ವಾಸ್ತುಗೋಸ್ಕರ ಅಲ್ಲ, ಮಳೆಗಾಲದಲ್ಲಿ ಫ್ರಿಡ್ಜ್‌ನಲ್ಲಿ ಒಂದು ಬಟ್ಟಲು ಉಪ್ಪನ್ನು ಏಕಿಡಬೇಕು ಗೊತ್ತಾ?

Published : Jul 03, 2026, 04:12 PM IST

Salt in fridge benefits: ಫ್ರಿಡ್ಜ್‌ನಲ್ಲಿ ಒಂದು ಬಟ್ಟಲು ಕಲ್ಲು ಉಪ್ಪನ್ನು ಇಡುವುದರಿಂದ ವಾತಾವರಣದಲ್ಲಿನ ತೇವಾಂಶವನ್ನು ಹೇಗೆ ನಿಯಂತ್ರಿಸಬಹುದು ಮತ್ತು ನಿಮ್ಮ ಆಹಾರ ಪದಾರ್ಥಗಳನ್ನು ದೀರ್ಘಕಾಲ ತಾಜಾವಾಗಿಡುವುದು ಹೇಗೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

PREV
16
ಏನೆಲ್ಲಾ ಲಾಭಗಳಿವೆ?

ಏನೆಲ್ಲಾ ಲಾಭಗಳಿವೆ?
ಮಳೆಗಾಲ ಬಂತೆಂದರೆ ವಾತಾವರಣದಲ್ಲಿ ತೇವಾಂಶ (Moisture) ಹೆಚ್ಚಾಗುತ್ತದೆ. ಈ ತೇವಾಂಶದ ಪ್ರಭಾವ ನಮ್ಮ ಮನೆಯ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ, ಅದರಲ್ಲೂ ಮುಖ್ಯವಾಗಿ ಫ್ರಿಡ್ಜ್ ಮೇಲೆ ಬೀರುತ್ತದೆ. ಮಳೆಗಾಲದಲ್ಲಿ ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರುವುದು, ತರಕಾರಿಗಳು ಮತ್ತು ಹಣ್ಣುಗಳು ಬೇಗನೆ ಕೊಳೆಯುವುದು ಸಾಮಾನ್ಯ ಸಮಸ್ಯೆ. ಈ ಎಲ್ಲಾ ತೊಂದರೆಗಳಿಗೆ ಅತಿ ಕಡಿಮೆ ಖರ್ಚಿನ ಮತ್ತು ಸುಲಭದ ಪರಿಹಾರವೆಂದರೆ ಅದು 'ಒಂದು ಬಟ್ಟಲು ಉಪ್ಪು'. ಫ್ರಿಡ್ಜ್‌ನಲ್ಲಿ ಉಪ್ಪು ಇಡುವುದರಿಂದ ಏನೆಲ್ಲಾ ಲಾಭಗಳಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ.

26
ಫ್ರಿಡ್ಜ್‌ನಲ್ಲಿ ಉಪ್ಪು ಇಡುವುದರಿಂದಾಗುವ ಪ್ರಯೋಜನಗಳು

ಫ್ರಿಡ್ಜ್‌ನಲ್ಲಿ ಉಪ್ಪು ಇಡುವುದರಿಂದಾಗುವ ಪ್ರಯೋಜನಗಳು
ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತೆ
ಉಪ್ಪಿಗೆ ಗಾಳಿಯಲ್ಲಿರುವ ತೇವಾಂಶವನ್ನು ಆಕರ್ಷಿಸುವ ನೈಸರ್ಗಿಕ ಗುಣವಿದೆ. ಮಳೆಗಾಲದಲ್ಲಿ ಫ್ರಿಡ್ಜ್‌ನೊಳಗೆ ತೇವಾಂಶ ಹೆಚ್ಚಾದಾಗ ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಒಂದು ಸಣ್ಣ ಬಟ್ಟಲಿನಲ್ಲಿ ಉಪ್ಪನ್ನು ಇಟ್ಟರೆ, ಅದು ಫ್ರಿಡ್ಜ್‌ನೊಳಗಿನ ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ಒಳಗಿನ ವಾತಾವರಣವನ್ನು ಸಮತೋಲನದಲ್ಲಿಡುತ್ತದೆ.

36
ತರಕಾರಿ ಮತ್ತು ಹಣ್ಣುಗಳ ತಾಜಾತನ

ತರಕಾರಿ ಮತ್ತು ಹಣ್ಣುಗಳ ತಾಜಾತನ
ಫ್ರಿಡ್ಜ್‌ನಲ್ಲಿ ತೇವಾಂಶ ಹೆಚ್ಚಾದಷ್ಟೂ ಸೊಪ್ಪು, ತರಕಾರಿ ಮತ್ತು ಹಣ್ಣುಗಳು ಬೇಗನೆ ಮೆತ್ತಗಾಗಿ ಕೊಳೆಯಲು ಶುರುವಾಗುತ್ತವೆ. ಉಪ್ಪು ತೇವಾಂಶವನ್ನು ನಿಯಂತ್ರಿಸುವುದರಿಂದ, ಇವುಗಳು ದೀರ್ಘಕಾಲದವರೆಗೆ ತಾಜಾವಾಗಿರಲು ಸಹಾಯ ಮಾಡುತ್ತದೆ.

