ಬೇಳೆಕಾಳುಗಳಿಂದ ತಯಾರಿಸಲಾಗುತ್ತದೆ, ಮಸಾಲೆಗಳು ಮತ್ತು ಕೆಲವೊಮ್ಮೆ ತರಕಾರಿಗಳೊಂದಿಗೆ ಮಸಾಲೆಗಳೊಂದಿಗೆ ಮಾಡಲಾಗುತ್ತದೆ. ಇದು ದಕ್ಷಿಣ ಭಾರತದಲ್ಲಿ ಜನಪ್ರಿಯ ಆಹಾರ, ಇದನ್ನು ಹೆಚ್ಚಾಗಿ ಉಪಾಹಾರಕ್ಕಾಗಿ ಅಥವಾ ಆರೋಗ್ಯಕರ ಊಟವಾಗಿ ಸೇವಿಸಲಾಗುತ್ತೆ.
911
ತುಪ್ಪ ಸಾಂಬಾರ್ ಬಟನ್ ಇಡ್ಲಿ (Ghee Sambar Button Idli)
ಇದು ಒಂದು ಪ್ಲೇಟ್ ಊಟವಾಗಿದ್ದು, ಮಸಾಲೆಯುಕ್ತ ಸಾಂಬಾರ್ನಲ್ಲಿ ಮುಳುಗಿಸಿದ ಮಿನಿ ಇಡ್ಲಿಗಳನ್ನು ಒಳಗೊಂಡಿದೆ ಮತ್ತು ಅದರ ಮೇಲೆ ತುಪ್ಪವನ್ನು ಬಡಿಸಲಾಗುತ್ತದೆ. ಇದು ಇಲ್ಲಿನ ಜನಪ್ರಿಯ ತಿನಿಸು ಆಗಿದೆ.
1011
ವಡೆ (Vada)
ವಡಾ ಡೀಪ್ ಫ್ರೈಡ್ ತಿಂಡಿಯಾಗಿದ್ದು, ಇದನ್ನು ಹೆಚ್ಚಾಗಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಲಾಗುತ್ತದೆ. ಮೆದು ವಡಾ ಅತ್ಯಂತ ಜನಪ್ರಿಯವಾಗಿದೆ ಮತ್ತು ಇದನ್ನು ಉದ್ದಿನ ಬೇಳೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಹೊರಗೆ ಗರಿಗರಿಯಾಗಿದ್ದು, ಒಳಗೆ ತುಂಬಾನೆ ಮೃದುವಾಗಿರುತ್ತೆ.
1111
ಫಿಲ್ಟರ್ ಕಾಫಿ (Filter coffee)
ಹಾಲು, ಸಕ್ಕರೆ ಮತ್ತು ನುಣ್ಣಗೆ ಪುಡಿಮಾಡಿದ ಕಾಫಿ ಪುಡಿಯಿಂದ ತಯಾರಿಸಿದ ಬಿಸಿ ಕಾಫಿಯನ್ನು ಸಾಂಪ್ರದಾಯಿಕವಾಗಿ ಲೋಟ ಮತ್ತು ದಾಬ್ರಾದಲ್ಲಿ ಬಡಿಸಲಾಗುತ್ತದೆ, ಇದು ಸಣ್ಣ ಲೋಹದ ಕಪ್ ಮತ್ತು ಸಾಸರ್ ಅನ್ನು ಒಳಗೊಂಡಿದ್ದು, ಬೆಳಗ್ಗಿನ ತಿಂಡಿ ಜೊತೆ ಇದನ್ನು ಕುಡಿಯೋ ಮಜಾನೆ ಬೇರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.