46
ದುರ್ವಾಸನೆ ನಿವಾರಣೆ

ದುರ್ವಾಸನೆ ನಿವಾರಣೆ
ಫ್ರಿಡ್ಜ್‌ನಲ್ಲಿ ಅಡುಗೆ ಅಥವಾ ಇತರ ಪದಾರ್ಥಗಳನ್ನು ಇಟ್ಟಾಗ ಕೆಲವೊಮ್ಮೆ ವಿಚಿತ್ರವಾದ ವಾಸನೆ ಬರುತ್ತದೆ. ಉಪ್ಪು ತೇವಾಂಶದೊಂದಿಗೆ ಅಂತಹ ವಾಸನೆಗಳನ್ನೂ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಹೊಂದಿದೆ. ಇದರಿಂದ ಫ್ರಿಡ್ಜ್ ತೆರೆದಾಗಲೆಲ್ಲಾ ಕೆಟ್ಟ ವಾಸನೆ ಬರುವುದು ಕಡಿಮೆಯಾಗುತ್ತದೆ.

56
ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ತಡೆ

ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ತಡೆ
ಜೇನುಗೂಡಿನಂತೆ ತೇವಾಂಶವಿರುವ ಜಾಗಗಳಲ್ಲಿ ಬ್ಯಾಕ್ಟೀರಿಯಾಗಳು ಬೇಗನೆ ಹರಡುತ್ತವೆ. ಉಪ್ಪು ತೇವಾಂಶವನ್ನು ಕಡಿಮೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಬೆಳೆಯಲು ಪೂರಕವಾದ ವಾತಾವರಣ ಇರುವುದಿಲ್ಲ. ಇದರಿಂದ ನಿಮ್ಮ ಆಹಾರ ಹೆಚ್ಚು ಸುರಕ್ಷಿತವಾಗಿರುತ್ತದೆ.

66
ಫ್ರಿಡ್ಜ್‌ನಲ್ಲಿ ಉಪ್ಪನ್ನು ಹೇಗೆ ಇಡಬೇಕು?

ಫ್ರಿಡ್ಜ್‌ನಲ್ಲಿ ಉಪ್ಪನ್ನು ಹೇಗೆ ಇಡಬೇಕು?
*ಒಂದು ಸಣ್ಣ ಬಟ್ಟಲು ಅಥವಾ ಮುಚ್ಚಳವಿಲ್ಲದ ಪಾತ್ರೆಯನ್ನು ತೆಗೆದುಕೊಳ್ಳಿ.
*ಅದರಲ್ಲಿ ಸುಮಾರು 100 ರಿಂದ 150 ಗ್ರಾಂ ಅಥವಾ 3 ರಿಂದ 4 ಚಮಚ ಉಪ್ಪನ್ನು ಹಾಕಿ.
*ಅದನ್ನು ಫ್ರಿಡ್ಜ್‌ನ ಒಂದು ಮೂಲೆಯಲ್ಲಿ (ಬಾಗಿಲಲ್ಲಿ ಅಥವಾ ಶೆಲ್ಫ್‌ನಲ್ಲಿ) ಇಡಿ.
*ಸಾಮಾನ್ಯ ಪುಡಿ ಉಪ್ಪಿಗಿಂತ ಕಲ್ಲು ಉಪ್ಪು (Rock Salt) ಬಳಸಿದರೆ ಹೆಚ್ಚು ಪರಿಣಾಮಕಾರಿ.

ಪ್ರತಿ 15 ರಿಂದ 20 ದಿನಕ್ಕೊಮ್ಮೆ ಆ ಉಪ್ಪನ್ನು ಬದಲಾಯಿಸಿ. (ಆ ಉಪ್ಪು ತೇವಾಂಶ ಹೀರಿಕೊಂಡು ಗಟ್ಟಿಯಾದಾಗ ಅಥವಾ ಕರಗಿದಾಗ ಬದಲಿಸುವುದು ಉತ್ತಮ).

ಸೂಚನೆ: ಒಂದು ವೇಳೆ ಮನೆಯಲ್ಲಿ ಉಪ್ಪು ಇಲ್ಲದಿದ್ದರೆ ಬೇಕಿಂಗ್ ಸೋಡಾವನ್ನು ಕೂಡ ಇದೇ ರೀತಿ ಬಳಸಬಹುದು. ಬೇಕಿಂಗ್ ಸೋಡಾ ಕೂಡ ದುರ್ವಾಸನೆ ಹೋಗಲಾಡಿಸಲು ಉತ್ತಮವಾಗಿ ಕೆಲಸ ಮಾಡುತ್ತದೆ.  

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories